ಭಾಲ್ಕಿ:
ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ 136 ನೆಯ ಜಯಂತ್ಯುತ್ಸವ ಡಿಸೆಂಬರ್ 22ರಂದು ಹಮ್ಮಿಕೊಳ್ಳಲಾಗಿದ್ದು, ಸಮಾರಂಭದ ಕರಪತ್ರ ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯರು ಮಾತನಾಡುತ್ತ, ಪ್ರತಿವರ್ಷದಂತೆ ಈ ವರ್ಷವೂ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ ಜಯಂತೋತ್ಸವ ಆಚರಿಸಲಾಗುತ್ತಿದ್ದು, ಇದರ ಭಾಗವಾಗಿ 12 ರಂದು ಕಮಲನಗರದಿಂದ ಬಸವಜ್ಯೋತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಾಗೂ ಡಿಸೆಂಬರ್ 14 ರಿಂದ 21ರವರೆಗೆ ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮಿಗಳವರಿಂದ ‘ಶರಣ ದರ್ಶನ ಪ್ರವಚನ’ ನಡೆಯುವುದು.
22 ರಂದು ಬೆಳಿಗ್ಗೆ 6-30 ಗಂಟೆಗೆ ಹಿರೇಮಠ ಸಂಸ್ಥಾನದಿಂದ ಚನ್ನಬಸವ ಆಶ್ರಮದವರೆಗೆ ಬಸವನಡಿಗೆ, ಬೆಳಿಗ್ಗೆ 7-30 ಗಂಟೆಗೆ ಷಟ್‌ಸ್ಥಲ ಧ್ವಜಾರೋಹಣ, 10 ಗಂಟೆಗೆ ಶರಣರ ಕುರಿತು ಜನಪದ, ಭಕ್ತಿಗೀತೆ, ಭಾವಗೀತೆ, ಭಾಷಣ ಸ್ಪರ್ಧೆಗಳು ಜರುಗುವುವು. ಮತ್ತು ಸಾಯಂಕಾಲ 5 ಗಂಟೆಗೆ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ ಜಯಂತೋತ್ಸವ ಸಮಾರಂಭ ಜರುಗುವುದು.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಬಸವಭಕ್ತರು ಪಾಲ್ಗೊಳ್ಳಬೇಕೆಂದು ತಿಳಿಸಿದರು. ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಪ್ರೊ. ಶಂಭುಲಿಂಗ ಕಾಮಣ್ಣ, ನಾಗಮದೇವರಾವ ಪವಾರ, ಸುಧಾಕರ ಜಾಧವ, ನಾಗಭೂಷಣ ಮಾಮಡಿ, ಅಶೋಕ ರಾಜೋಳೆ, ಮಲ್ಲಮ್ಮ ಆರ್. ಪಾಟೀಲ, ಮಹಾನಂದಾ ದೇಶಮುಖ, ಶರಣಪ್ಪ ಬಿರಾದಾರ, ಸಂತೋಷ ಹಡಪದ, ಬಾಬುರಾವ ಹುಣಜೆ, ರಾಮಚಂದ್ರ ಯರನಾಳೆ ಮತ್ತಿತರರು ಉಪಸ್ಥಿತರಿದ್ದರು.
