ಬೆಂಗಳೂರಿನಲ್ಲಿ 1,122 ಗಾಯಕರಿಂದ ವಚನಗಾನ ವೈಭವ ಕಾರ್ಯಕ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ರಂಗಸಂಸ್ಥಾನ ಸಂಸ್ಥೆಯು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಶುಕ್ರವಾರ ಸಂಜೆ 5-30ಕ್ಕೆ, 1,122 ಗಾಯಕರಿಂದ ವಚನ ಗಾಯನ ವೈಭವ ಬೃಹತ್ ಕಾರ್ಯಕ್ರಮ ಏರ್ಪಡಿಸಿದೆ.

12ನೇ ಶತಮಾನದಿಂದ ಈವರೆಗಿನ ವಚನಗಳು ಸಹಸ್ರ ಕಂಠದಲ್ಲಿ ಗಾಯನ ರೂಪದಲ್ಲಿ ಹೊಮ್ಮಲಿದೆ. ಒಂದೇ ವೇದಿಕೆಯಲ್ಲಿ 1,122 ಗಾಯಕರು ಹಾಡಲಿದ್ದಾರೆ. ಈ ಕಾರ್ಯಕ್ರಮ ಬಂಡ್ಲಹಳ್ಳಿ ವಿಜಯಕುಮಾ‌ರ ಅವರ ನಿರ್ದೇಶನದಲ್ಲಿ ನಡೆಯಲಿದೆ.

ವಚನ ಗಾಯನ ಕುರಿತು ಹಿರಿಯ ಜನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಚನ ಸಾಹಿತ್ಯ 12ನೇ ಶತಮಾನದಲ್ಲಿ ಕನ್ನಡ ನೆಲದಲ್ಲಿ ನಡೆದ ಸೋಜಿಗದ ಸೃಷ್ಟಿ. ಅದು ಶರಣರ ಮೂಸೆಯಿಂದ ಮೂಡಿಬಂದ ಸಹಜ ಅಭಿವ್ಯಕ್ತಿ. ವಚನಗಳು ಸಾಹಿತ್ಯವೂ ಹೌದು, ಸಂಗೀತವೂ ಹೌದು. ಬಸವಣ್ಣನವರನ್ನು ಸರ್ಕಾರ ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ಹಿನ್ನೆಲೆಯಲ್ಲಿ ಈ ಸಮೂಹ ವಚನ ಗಾಯನವನ್ನು ಸರ್ಕಾರದಿಂದ ನಾಡಿನಾದ್ಯಂತ ಆಯೋಜಿಸುವಂತೆ ಸಲಹೆ ನೀಡಿದ್ದಾರೆ, ಎಂದು ರಂಗಸಂಸ್ಥಾನ ಸಂಸ್ಥೆಯ ಸಂಚಾಲಕರಾದ ರಕ್ಷಿತಾ ಮೇಘನಾ ಕುಮಾರ ತಿಳಿಸಿದ್ದಾರೆ.

ಗಾಯಕರಾದ ಮೇಘನಾಕುಮಾರ್‌, ಕವಿತಾ ಎಸ್. ಮಧುಕುಮಾರ್, ಎಂ. ಮಂಜುಳಾ ಶಶಿಭೂಷಣ, ಮನಸ್ವಿ, ದಿಶಾ ಪ್ರಶಾಂತ್, ಸಂಯುಕ್ತ, ವೀಣಾ ಮಹೇಶ ಸೇರಿದಂತೆ 1,122 ಗಾಯಕರು ಹಾಡಲಿದ್ದಾರೆ. ಸಂಜೆ 6.15ಕ್ಕೆ ವೇದಿಕೆ ಕಾಠ್ಯಕ್ರಮದಲ್ಲಿ ಸಾಣೇಹಳ್ಳಿ ತರಳುಬಾಳು ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ, ಚಿಂತಕ ವೂಡೇ ಪಿ.ಕೃಷ್ಣ ಅಧ್ಯಕ್ಷತೆ, ಅತಿಥಿಗಳಾಗಿ ಡಾ. ಶಂಕರ ಬಿದರಿ, ಡಾ.ಸಿ. ಸೋಮಶೇಖರ ಡಾ. ಎಸ್. ಜಿ ಸುಶೀಲಮ್ಮ, ಲೀಲಾದೇವಿ ಪ್ರಸಾದ, ರಾಣಿ ಸತೀಶ, ಜಾಣಗೆರೆ ವೆಂಕಟರಾಮಯ್ಯ, ಸಂಜೀವ ಕಡೆಗದ, ಎಲ್.ಎನ್. ಮುಕುಂದರಾಜ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಬಸವ ವೇದಿಕೆ, ರಮಣಶ್ರೀ ಸಮೂಹ ಸಂಸ್ಥೆಗಳು ಬೆಂಗಳೂರು, ಅಕ್ಕಮಹಾದೇವಿ ಸಮಿತಿ ಉಡುತಡಿ, ಸುಮಂಗಲಿ ಸೇವಾಶ್ರಮ, ಶೇಷಾದ್ರಿಪುರಂ ಶಿಕ್ಷಣ ದತ್ತಿ ಕಾಲೇಜುಗಳ ಬಸವ ಅಧ್ಯಯನ ಕೇಂದ್ರಗಳು, ಬೆಂಗಳೂರು ಇವು ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ.

ಫೈಲ್ ಫೋಟೋ
Share This Article
11 Comments
    • ದನ್ಯವಾದಗಳೂ ನಿಮಗೆ, ವಚನಗಳನ್ನು ಇಂಥ ಕಾಯ೯ಕ್ರಮಗಳ ಮೂಲಕ ಇನ್ನೂ ಹೆಚ್ಚು ಪ್ರಚಾರ ಮಾಡುವ ಅಗತ್ಯವಿದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಂಶಗಳು ೧೨ ನೇ ಶತಮಾನದ ಶರಣರ ವಚನಗಳಲ್ಲಿ ಅಡಕವಾಗಿವೆ.

  • ಒಳ್ಳೆಯ ಕಾರ್ಯಕ್ರಮ
    ಈ ವಚನ ಗಾಯನದ ರೆಕಾರ್ಡ್ ಮಾಡಿದರೆ ಚನ್ನಾಗಿರುತ್ತದೆ

    • ವಿನೂತನ ಪ್ರಯತ್ನ , ಈ‌ಕಾರ್ಯಕ್ರಮ ಯಶಸ್ವಿಯಾಗಲಿ, ವಚನಗಳು‌ ಮನೆ ಮನ‌ ಮುಟ್ಟಲಿ.

    • ಕಾರ್ಯ ಕ್ರಮ ಯಶಸ್ವಿಯಾಗಲಿ.

  • ಬಸವಾದಿ ಶರಣರ ವಚನ ಸಾಹಿತ್ಯ ಪ್ರಚಾರಕ್ಕೆ . ಹೀಂತ ಕಾರ್ಯಕ್ರಮಗಳು ಸಾಕು ಯಾವ ಮಠಾ ದಿಶರ. ಅವಶ್ಯಕತೆ ಬೇಡ

    • ಒಂದೇ ವೇದಿಕೆಯಲ್ಲಿ ಒಂದೇ ಸಲ ೧೧೨೨ ಗಾಯಕರಿಂದ ಶರಣರ ವಚನಗಳನ್ನು ಹಾಡಿಸುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಮತ್ತು ಎಲ್ಲಾ T.V.ಚಾನೆಲ್ ಗಳಲ್ಲಿ ಬಿತ್ತರಿಸುವ ಪ್ರಯತ್ನವಾಗಲಿ. ಕಾರ್ಯಕ್ರಮದ ಆಯೋಜಕರಿಗೆ, ನಿರ್ದೇಶಕರಿಗೆ ಹಾಗೂ ಗಾಯಕರಿಗೆ ಅನಂತ ಶರಣಾರ್ಥಿ ಗಳು.

  • ಬಸವಾದಿ ಶರಣರ ವಚನಗಳು ಪ್ರಸ್ತುತ ಸಮಯದಲ್ಲಿ ಆಯೋಜಿಸಿರುವುದು ಕೇಳಿ ತುಂಬಾ ತುಂಬಾ ಸಂತೋಷವಾಗುತ್ತಿದೆ…….
    ಇಂತಹ ಅನುಭವ ಸಾಹಿತ್ಯದ ಕಾಲಾತೀತ ಸತ್ಯಗಳನ್ನು ಕೇಳುವುದೇ ಪರಮಾನಾಂದವಾಗಿರುತ್ತವೆ….
    🌹🙏🙏🌹

Leave a Reply

Your email address will not be published. Required fields are marked *