ಬೆಳಗಾವಿ
ಶ್ರೀ ನಾಗನೂರು ರುದ್ರಾಕ್ಷಿ ಮಠದ ವಿಜ್ಞಾನ ಕಾಲೇಜಿನ ಸಭಾಭವನದಲ್ಲಿ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ, ರವಿವಾರ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ 16ನೇ ಮಾಸಿಕ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶಿವಯೋಗ ಕಾರ್ಯಕ್ರಮ ನಡೆಯಿತು.

ಬೆಳಗಾವಿ ಸಂಚಾರಿ ಗುರುಬಸವ ಬಳಗದ ಅಧ್ಯಕ್ಷ ಮಹಾಂತೇಶ ತೋರಣಗಟ್ಟಿ ಹಾಗೂ ಶರಣ ರಾಜಶೇಖರ ಪಾಟೀಲ ಪೂಜೆ ಹಾಗೂ ದೀಕ್ಷೆಯ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು.

ಇದೇ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಶರಣ ಬಸವರಾಜ ರೊಟ್ಟಿ, ಕಾರ್ಯದರ್ಶಿಗಳಾದ ಅಶೋಕ ಮಳಗಲಿ ಅವರು ಯುರೋಪಿನಲ್ಲಿ 11 ದಿನಗಳ ಕಾಲ ”ಭಾರತ ವಚನ ಸಂಸ್ಕೃತಿ ಯಾತ್ರೆ”ಯನ್ನು ಯಶಸ್ವಿಯಾಗಿ ಮುಗಿಸಿ ಬಂದಿದ್ದರಿಂದ ಅವರಿಗೆ ಬಸವ ಭಕ್ತರ ಪರವಾಗಿ ಸನ್ಮಾನಿಸಲಾಯಿತು.

ಶರಣರಾದ ವಿ.ಕೆ. ಪಾಟೀಲ ಮತ್ತು ಕಲಾ ಶಿಕ್ಷಕರಾದ ಸೋಮಣ್ಣವರ ಹಾಗೂ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.