ಬೆಂಗಳೂರು
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಬುದ್ಧ ಪೂರ್ಣಿಮೆಯನ್ನು ಸೋಮವಾರ ಆಚರಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿಯವರು ಉದ್ಘಾಟಿಸಿದರು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮಹಾಬೋಧಿ ಸೊಸೈಟಿಯ ಶ್ರೀ ಆನಂದ ಭಂತೇಜಿಯವರು, ಭಾರತೀಯ ಬೌದ್ಧ ಮಹಾಸಭಾದ ಶ್ರೀ ಬೋಧಿದತ್ತ ಭಂತೇಜಿಯವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೌದ್ಧ ಭಿಕ್ಕುಣಿಯರ ಸಂಘದ ಮೈತ್ರೇಯಿ ಮಾತಾಜಿಯವರು, ಸಾಹಿತಿ, ಉಪನ್ಯಾಸಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಕೆ.ಎಂ. ಗಾಯಿತ್ರಿ ಭಾ.ಆ.ಸೇ. ರವರು, ಭಿಕ್ಕು-ಭಿಕ್ಕುಣಿಯರು, ಸಮುದಾಯದ ಮುಖಂಡರು, ಮಾಧ್ಯಮ ಪ್ರತಿನಿಧಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.