ಬೆಂಗಳೂರು
ಬರುವ ಗ್ರೇಟರ್ ಬೆಂಗಳೂರು ಚುನಾವಣೆಯಲ್ಲಿ ಲಿಂಗಾಯತರಿಗೆ ಹೆಚ್ಚು ಟಿಕೆಟ್ ಕೊಡಲು ಆಗ್ರಹ ಮಾಡಲಾಗಿದೆ.
“ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಾರ್ಟಿ ಮುಂತಾದ ಪಕ್ಷಗಳು ವೀರಶೈವ ಲಿಂಗಾಯಿತರಿಗೆ ಕನಿಷ್ಠ 100 ಟಿಕೆಟ್ ಕಡ್ಡಾಯವಾಗಿ ನೀಡಬೇಕು” ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯದ್ಯಕ್ಷ ಮೋಹನಕುಮಾರ ಬಸವರಾಜ ಒತ್ತಾಯ ಮಾಡಿದ್ದಾರೆ.
“ಲಿಂಗಾಯತರು ಬೆಂಗಳೂರಿನಲ್ಲಿ ಶೇಕಡಾ 10 %ಕ್ಕಿಂತಲೂ ಹೆಚ್ಚಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಉಳ್ಳಂತಹ ಹಾಗೂ ಎಲ್ಲಾ ಪಕ್ಷದಲ್ಲೂ ಇರುವ ಸಮುದಾಯದ ಜನಪ್ರತಿನಿಧಿಗಳ ಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡಬೇಕು. 2015ರ ಬೆಂಗಳೂರು ಪಾಲಿಕೆ ಚುನಾವಣೆಯಲ್ಲಿ ವೀರಶೈವ ಲಿಂಗಾಯತರಿಗೆ ಸಿಕ್ಕ ಟಿಕೆಟ್ ಕೇವಲ ಬೆರಳೆಣಿಕೆಯಷ್ಟು. ಈ ಅನ್ಯಾಯ ಸರಿ ಪಡಿಸಬೇಕು,” ಎಂದು ಮೋಹನಕುಮಾರ ಹೇಳಿದ್ದಾರೆ.

ಲಿಂಗಾಯತರಿಗೆ ಟಿಕೆಟ್ ಕೊಡಿರಿ ಅಂತ ಅಂಗಲಾ ಚುವಸ್ಟೂ ದಯನೀಯ ಪರಿಸ್ಥಿತಿ ಲಿಂಗಾಯತರಿಗೆ ಬರುವುದು ಒಳ್ಳೆಯ ಲಕ್ಷಣ ಅಲ್ಲ.
ಯಾವುದೇ ಪಕ್ಷದ ಟಿಕೆಟ್ ಕೇಳುವುದು, ಒಂದು ಪಕ್ಷಕ್ಕೆ ಬೆಂಬಲ ಮಾಡುವುದು ಬೇಡ.
ಎಲ್ಲ 234 ಕ್ಷೇತ್ರಗಳಿಗೆ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿ. ಎಲ್ಲ ಲಿಂಗಾಯತರು ಲಿಂಗಾಯತ ಅಭ್ಯರ್ಥಿಗೆ ವೋಟ್ ಹಾಕಲಿ.
ಆರಿಸಿ ಬರುವುದು ಬೇಕಾಗಿಲ್ಲ, ಆದರೆ ಲಿಂಗಾಯತರ ಮಹತ್ವ ಸಾರಬೇಕು, ಅದಕ್ಕೆ ಸ್ವತಂತ್ರವಾಗಿ ಚುನಾವಣೆ ಎದುರಿಸಲಿ.
ಒಂದು ಟಿಕೆಟ್ ಪಡೆದು ಹತ್ತು ಕಡೆ ಆ ಪಕ್ಷದ ನಾಯಕರು ಹೇಳಿದ ಕಡೆ ವೋಟ್ ಹಾಕುವುದು ಬೇಡ.