ಭ್ರಮಾಲೋಕದಲ್ಲಿ ತೇಲುತ್ತಿರುವ ಯತ್ನಾಳ್: ಸಾಣೇಹಳ್ಳಿ ಶ್ರೀಗಳ ಖಂಡನೆ

ಬಸವ ಮೀಡಿಯಾ
ಬಸವ ಮೀಡಿಯಾ

(ವಿಶ್ವಗುರು ಬಸವಣ್ಣನವರ ಮೇಲೆ ವಿವಾದಾಸ್ಪದ ಹೇಳಿಕೆ ನೀಡಿರುವ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ಖಂಡಿಸಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಹೇಳಿಕೆ ನೀಡಿದ್ದಾರೆ.

ಸಾಣೇಹಳ್ಳಿ

“ಬಸವನಗೌಡ ಪಾಟೀಲ ಯತ್ನಾಳ್ ಅವರಿಗೆ ತಾವೇನು ಮಾತನಾಡುತ್ತೇವೆ ಎನ್ನುವ ಪ್ರಜ್ಞೆ ಇರುವಂತಿಲ್ಲ. ದೊಡ್ಡವರನ್ನು ಹೀಯಾಳಿಸಿದರೆ, ಬೈದರೆ, ಸಾರ್ವಜನಿಕರಿಂದ ಚಪ್ಪಾಳೆ ತಟ್ಟಿಸಿಕೊಂಡರೆ ತಾವು ದೊಡ್ಡವರಾಗುತ್ತೇವೆ ಎನ್ನುವ ಭ್ರಮಾಲೋಕದಲ್ಲೇ ತೇಲಾಡುವಂತಿದೆ.

ಹಿಂದೆ ಗಣಪತಿ ವಿಚಾರವಾಗಿ ನಾವಾಡಿದ ಮಾತುಗಳನ್ನು ಅರ್ಥ ಮಾಡಿಕೊಳ್ಳದೆ ನಮ್ಮನ್ನೇ ನಿಂದಿಸಿದ್ದರು. ಅಹಂಕಾರಕ್ಕೆ ಉದಾಸೀನವೇ ಮದ್ದೆಂದು ನಾವು ಪ್ರತಿಕ್ರಿಯಿಸಿರಲಿಲ್ಲ.

ಈಗ ಬಸವಣ್ಣನವರು ತಮ್ಮ ಧರ್ಮಗುರುಗಳು, ಸಕಲ ಜೀವಾತ್ಮರ ಲೇಸ ಬಯಸಿದವರು ಎನ್ನುವುದನ್ನೇ ಮರೆತು ನಾಲಗೆ ಹರಿಬಿಟ್ಟಿದ್ದಾರೆ. ಅವರಿಗೆ ಬಸವಧರ್ಮದ ಪರಿಚಯವೇ ಇದ್ದಂತಿಲ್ಲ. ಬಸವಣ್ಣನವರು ಹೊಳೆಗೆ ಹಾರಿಕೊಂಡು ಸಾಯುವ ಹೇಡಿಗಳಾಗಿರಲಿಲ್ಲ.

ಬಸವಣ್ಣನವರ ಇತಿಹಾಸವನ್ನು ಮತ್ತು ವಚನಗಳನ್ನು ಇನ್ನಾದರೂ ಓದುವ ಪ್ರಯತ್ನ ಮಾಡಲಿ. ಆಗ ಬಸವಣ್ಣನವರು ಮತ್ತು ಲಿಂಗಾಯತ ಧರ್ಮದ ನೈಜ ಪರಿಚಯವಾಗಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದು.

ಅವರು ಧರ್ಮಗುರು ಬಸವಣ್ಣನವರ ಬಗ್ಗೆ, ಲಿಂಗಾಯತರ ಬಗ್ಗೆ ಆಡಿರುವ ಮಾತುಗಳನ್ನು ನಾವು ಅನಿವಾರ್ಯವಾಗಿ ಸಾರ್ವಜನಿಕವಾಗಿಯೇ ಖಂಡಿಸುತ್ತೇವೆ.”

Share This Article
11 Comments
  • ರಾಜಕೀಯ ಬಹಿಷ್ಕಾರಕ್ಕೆ ಕರೆನೀಡಿ ಗುರುಗಳೇ 👍🙏

    • ಲಿಂಗಾಯತ ಧರ್ಮದಲ್ಲಿ ಹುಟ್ಟಿ ಗುರು ಬಸವಣ್ಣನವರ ಜೀವನ ಬದುಕಿನ ಪುಟಗಳನ್ನು ಓದದ ಯತ್ನಾಳ್ ಸಾಹೇಬರೇ…. ಒಂದು ದಿನ ಲಿಂಗಾಯಿತ ಸಮುದಾಯ ನಿಮ್ಮನ್ನು ಪರಿಪೂರ್ಣವಾಗಿ ತಿರಸ್ಕಾರ ಮಾಡುವ ಸಮಯ ಬಂದೆ ಬರುತ್ತದೆ… ಕಾಯುತ್ತಲಿರಿ.

      ನಿಮಗೆ ನಿಂದಿಸಲು ಧರ್ಮಗುರುವೆ ಬೇಕೆ…? ಲಿಂಗಾಯತ ಧರ್ಮದಲ್ಲಿ ಹುಟ್ಟಿದ ನಿಮಗೆ
      ಸ್ವಾಭಿಮಾನ ಅಭಿಮಾನ ಅಸ್ಮಿತೆ ನಿಮಗೆ ಇಲ್ಲವೇ? ಲಿಂಗಾಯಿತ ಸಮುದಾಯದ ಹೆಸರಿನಲ್ಲಿ ಟಿಕೆಟ್ ಅನ್ನು ಪಡೆಯುವಾಗ ಮಿನಿಸ್ಟರ್ ಪದವಿಯನ್ನು ಪಡೆಯುವಾಗ… ಲಿಂಗಾಯತರು ನಿಮಗೆ ಬೆಂಬಲ ನೀಡಬೇಕು. ಬಸವ ತತ್ವದ ಪ್ರಸಾರಕ್ಕಾಗಿ ಧರ್ಮದ ಬೆಳವಣಿಗೆಗಾಗಿ ನಿಮ್ಮ ಕಾಣಿಕೆ ಏನು ಸಾಹೇಬರೇ??

  • ಇವರ ಪ್ರಜ್ಞೆ ಅಧಿಕಾರದ ಕುರ್ಚಿಯಮೇಲಿದೆ. ನನಗೆ ಅನ್ನಿಸುತ್ತೆ ಅವರು ಪ್ರಜ್ಞಾಪೂರ್ವಕವಾಗಿಯೇ ಅವರ ರಾಜಕೀಯ ಗುರುಗಳನ್ನು ಮೆಚ್ಚಿಸಲು ಇಂತಹ ಮಾತುಗಳನ್ನಾಡುತ್ತಿದ್ದಾರೆ.

    • ಅಂತೂ ತನ್ನ ನಾಲಿಗೆಗೆ ಲಂಗು ಲಗಾಮಿಲ್ಲದ, ಅನಾಚಾರ ತುಂಬಿದ ಈ ಮನುಷ್ಯನ ನಾಲಿಗೆ ತನ್ನ ರಾಜಕೀಯ ಪಕ್ಷಕ್ಕೂ ಸಹ ನುಂಲಾರದ ಬಿಸಿ ತುಪ್ಪ ಆಗಿಬಿಟ್ಟಿರುವುದಂತು ನಿಜ.ಅದಕ್ಕೆ ದಾಸರು ಹೇಳಿದ್ದು ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ. ದೀಪ ಆರುವ ಮೊದಲು ಜೋರಾಗಿ ಉರಿದಂತಿದೆ. ಆಗಲಿ ಎಲ್ಲಾದಕ್ಕೂ ಕಾಲ ಕೂಡಿ ಬರಬೇಕು

  • ಯತ್ನಾಳ್ ಒಬ್ಬ ರಾಜಕೀಯ ಹತಾಶಯವಾದಿ ,ಮನೂವಾದಿಗಳ ಗುಲಾಮ ,ಇವರು ಹಿಂದೂ ಲಿಂಗಾಯತನಾಗಿ ಬದಲಾಗಲು ಸಾಧ್ಯವಿಲ್ಲಾ ,ಕಾರಣ RSS ಬಿಸ್ಕೆಟ್ ತಿಂದು ಬೆಳೆದ ,ರಾಜಕಾರಣಿ ,ಈಗ ಕೂಡಲಸಂಗಮ ಶ್ರೀ ಗಳನ್ನು ಬಳಸಿಕೊಂಡು ಇಡೀ ಪಂಚಮಸಾಲಿ ಸಮುದಾಯವನ್ನು ತನ್ನ ಸ್ವಾಥ೯ಕ್ಕಾಗಿ ಬಳಸಿಕೊಳ್ಳುತ್ತಾ ಸಮುದಾಯದ ಮುಗ್ಧರನ್ನು ಲಿಂಗಾಯತ ರಿಂದ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾನೆ .
    ಇದಕ್ಕೆ ಪೂಜ್ಯರಾದ ತಾವು ಕೂಡಲಸಂಗಮ ಶ್ರೀ ಗಳೊಂದಿಗೆ ಸಮಾಲೋಚಿಸಿ ,ಲಿಂಗಾಯತದಿಂದ ದಾರಿತಪ್ಪದಂತೆ ಮಾಡಬೇಕು ,ಈ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಎಂದು ತಮ್ಮಲ್ಲಿ ಕಳಕಳಿಯ ವಿನಂತಿ ಶರಣು ಶರಣಾಥಿ೯ .

    • ಯತ್ನಾಳ್ ಒಬ್ಬ ರಾಜಕೀಯ ಹತಾಶಯವಾದಿ ,ಮನೂವಾದಿಗಳ ಗುಲಾಮ ,ಇವರು ಯಂದೂ ಲಿಂಗಾಯತನಾಗಿ ಬದಲಾಗಲು ಸಾಧ್ಯವಿಲ್ಲಾ ,ಕಾರಣ RSS ಬಿಸ್ಕೆಟ್ ತಿಂದು ಬೆಳೆದ ,ರಾಜಕಾರಣಿ ,ಈಗ ಕೂಡಲಸಂಗಮ ಶ್ರೀ ಗಳನ್ನು ಬಳಸಿಕೊಂಡು ಇಡೀ ಪಂಚಮಸಾಲಿ ಸಮುದಾಯವನ್ನು ತನ್ನ ಸ್ವಾಥ೯ಕ್ಕಾಗಿ ಬಳಸಿಕೊಳ್ಳುತ್ತಾ ಸಮುದಾಯದ ಮುಗ್ಧರನ್ನು ಲಿಂಗಾಯತ ರಿಂದ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾನೆ .
      ಇದಕ್ಕೆ ಪೂಜ್ಯರಾದ ತಾವು ಕೂಡಲಸಂಗಮ ಶ್ರೀ ಗಳೊಂದಿಗೆ ಸಮಾಲೋಚಿಸಿ ,ಲಿಂಗಾಯತದಿಂದ ದಾರಿತಪ್ಪದಂತೆ ಮಾಡಬೇಕು ,ಈ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಎಂದು ತಮ್ಮಲ್ಲಿ ಕಳಕಳಿಯ ವಿನಂತಿ ಶರಣು ಶರಣಾಥಿ೯ .

    • ರಂಜನೀಯವಾಗಿ, ಸಾಮಾಜಿಕ ಜವಾಬ್ದಾರಿ ಇಲ್ಲದೆ ಮಾತನಾಡಿ ಚಪ್ಪಾಳೆ ಗಿಟ್ಟಿಸುವವರಿಂದ ಈ ನಾಡಿಗೆ ಯಾವ ಉಪಯೋಗವೂ ಇಲ್ಲಾ. ಕೆಡುಕೇ ಹೆಚ್ಚು.. ಚಪ್ಪಾಳೆ ಹಾಕುವ ಅರೆಬೆಂದ ಯುವ ಮನಸ್ಸುಗಳು ಕಿಂಚಿತ್ತಾದರೂ ಯೋಚಿಸಬೇಡವೇ?

    • ಇವರ ಗುರುಗಳಾದ ಮೃತ್ಯಂಜಯ ಸ್ವಾಮಿಗಳು ಯಾಕೆ ಏನು ಬುದ್ದುಮಾತು ಹೇಳತಿಲ್ಲ ಸ್ವಾಮಿಗಳು ಇವರು ಬರಿ ಮಂತ್ರಿ ಸ್ಥಾನ ಕೊಡಿಸಲು ಮಾತ್ರ ಹೇಳಿಕೆ ನಿಡುತ್ತ ರಾಜಕೀಯ ಮಾಡಲು ಮಾತ್ರ ಸಮಾಜದ ಗುರುಗಳಾ?

  • ಬಸವಣ್ಣನವರ ಕುರಿತು ಯತ್ನಾಳ್ ಕೀಳುಮಟ್ಟದ ಹೇಳಿಕೆ ನೀಡಿರುವುದು ಅಕ್ಷಮ್ಯ ಖಂಡನೀಯ , ಯತ್ನಾಳನ ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟಿಸಬೇಕು.

  • ಬಸವನಗೌಡ ಪಾಟೀಲ್ ಬೊಗಳುವ ನಾಯಿ. ಧರ್ಮದ ಸ್ವಾಭಿಮಾನ ಜ್ಞಾನ ಕಿಂಚಿತ್ತೂ ಇಲ್ಲ .ಇವನಿಂದಲೇ BJP ಡ್ಯಾಮೇಜ್ ಆಗಿ ಹಾಳಾಗುತ್ತಿದೆ. ಜೊತೆಗೆ ಲಿಂಗಾಯತ ಧರ್ಮದಲ್ಲಿ ಹುಟ್ಟಿ ಅದಕ್ಕೆ ದ್ರೋಹ ಬಗೆಯುತ್ತಿದ್ಧಾನೆ. ಮುಂದಿನ ದಿನಗಳಲ್ಲಿ ಇವನನ್ನೂ ಜನರೇ ತಕ್ಕ ಪಾಠ ಕಲಿಸುತ್ತಾರೆ. ಓಂ ಜೈ ಶ್ರೀ ಗುರು ಬಸವೇಶ್ವರ

Leave a Reply

Your email address will not be published. Required fields are marked *