ಭಾಲ್ಕಿ
ಭಾಲ್ಕಿ ತಾಲ್ಲೂಕಿನಲ್ಲಿ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದರಿಂದ ಬುಧವಾರ ಬೆಳಿಗ್ಗೆ ಎರಡು ಗಂಟೆ ಭಾಲ್ಕಿ-ಹುಮನಾಬಾದ್ ಹೆದ್ದಾರಿ ಸಂಚಾರ ಸ್ಥಗಿತವಾಗಿತ್ತೆಂದು ವರದಿಯಾಗಿದೆ.
ಮಂಗಳವಾರ ರಾತ್ರಿ ಬಸವಣ್ಣನವರ ಪ್ರತಿಮೆಯ ಕೈ ಮುರಿದು, ಧ್ಜಜ ಕಂಬ ಕಿತ್ತೆಸೆಯಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ ಎಂದು ಈ ದಿನ ವರದಿ ಮಾಡಿದೆ.
ಬೆಳಿಗ್ಗೆ ವಿರೂಪಗೊಂಡ ಬಸವಣ್ಣನವರ ಪ್ರತಿಮೆಯನ್ನು ಗಮನಿಸಿದ ಗ್ರಾಮಸ್ಥರು, ಸಾರ್ವಜನಿಕರು ರಸ್ತೆಗಿಳಿದು ಬೆಂಕಿ ಹಚ್ಚಿ, ವಾಹನ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಧಾವಿಸಿದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಗಂಭೀರವಾದ ಪ್ರಯತ್ನ ಮಾಡುತ್ತೇವೆಂದ ಮೇಲೆ ಪ್ರತಿಭಟನೆಕಾರರು ವಾಹನ ಸಂಚಾರಕ್ಕೆ ಮತ್ತೆ ಅವಕಾಶ ನೀಡಿದರೆಂದು ತಿಳಿದು ಬಂದಿದೆ. ಪ್ರತಿಮೆಗೆ ಈಗ ಬಟ್ಟೆ ಮುಚ್ಚಲಾಗಿದೆ.
ಬಸವಕಲ್ಯಾಣ, ಹುಮನಾಬಾದ್ ಕಡೆ ತೆರಳುವ ವಾಹನಗಳು ದಾಡಗಿ ಕ್ರಾಸ್ ಬಳಿ ಭಾರೀ ಪ್ರಮಾಣದಲ್ಲಿ ಜಮಾಯಿಸಿದ್ದರಿಂದ ಸಂಚಾರ ಸಂಪೂರ್ಣ ಎರಡು ಗಂಟೆ ಸ್ಥಗಿತಗೊಂಡಿತ್ತು
ಇದು ಬಹಳ ನೋವಿನ ಸಂಗತಿ. ಆದರೆ ಉದ್ವೇಗ ಬೇಡ. ಒಬ್ಬ ವ್ಯಕ್ತಿಯ ಕೃತ್ಯಕ್ಕೆ ಯಾವುದೇ ಸಮುದಾಯವನ್ನು ಗುರಿ ಮಾಡುವುದು ಬೇಡ. ನಾವೀಗ ಬಸವಣ್ಣ ಕಲಿಸಿದು ಪಾಲಿಸದಿದ್ದರೆ ಇನ್ನು ಯಾವಾಗ
ನಿಜವಾದ ಮಾತು 👍
ಇಂತಹ ಘಟನೆ ಆಗದಂತೆ ನೋಡಿಕೊಳ್ಳುವುದು ಒಂದು ಸಾರಿ ಸರಕಾರಕ್ಕೆಬಿಸಿ ತಟಿಸಬೇಕು.ಬೇಕು ಅಂತಲೇ ಮಾಡ್ತಾ ಇದ್ದಾರೆ ಇಂಥವರಿಗೆ ಕಾನೂನಿನ ಕಡಿ ವನಹಾಕಬೇಕು