ಬೀದರ್:
ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಇಲ್ಲಿಯ ಶರಣ ಉದ್ಯಾನದಲ್ಲಿ ಸೋಮವಾರ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಸಕಾರಾತ್ಮಕ ವಿಚಾರಗಳು ಬರುತ್ತವೆ, ಇಷ್ಟಲಿಂಗ ಪೂಜೆ ಲಿಂಗಾಯತ ಧರ್ಮದ ಜೀವಾಳ ಎಂದು ಅವರು ಹೇಳಿದರು.

ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಜೈರಾಜ ಖಂಡ್ರೆ ಮಾತನಾಡಿ, ಬಸವ ಜಯಂತಿ ಅಂಗವಾಗಿ ಈ ಬಾರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಿತಿಯ ಪದಾಧಿಕಾರಿಗಳು ಹಾಗೂ ಬಸವಾನುಯಾಯಿಗಳು ಉತ್ಸವವನ್ನು ಸರ್ವ ರೀತಿಯಿಂದಲೂ ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.


ಸುವರ್ಣಾ ಚಿಮಕೋಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾವಿದ ಶಿವಕುಮಾರ ಪಾಂಚಾಳ ಹಾಗೂ ತಂಡದವರು ವಚನ ಗಾಯನ ನಡೆಸಿಕೊಟ್ಟರು.


ಬಸವ ಜಯಂತಿ ಉತ್ಸವ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ವಿಜಯಶ್ರೀ ಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕಿ ಶಕುಂತಲಾ ಬೆಲ್ದಾಳೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಪಾಟೀಲ, ವೇದಿಕೆ ಸಮಿತಿಯ ಅಧ್ಯಕ್ಷ ಸುರೇಶ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಚಪ್ಪ ಪಾಟೀಲ, ವಿವೇಕಾನಂದ ಧನ್ನೂರ, ಶಿವರಾಜ ಮದಕಟ್ಟಿ, ಬಸವರಾಜ ಬಿರಾದಾರ, ಕರುಣಾ ಶೆಟಕಾರ್, ಪಂಪಾವತಿ ಪಾಟೀಲ, ನೀಲಮ್ಮ ರೂಗನ್, ವಿದ್ಯಾವತಿ ಬಲ್ಲೂರ, ಲಕ್ಷ್ಮಿ ಬಿರಾದಾರ, ಸುನಂದಾ ಗಂದಗೆ, ಉಲ್ಲಾಸಿನಿ ಮುದಾಳೆ, ಡಾ. ಶಾರದಾ ಗುದಗೆ, ಜಗದೇವಿ ಮದಕಟ್ಟೆ, ಜೋತ್ಸನಾ ದೇಶಮುಖ, ವಿಜಯಲಕ್ಷ್ಮಿ ಪಾಟೀಲ ಮತ್ತಿತರರು ಇದ್ದರು.

ಶಾಂತಾ ಖಂಡ್ರೆ ಸ್ವಾಗತಿಸಿದರು. ಮಲ್ಲಮ್ಮ ಆರ್. ಪಾಟೀಲ ನಿರೂಪಿಸಿದರು. ಜ್ಞಾನದೇವಿ ಬಬಚಡೆ ವಂದಿಸಿದರು. ನೂರಾರು ಶರಣ, ಶರಣೆಯರು ಶ್ರದ್ಧೆ, ಭಕ್ತಿಯಿಂದ ಪಾಲ್ಗೊಂಡರು.