ಜಿಲ್ಲಾ ವಚನ ಕಂಠಪಾಠ ಸ್ಪರ್ಧೆ: ಶ್ರೇಯಸ್ ಪ್ರಥಮ, ವಿದ್ಯಾ ದ್ವಿತೀಯ, ರಾಜೇಶ್ವರಿ ತೃತೀಯ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಇತ್ತೀಚೆಗೆ ಸಂಚಾರಿ ಗುರು ಬಸವ ಬಳಗ ಬೆಳಗಾವಿ ವತಿಯಿಂದ ಬೆಳಗಾವಿ ಶೈಕ್ಷಣಿಕ ಜಿಲ್ಲಾ ಮಟ್ಟದ ಗುರು ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆಯು ಮಹಾಂತೇಶ ನಗರದ ರಹವಾಸಿಗಳ ಸಂಘದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬೆಳಗಾವಿಯಲ್ಲಿ ಜರುಗಿತು.

ಒಟ್ಟು ಹದಿನೇಳು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಕು. ಶ್ರೇಯಸ್ ಕುರಗುಂದಿ (221 ವಚನ), ದ್ವಿತೀಯ ಸ್ಥಾನವನ್ನು ವಿದ್ಯಾ ಗೌಡರ (199 ವಚನ), ತೃತೀಯ ಸ್ಥಾನವನ್ನು ರಾಜೇಶ್ವರಿ ದೇಯನ್ನವರ (181 ವಚನ) ಪಡೆದುಕೊಂಡರು. ಐದು ಸ್ಪರ್ಧಾರ್ಥಿಗಳಿಗೆ ಶರಣ ಎಂ. ಎಂ. ಬಾಳಿ ಅವರಿಂದ ಸಮಾಧಾನಕರ ಬಹುಮಾನಗಳನ್ನು ಪಡೆದರು. ಭಾಗಿಯಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಬಳಗದ ಸಂಚಾಲಕರಾದ ಮಹಾಂತೇಶ ತೋರಣಗಟ್ಟಿ ಮಾತನಾಡಿ, ವಚನಗಳು ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪಗಳಾಗಿವೆ ಎಂದು ಹೇಳಿದರು. ಶಿಕ್ಷಕರಾದ ಐ.ಎಂ. ಮುಲ್ಲಾ ಮಾತನಾಡಿ ಸಮಸಮಾಜದ ನಿರ್ಮಾಣಕ್ಕೆ ವಚನಗಳ ಕೊಡುಗೆ ಅಪಾರ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಹಾಂತೇಶ ನಗರದ ರಹವಾಸಿಗಳ ಸಂಘದ ಕಾರ್ಯದರ್ಶಿಗಳಾದ ಸಂಜು ಪಟ್ಟಣಶೆಟ್ಟಿ, ಪ್ರಾಂಶುಪಾಲರಾದ ಈರಗಾರ , ಶರಣರಾದ ಬಿ.ಡಿ. ಪಾಟೀಲ, ಎಂ.ಎಂ. ಬಾಳಿ, ಈರಣ್ಣ ಕೊಪ್ಪದ, ಸಿ. ಎಂ. ಬೂದಿಹಾಳ ಭಾಗವಹಿಸಿದ್ದರು.

ವಚನ ಪ್ರಾರ್ಥನೆಯನ್ನು ಮಹದಾನಂದ ಪರುಶೆಟ್ಟಿ ನೆರವೇರಿಸಿದರು. ಸ್ವಾಗತವನ್ನು ಉಪನ್ಯಾಸಕರಾದ ಅ. ಬ. ಇಟಗಿ ಮಾಡಿದರು. ಶಿಕ್ಷಕರಾದ ಶಿವಾನಂದ ಲಾಳಸಂಗಿ ಅವರು ಕಾರ್ಯಕ್ರಮ ನಿರೂಪಿಸಿ ವ್ಯವಸ್ಥಿತವಾಗಿ ನಿರ್ವಹಿಸಿದರು. ಶರಣು ಸಮರ್ಪಣೆಯನ್ನು ವಕೀಲರಾದ ಬಿ. ಪಿ. ಜೇವಣಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಂಚಾರಿ ಗುರು ಬಸವ ಬಳಗದ ಸರ್ವ ಸದಸ್ಯರು, ನಿರ್ಣಾಯಕರು, ಮಕ್ಕಳು, ಯುವಕ ಯುವತಿಯರು, ಪಾಲಕರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *