ಬೆಂಗಳೂರು:
ಮಹಾನಗರ ಹೆಸರಘಟ್ಟ ಮುಖ್ಯ ರಸ್ತೆಯ ಎನ್ಎಂಎಚ್ ಬಡಾವಣೆಯ ಬಸವ ಧ್ಯಾನ ಸೆಂಟರನಲ್ಲಿ ಡಿಸೆಂಬರ್ 14ರಂದು ಬೆಳಿಗ್ಗೆ 10 ಗಂಟೆಗೆ ‘ಬಸವ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಧಾರವಾಡ ಮನಗುಂಡಿಯ ಪೂಜ್ಯ ಬಸವಾನಂದ ಸ್ವಾಮೀಜಿ ವಹಿಸುವರು. ನೇತೃತ್ವವನ್ನು ಪೂಜ್ಯ ಓಂಕಾರೇಶ್ವರಿ ಅಕ್ಕ ವಹಿಸಲಿದ್ದು, ದಾಸರಹಳ್ಳಿ ಕ್ಷೇತ್ರದ ಶಾಸಕ ಎಚ್. ಮುನಿರಾಜು ಉದ್ಘಾಟನೆ ಮಾಡುವರು. ವೀರಶೈವ ಅಭಿವೃದ್ಧಿ ಸಮಿತಿ, ಅಬ್ಬಿಗೆರೆ ಅಧ್ಯಕ್ಷರಾದ ಜಿ. ರಾಜೇಂದ್ರ ಅವರು ಅಧ್ಯಕ್ಷತೆ ವಹಿಸುವರು. ತುಮಕೂರಿನ ಡಾ. ವಿಜಯಕುಮಾರ ಕಮ್ಮಾರ ಅವರಿಂದ ಅನುಭಾವ ಜರುಗಲಿದೆ. ಸರ್ವರಿಗೂ ಸ್ವಾಗತ ಕೋರಲಾಗಿದೆ.

