ವಿಜಯಪುರ
BLDE ಸಂಸ್ಥೆಯ ಹೆಸರು ಸದ್ಯದಲ್ಲೇ ಬದಲಾಗುತ್ತದೆ ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಇದುವರೆಗೆ ನಮ್ಮ ಸಂಸ್ಥೆಯನ್ನು ‘ಬಿಜಾಪುರ ಲಿಂಗಾಯತ ಡಿಸ್ಟ್ರಿಕ್ಟ್ ಎಜುಕೇಶನ್ ಅಸೋಸಿಯೇಷನ್’ ಎಂದು ಕರೆಯಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ‘ಭಾರತೀಯ ಲಿಂಗಾಯತ ಡೆವಲಪ್ಮೆಂಟ್ ಎಜುಕೇಷನಲ್ ಅಸೋಸಿಯೇಷನ್’ ಎಂದು ಬದಲಾಯಿಸುವಂತೆ ನಿರ್ಣಯ ಕೈಗೊಳ್ಳಲಾಗಿದೆ.
ಈ ಹೆಸರಿನ ಬದಲಾವಣೆಯೊಂದಿಗೆ ನಮ್ಮ ಕಾರ್ಯವ್ಯಾಪ್ತಿ ವಿಜಯಪುರವನ್ನು ದಾಟಿ ದೇಶದೆಲ್ಲೆಡೆ ಪಸರಿಸಲು ಅನುಕೂಲವಾಗಲಿದೆ, ಎಂದು ಹೇಳಿದ್ದಾರೆ.