ಕಲಬುರಗಿ
ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಮೊಮ್ಮಗ ಸುಭಾಷ ಮತ್ತು ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ-ದೀಪಾಲಿ ಅವರ ಪುತ್ರಿ ಶ್ರಾವಣಾ ಅವರೊಂದಿಗೆ ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ನಿಶ್ಚಿತಾರ್ಥ ಸೋಮವಾರ ನಡೆಯಿತು.
ಸುಭಾಷ ಅವರು ಸಂಸದ ಬಿ.ವೈ.ರಾಘವೇಂದ್ರ-ತೇಜಸ್ವಿನಿ ಅವರ ಪುತ್ರರು. ಯಡಿಯೂರಪ್ಪ ಅವರ ಬೀಗರಾಗಲಿರುವ ಲಿಂಗರಾಜಪ್ಪ ಅಪ್ಪ ಅವರು ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷರು.
ಬಿ.ಎಸ್. ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮತ್ತು ಅವರ ಕುಟುಂಬ, ಲಿಂಗರಾಜಪ್ಪ ಅವರ ಕುಟುಂಬದೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮ ನಡೆಸಿಕೊಟ್ಟರು
ಯಡಿಯೂರಪ್ಪ ಅವರು ಈಗಾಗಲೇ ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕಲಬುರಗಿಯ ಉದ್ಯಮಿ ಶಿವಾನಂದ ಮಾನ್ಕರ್ ಅವರ ಪುತ್ರಿ ಪ್ರೇಮಾ ಅವರೊಂದಿಗೆ ವಿವಾಹ ಮಾಡಿದ್ದರು. ಇದೀಗ ತಮ್ಮ ಮೊಮ್ಮಗ ಸುಭಾಷನಿಗೂ ಕಲಬುರಗಿಯಿಂದಲೇ ಸಂಬಂಧ ತಂದಿದ್ದಾರೆ.
ಈ ಕಂಪನಿ ಯಾವಾಗಲೂ ವೀರಶೈವರು. ಹಾಗೆಯೇ ಹೇಳಿಕೊಳ್ಳುವ ವರು.ಲಿಂಗಾಯತ ಮುಖಂಡರೆಂದು ಬಿಂಬಿಸುವುದು. ‘ಲಿಂಗಾಯತ’ ಧರ್ಮ ಆಗಲು ಎಂದೂ ಬಿಡದವರು. ಕಾರಣ ಹಾರುವರ ಮಾಯಾಜಾಲದಲ್ಲಿ ಎದ್ದೇಳದಂತೆ ಬಿದ್ದವರು. ಬಿಟ್ಟೂ ಬಿಡದೇ ಬೆನ್ನು ಹತ್ತಿದರೆ ಮಹಾದೇವಪ್ಪನವರು(ಪಕ್ಕಾ ಬಸವ ಅನುಯಾಯಿ)ಸಿದ್ಧರಾಮಯ್ಯರಿಂದ ಅಲ್ಲದೇ ನಮ್ಮ ಉಸ್ತುವಾರಿ ಸಚಿವರೂ ಇದಕ್ಕೆ ಕೈ ಜೋಡಿಸಿದರೆ ಒಳ್ಳೆಯದಾಗಬಹುದು. ನಮ್ಮ ‘ಕರ್ನಾಟಕ ಸರಕಾರ’ವಂತೂ ‘”ಲಿಂಗಾಯತಕ್ಕೆ ಮಾನ್ಯತೆ ಕೊಟ್ಟೇಕೊಡುತ್ತೇವೆ” ಎಂದು ಮತ್ತೊಮ್ಮೆ ಘೋಷಿಸಿ ಕರ್ನಾಟಕ ಗ್ಯಾಜೆಟ್ಟಿನಲ್ಲಿ ಬರುವಂತೆ ಮಾಡಿದರೆ-ಸಾಧ್ಯವಿದೆ. ಯಾಕೋ ಮು.ಮಂ.ಗಳು ಮೊದಲಿನಂತೆ ಇಲ್ಲ. ಎಷ್ಟೋ ಜನ ಲಿಂಗಾಯತ ಶಾಸಕರು,ಕಾವಿಧಾರಿಗಳು ಅವರನ್ನು ಬೆಂಬಲಿಸುತ್ತಿಲ್ಲ ಎನ್ನುವ ಭಾವ ಬಂದಿರಬಹುದು. ಒಳ್ಳೆಯದಲ್ಲದ ಈ ದಿನಮಾನದ ರಾಜಕಾರಣ ಕೂಡ ಅವರಿಗೆ ಬೇಸರ ತರಿಸಿರಬಹುದು. “ಮನೆಯಲಿ ತೊತ್ತಿರದಿರೆ ……..ನಿನಗೆ ನೀನೇ ಮಾಡಿಕೋ ಕೂಡಲಸಂಗಮದೇವಾ” ಎಂಬಂತಾಗಿದೆ ‘ಲಿಂಗಾಯತ’ದ ಪರಿಸ್ಥಿತಿ. ಬಸವ ಗುರುವೇ ಇವರಿಗೆ ನೀನೇ ದಾರಿ ತೋರಬೇಕು. ಶರಣಾರ್ಥಿಗಳು.