ಬೀದರಿನಲ್ಲಿ ಮಾರ್ಚ್ 22, 23 ಮಹಾದಂಡನಾಯಕರ ಸ್ಮರಣೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಲಿಂಗಾಯತ ಧರ್ಮ ಪುನರುತ್ಥಾನಗೈದ ಪೂಜ್ಯ ಡಾ. ಮಾತೆ ಮಹಾದೇವಿ ಅವರ 6ನೇ ಪುಣ್ಯಸ್ಮರಣೆ, ಪ್ರವಚನ ಪಿತಾಮಹ ಪೂಜ್ಯ ಲಿಂಗಾನಂದ ಮಹಾಸ್ವಾಮೀಜಿ ಅವರ ಸ್ಮರಣಾರ್ಥವಾಗಿ, ಲಿಂಗಾಯತ ಧರ್ಮದ ಮಹಾದಂಡನಾಯಕರ ಸ್ಮರಣೋತ್ಸವ ಸಮಾರಂಭ ಇದೇ ಮಾರ್ಚ್ 22 ಮತ್ತು 23, 2025 ರಂದು ಬೀದರ ನಗರದ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.

22ರಂದು, ಮಹಾದಂಡ ನಾಯಕರ ಸ್ಮರಣೋತ್ಸವ ಸಮಿತಿ ನೇತೃತ್ವದಲ್ಲಿ ನಡೆಯುವ ಉದ್ಘಾಟನೆ ಸಮಾರಂಭದ ಸಾನಿಧ್ಯವನ್ನು ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಗುರುಬಸವೇಶ್ವರ ಸಂಸ್ಥಾನ ಮಠ, ಹುಲಸೂರು, ಪೂಜ್ಯ ಸಿದ್ದರಾಮ ಶರಣರು ಬೆಲ್ದಾಳ ಅಧ್ಯಕ್ಷರು, ಬಸವ ಮಹಾಮನೆ ಟ್ರಸ್ಟ್, ಬಸವಕಲ್ಯಾಣ, ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ ರಾಮಕೃಷ್ಣ ವಿವೇಕಾನಂದ ಆಶ್ರಮ ಬೀದರ, ಪೂಜ್ಯ ಓಂಕಾರೇಶ್ವರ ಸ್ವಾಮಿಗಳು ಬಸವಕಲ್ಯಾಣ ಮಠ, ಲಿಂಗಪಟ್ಟಣ‌, ಮಂಡ್ಯ ಇವರು ವಹಿಸಲಿದ್ದಾರೆ.

ನೇತೃತ್ವವನ್ನು ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಪೀಠಾಧ್ಯಕ್ಷರು, ಚನ್ನಬಸವೇಶ್ವರ ಜ್ಞಾನಪೀಠ, ಬೆಂಗಳೂರು ಸಮ್ಮುಖ ಸದ್ಗುರು ಮಾತೆ ಸತ್ಯದೇವಿಯವರು ಪೀಠಾಧ್ಯಕ್ಷರು ಅಕ್ಕ ನಾಗಲಾಂಬಿಕ ಮಹಿಳಾ ಗಣ ಬೀದರ ವಹಿಸಲಿರುವರು.

ಉದ್ಘಾಟನೆಯನ್ನು ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವರು, ಧ್ವಜಾರೋಹಣ ಪ್ರಿಯಾಂಕ ಖರ್ಗೆ ಗ್ರಾಮೀಣ ಅಭಿವೃದ್ಧಿ ಸಚಿವರು ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಹೀಂಖಾನ್ ಪೌರಾಡಳಿತ ಸಚಿವರು, ಸಾಗರ್ ಖಂಡ್ರೆ ಲೋಕಸಭಾ ಸದಸ್ಯರು ಭಾಗವಹಿಸುವರು.

ಅಧ್ಯಕ್ಷತೆಯನ್ನು ಡಾ. ಶೈಲೇಂದ್ರ ಬೆಲ್ಲಾಳೆ ಶಾಸಕರು, ಅಧ್ಯಕ್ಷರು ಮಹಾದಂಡ ನಾಯಕರ ಸ್ವರ್ಣೋತ್ಸವ ಸ್ವಾಗತ ಸಮಿತಿ ಇವರು ವಹಿಸುವರು.

ಮಧ್ಯಾಹ್ನ 4 ಗಂಟೆಗೆ ಅಪ್ಪಾಜಿ ಮತ್ತು ಮಾತಾಜಿ ಅವರ ಜೀವನ ಮತ್ತು ಸಾಧನೆ ಕುರಿತು ಮೊದಲ ಅನುಭಾವಗೋಷ್ಠಿ ಜರುಗುತ್ತದೆ.

23ರಂದು ಬೆಳಿಗ್ಗೆ 9:00 ಗಂಟೆಗೆ ವಚನ ಸಾಹಿತ್ಯದ ಭವ್ಯ ಮೆರವಣಿಗೆ ಹಾಗೂ ಪಥಸಂಚಲನ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ 2ನೇ ಅನುಭಾದ ಗೋಷ್ಟಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಸವಾತ್ಮಜೆ ಪ್ರಶಸ್ತಿ, ಲಿಂಗಾನಂದ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
Leave a comment

Leave a Reply

Your email address will not be published. Required fields are marked *