ಚನ್ನಗಿರಿ:
ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಮತ್ತು ತಾಲೂಕು ಕದಳಿ ವೇದಿಕೆ ಇವರುಗಳ ಸಹಯೋಗದಲ್ಲಿ “ವಚನೋತ್ಸವ” ಶರಣರ ವಚನ ಗಾಯನ ತರಬೇತಿ ಶಿಬಿರ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಚನ್ನಗಿರಿಯ ಲೋಹಿಯಾ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನಗಿರಿ ತಾಲೂಕು ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರೇಮ ಸೋಮೇಶ್ವರ ಅವರು ವಹಿಸಿದ್ದರು. ಕಾರ್ಯಕ್ರಮದ ದತ್ತಿ ದಾಸೋಹಿಗಳಾದ ಶರಣ ಜೆ.ಎಸ್. ರೇವಣಸಿದ್ದಪ್ಪ ನಿವೃತ್ತ ಉಪನ್ಯಾಸಕರು ಚನ್ನಗಿರಿ ಅವರು ಉದ್ಘಾಟಿಸಿ, ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು ಹಾಗೂ ಎಲ್ಲರೂ ಕೂಡು ಕುಟುಂಬದಿಂದ ಇರಬೇಕೆಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು.

ದಾವಣಗೆರೆ ಜಿಲ್ಲಾ ಕದಳಿ ವೇದಿಕೆ ಗೌರವ ಸಲಹೆಗಾರರಾದ ಯಶಾ ದಿನೇಶ್ ಅವರು ಶಿಬಿರಾರ್ಥಿಗಳಿಗೆ ಸುಶ್ರಾವ್ಯವಾಗಿ, ರಾಗಬದ್ಧವಾಗಿ ಬಸವಾದಿ ಶರಣೆಯರ 5 ವಚನಗಳನ್ನು ಕಲಿಸಿಕೊಟ್ಟರು. ಶಿಬಿರಾರ್ಥಿಗಳು ಉತ್ಸಾಹದಿಂದ ವಚನಗಳು ಹಾಗೂ ಗಾಯನ ಕಲಿತುಕೊಂಡರು. ಮಕ್ಕಳು ಸಹ ಭಾಗವಹಿಸಿದ್ದರು.
ದಾವಣಗೆರೆ ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಮಮತಾ ನಾಗರಾಜ್ ಅವರು ವಚನಗಳನ್ನು ವಿಶ್ಲೇಷಿಸುತ್ತಾ, ವಚನಗಳು ಮೌಲ್ಯಯುತ ಶಿಕ್ಷಣದ ಭಾಗವಾಗಿವೆ, ದಿನಕ್ಕೊಂದು ವಚನವನ್ನು ಕಲಿತು ಅದರಂತೆ ನಡೆಯಬೇಕು ಎಂದು ಹೇಳಿದರು.

ಜಿಲ್ಲಾ ಕದಳಿ ವೇದಿಕೆಯ ಉಪಾಧ್ಯಕ್ಷೆ ವಿಜಯ ಚಂದ್ರಶೇಖರ್ ಅವರು ಎಲ್ಲರನ್ನು ಸ್ವಾಗತಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಜಿ. ಎಂ. ಕುಮಾರಪ್ಪ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಾವಣಗೆರೆ ತಾಲೂಕು ಉಪಾಧ್ಯಕ್ಷೆ ಚಂದ್ರಿಕಾ ಮಂಜುನಾಥ ಅವರು ಶರಣೆ ಯಶಾ ದಿನೇಶ್ ಅವರ ಪರಿಚಯ ಮಾಡಿದರು. ಚನ್ನಗಿರಿ ತಾಲೂಕು ಕಾರ್ಯದರ್ಶಿ ಆಶಾ ಸಿದ್ದೇಶ್ ಅವರು ನಿರೂಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕದಳಿ ಮಹಿಳಾ ವೇದಿಕೆಯ ರಾಜ್ಯ ಉಪಾಸಂಚಾಲಕರಾದ ಪ್ರಮೀಳಾ ನಟರಾಜ ಅವರು ಚನ್ನಗಿರಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶಪ್ಪ ಅವರು, ದಾವಣಗೆರೆ ವೇದಿಕೆಯ ಪದಾಧಿಕಾರಿಗಳಾದ ಪೂರ್ಣಿಮ ಪ್ರಸನ್ನಕುಮಾರ, ಲಕ್ಷ್ಮಿ ಮಲ್ಲಿಕಾರ್ಜುನ್ ಹಾಗೂ ಚನ್ನಗಿರಿ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.
