ಭಾಲ್ಕಿ
ಬಸವಕಲ್ಯಾಣದಲ್ಲಿ ನಡೆಯುವ 45ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವದ ನಿಮಿತ್ಯ ತಾಲೂಕಾ ಮಟ್ಟದಲ್ಲಿ ವಚನ ಗಾಯನ, ವಚನ ಭಾಷಣ, ವಚನ ಭಾವಾರ್ಥ ಲೇಖನ, ರಸಪ್ರಶ್ನೆ ಹಾಗೂ ರೂಪಕ ಮತ್ತು ನಾಟಕ ಮುಂತಾದ ಸ್ಪರ್ಧೆಗಳನ್ನು ನ 12ರಂದು ನಡೆಸಲಾಯಿತು.
ಸ್ಪರ್ಧೆಯಲ್ಲಿ 350 ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಪ್ರೌಢ ವಿಭಾಗದ ವಚನ ಭಾವಾರ್ಥ ಲೇಖನ ಸ್ಪರ್ಧೆ ವಿಜೇತರು ಪ್ರಥಮ ಶ್ರದ್ಧಾ ಆನಂದ, ದ್ವಿತೀಯ ದೀಕ್ಷಾ ಘಂಟೆ, ತೃತೀಯ ವೈಶಾಲಿ ಸಂಜುಕುಮಾರ.
ವಚನ ಭಾಷಣ: ಸಂಸ್ಕೃತಿ ಶಿವಕಾಂತ, ಐಶ್ವರ್ಯ ಹಣಮಂತ, ಸೃಷ್ಟಿ ರಾಮರತನ.
ವಚನ ಗಾಯನ: ಶ್ರದ್ಧಾ ರವೀಂದ್ರ, ತ್ರಿಂಬಕೇಶ ಮಹೇಶ, ಸಮೀಕ್ಷಾ ಜಗದೀಶ.
ಶರಣರ ಕುರಿತು ರಸಪ್ರಶ್ನೆ: ಗುರುಪ್ರಸಾದ ಪ್ರೌಢಶಾಲೆ ಭಾಲ್ಕಿ, ಹಾನಗಲ್ಲ ಕುಮಾರೇಶ್ವರ ಪ್ರಸಾದ ನಿಲಯ, ಹಿರೇಮಠ ಸಂಸ್ಥಾನ, ಭಾಲ್ಕಿ ಮಕ್ಕಳು, ಶ್ರೀಮತಿ ಎಸ್.ಎಸ್.ಬಿ.ಪ್ರೌಢಶಾಲೆ, ಕಾಶರತುಗಾಂವ.
ಶರಣರ ಕುರಿತು ರೂಪಕ ನಾಟಕ: ಚನ್ನಬಸವೇಶ್ವರ ಪ್ರೌಢಶಾಲೆ ಕರಡ್ಯಾಳ, ಗುರುಪ್ರಸಾದ ಪ್ರೌಢಶಾಲೆ ಹಿರೇಮಠ ಆವರಣ ಭಾಲ್ಕಿ.
ಕಾಲೇಜು ವಿಭಾಗ
ವಚನ ಭಾವಾರ್ಥ ಲೇಖನ ಸ್ಪರ್ಧೆ ಪರಶುರಾಮ ಮಡಿವಾಳ, ರೇಣುಕಾಚಾರ್ಯ ಮಹಾರುದ್ರಯ್ಯ, ಪ್ರಜ್ವಲ್ ಶಂಕರೆಪ್ಪ.
ವಚನ ಭಾಷಣ: ಪ್ರಜ್ವಲ್ ಶಂಕರ, ಮಹೇಶ್ವರಿ ಅನೀಲಕುಮಾರ, ಚೇತನ ರಾಜಕುಮಾರ,
ವಚನ ಗಾಯನ: ಶಿವಮಹಿಮಾ ಮನೋಹರ, ಪಲ್ಲವಿ ಬಂಡಯ್ಯ, ಅಂಕಿತಾ ಆನಂದ.
ರಸಪ್ರಶ್ನೆ: ಚನ್ನಬಸವೇಶ್ವರ ಗುರುಕುಲ ಪಿ.ಯು.ಕಾಲೇಜು ಕರಡ್ಯಾಳ, ಅಲ್ಲಮಪ್ರಭು ಬಿ.ಇಡಿ. ಕಾಲೇಜು ತಳವಾಡ.
ನಾಟಕ/ರೂಪಕ: ಅಲ್ಲಮಪ್ರಭು ಬಿ.ಇಡಿ. ಕಾಲೇಜು ತಳವಾಡ.
ಎಲ್ಲ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ೧,೦೦೦/- ದ್ವಿತೀಯ ಬಹುಮಾನ ೫೦೦/- ತೃತೀಯ ಬಹುಮಾನ ೨೫೦/- ಹಾಗ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು. ಈ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಂದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗಾಗಿ ೧೬ ನವೆಂಬರ್ ರಂದು ಅನುಭವಮಂಟಪ ಬಸವಕಲ್ಯಾಣಕ್ಕೆ ಆಗಮಿಸಲು ಸೂಚಿಸಲಾಗಿದೆ. ಸ್ಪರ್ಧೆಯ ಸಂಯೋಜಕರಾಗಿ ಬಾಬು ಬೆಲ್ದಾಳ, ಈಶ್ವರ ರುಮ್ಮಾ, ಚಂದ್ರಕಾಂತ ತಳವಾಡೆ ಅವರು ಕಾರ್ಯನಿರ್ವಹಿಸಿದ್ದರು.