ಭಾಲ್ಕಿ
ಸೇಡಂನಲ್ಲಿ ನಡೆಯುತ್ತಿರುವ ಸಂಘ ಪರಿವಾರದ ಬೃಹತ್ ಉತ್ಸವಕ್ಕೆ ಪ್ರಚಾರ ನೀಡಲು ಹೊರಟಿರುವ ‘ಬಸವ ರಥ’ಕ್ಕೆ ಹಿರೇಮಠ ಸಂಸ್ಥಾನದ ಆವರಣದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಶುಕ್ರವಾರ ಚಾಲನೆ ನೀಡಿದರು.
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಭಾರತ ವಿಕಾಸ ಸಂಗಮದ ಸ್ವರ್ಣ ಜಯಂತಿ ಮತ್ತು ಭಾರತೀಯ ಸಂಸ್ಕೃತಿ ಉತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ದೇಶಾಭಿಮಾನ ಮೂಡಿಸುವ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಜನವರಿ 28 ರಿಂದ ಫೆಬ್ರವರಿ 6 ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ-7ರ ನಿಮಿತ್ಯ ಬಸವ ತತ್ವ ಪ್ರಸಾರ ಅಂಗವಾಗಿ ‘ಬಸವ ರಥ’ ಯಾತ್ರೆ ನಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಬಸವತತ್ವ ಅತ್ಯವಶ್ಯಕ ಎನ್ನುವುದು ಎಲ್ಲರೂ ಒಪ್ಪಬೇಕಾದ ಸಂಗತಿಯಾಗಿದೆʼ ಎಂದರು.
ವಿಕಾಸ ಅಕಾಡೆಮಿಯ ಸಹ ಸಂಚಾಲಕ ರೇವಣಸಿದ್ದ ಜಾಡರ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕತೆಯ ಜೊತೆಗೆ ಪ್ರಾಚೀನ ಪರಂಪರೆಯ ಸಂಸ್ಕೃತಿಯನ್ನೂ ನಾವು ಗೌರವಿಸಬೇಕುʼ ಎಂದು ಹೇಳಿದರು.
ಶರಣಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ʼಉತ್ತಮ ಗುರುಪರಂಪರೆ ಇದ್ದಾಗ ಮಾತ್ರ ಗುಣಮಟ್ಟದ ವಿದ್ಯಾರ್ಥಿಗಳು ತಯ್ಯಾರಾಗುತ್ತಾರೆʼ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ಬಸವರಾಜ ಪಾಟೀಲ ಸೇಡಂ ಅವರ ದೇಶಭಕ್ತಿ ಕಾರ್ಯ ಮೆಚ್ಚುವಂತಹದ್ದುʼ ಎಂದರು.
ವಿಕಾಸ ಅಕಾಡೆಮಿಯ ತಾಲೂಕು ಸಂಚಾಲಕ ಅಕ್ಷಯಕುಮಾರ ಎಸ್ ಮುದ್ದಾ, ನ್ಯಾಯವಾದಿ ರಾಜಶೇಖರ ಅಷ್ಟೂರೆ, ವಚನ ಸಾಹಿತ್ಯ ಪರಿಷತ್‍ನ ಗುಂಡಪ್ಪ ಸಂಗಮಕರ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಸೋಮನಾಥಪ್ಪ ಅಷ್ಟೂರೆ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ಧಾಬಶಟ್ಟಿ, ಸಂತೋಷ ಹಡಪದ, ಸಂತೋಷ ಬಿಜಿ ಪಾಟೀಲ, ಬಾಬು ಬೆಲ್ದಾಳ, ಬಾಬು ಲಾಧಾ, ಶಾಂತಯ್ಯಾ ಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.
ಹಿರೇಮಠ ಸಂಸ್ಥಾನದ ಹಿರಿಯ ಗುರುಗಳಾದ ಡಾ.ಬಸವಲಿಂಗ ಪಟ್ಟದ್ದೇವರು ಅವರು ಕಳೆದ ವಾರ ಸೇಡಂನ ಏಕ ಸಂಸ್ಕೃತಿ ಕಾರ್ಯಕ್ರಮವನ್ನು ವಿರೋಧಿಸಿ ಕಲ್ಬುರ್ಗಿಯಲ್ಲಿ ನಡೆದ ಬಹುತ್ವ ಸಂಸ್ಕೃತಿ ಉತ್ಸವದಲ್ಲಿಯೂ ಪಾಲ್ಗೊಂಡಿದ್ದರು.
ಸೇಡಂನಲ್ಲಿ ಸಂಘ ಪರಿವಾರ ಆಯೋಜಿಸಿರುವ ಉತ್ಸವಕ್ಕೆ ಪ್ರಚಾರ ನೀಡಲು ‘ಬಸವ ರಥ’ ಮಂಗಳವಾರ ಬೀದರದಿಂದ ಹೊರಟಿತು.
ಆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಬೆಂಬಲ ಸೂಚಿಸಿದ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಡಾ. ಅಕ್ಕ ಗಂಗಾಂಬಿಕೆ ಅಕ್ಕನವರ ವಿರುದ್ಧ ಬಸವ ಭಕ್ತರು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸುದ್ದಿಯೇ ಗೊಂದಲದ ಗೂಡು ಅನಿಸುತ್ತಿದೆ. ಪರ ಮತ್ತು ವಿರೋಧ ವಿಷಯಗಳನ್ನು ಒಟ್ಟುಗೂಡಿಸಿ ಹೇಳದೆ, ನೇರವಾಗಿ ಒಂದೇ ವಿಷಯ ಹೇಳಬೇಕು.
ಬಸವ ರಥಕ್ಕೆ ಚಾಲನೆ ಕೊಟ್ಟರು, ಇದು RSS ಪರ.
ಬಹು ಸಂಸ್ಕೃತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು RSS ವಿರೋಧ ತಾನೇ?
ಎರಡು ಕೂಡಿಸಿ ಹೇಳುವ ಕಾರಣ ಸ್ಪಷ್ಟ ಮಾಹಿತಿ ಗೊತ್ತಾಗುತ್ತಿಲ್ಲ.
ಆರ್.ಎಸ್.ಎಸ್ ನವರ ಉತ್ಸವದಲ್ಲಿ ಅತಿ ಹೆಚ್ಚು ಬಸವ ಭಕ್ತರು ಭಾಗವಹಿಸಬೇಕು ಕಾರಣವೆನೆಂದರೆ ಆ ಕಾರ್ಯಕ್ರಮದಲ್ಲಿ ಬಸವಣ್ಣನವರ ವಿಚಾರಗಳನ್ನ ತಿರುಚಿದ್ದರೆ ಅಥವಾ ಬಸವಣ್ಣನವರ ಸಿದ್ದಾಂತದ ವಿಚಾರಗಳು ಚರ್ಚೆಗೆ ಬಾರದಿದ್ದಲ್ಲಿ ವಿರೋದಿಸಲು ಭಾಗವಹಿಸಬೇಕು. ಹಾಗು ಬಸವಣ್ಣನವರ ಸಿದ್ದಾಂತದ ಬಗ್ಗೆ ವಚನ ಸಾಕ್ಷ್ಯ ಸಮೇತ ಭಾಗವಹಿಸಿ ಅಲ್ಲಿ ಬರುವವರಿಗೆಲ್ಲಾ ತಿಳಿಸಬೇಕು. ಅಲ್ಲಿ ಭಾಗವಹಿಸುವವರಿಗೆಲ್ಲಾ ಬಸವಣ್ಣನವರ ಸರಳ,ಸಮಾನತೆಯ,ಕಾಯಕ ದಾಸೋಹ ಪ್ರಸಾದ ಸಿದ್ದಾಂತಗಳ ಕರಪತ್ರ ಹಂಚಬೇಕು
ನೀವು ಹೇಳಿದ್ದು ಸತ್ಯ ಸರ್, ಆದ್ರೆ ನಾವು ಆ ಕಾರ್ಯಕ್ರಮಕ್ಕೆ ಹೋದರೆ ಶರಣ ತತ್ವ ದ್ರೋಹಿಗಳು ಅಂತ ಆಪಾದನೆ ಬರುತ್ತೆ 😥 ಏನೇ ಆಗ್ಲಿ ನಾವು ಒಗ್ಗಟ್ಟಾಗಿ ಮನುವಾದಿಗಳನ್ನ್ನು ವಿರೋಧಿಸಬೇಕು
ಲಿಂಗಾಯತ ಮಠಾಧೀಷರುಗಳು ಜನ/ಅವರ ಭಕ್ತ ಸಮೂಹ ಎಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾಣುತ್ತದೋ ಅತ್ತಕಡೆ ವಾಲುತ್ತಾರೆ. ಅವರಿಗೆ ಬಸವ/ಶರಣತತ್ವಕ್ಕಿಂತ ಅವರ ಮಠದ ಆದಾಯ ಮೂಲದ ಬಗ್ಗೆ ಹೆಚ್ಚು ಚಿಂತೆ.
ಹಾಗಾದರೆ ಹಿರಿಯ ಗುರುಗಳ ಮತ್ತು ಕಿರಿಯ ಗುರುಗಳ ನಿಲುವಿನಲ್ಲಿ ವೈರುಧ್ಯಗಳಿವೆಯೇ? ಅವುಗಳನ್ನು ಅವರುಗಳೇ ಚರ್ಚಿಸಿ ಸರಿಪಡಿಸಿಕೊಂಡರೆ ಭಕ್ತರಿಗೆ/ಸಮಾಜಕ್ಕೆ ಗೊಂದಲಗಳು ಇರುವುದಿಲ್ಲ. ಅಥವಾ ಅವರಿಬ್ಬರ ಮಧ್ಯೆ ಯಾರನ್ನೂ ಬೇಸರಪಡಿಸಬಾರದು ಎಂದು ಈ ತರಹದ ಒಪ್ಪಂಡವೇನಾದರೂ ಆಗಿದೆಯಾ? ಇಲ್ಲವಾದಲ್ಲಿ ಹಿರಿಯ ಗುರುಗಳು ವಿರೋಧಿಸಿದ್ದನ್ನು ಕಿರಿಯ ಗುರುಗಳು ಹೇಗೆ ಪುರಸ್ಕರಿಸುತ್ತಾರೆ?