ಚಿಂಚೋಳಿ
ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀ ಬಸವ ಪರುಷ ಕಟ್ಟೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರ ಶರಣ ಚಿಂತನ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಚಿಂಚೋಳಿ ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ಎಸ್.ಕೆ. ಹಸನ್ ತಮ್ಮ ಚಿಂತನವನ್ನು ಮಂಡಿಸುತ್ತಾ, ಇಂದಿನ ಕೌಟುಂಬಿಕ ವ್ಯವಸ್ಥೆ ಹಾಳಾಗುತ್ತಿರುವುದನ್ನು ಹಾಗೂ ತಿನ್ನುಬಾಕ ಸಂಸ್ಕೃತಿ ಹೆಚ್ಚಿತ್ತಿರುವುದನ್ನು ತಡೆಯಲು ಬಸವಾದಿ ಶರಣರು ತೋರಿದ ಮಾರ್ಗ ಅತಿ ಅವಶ್ಯಕ ಎಂದು ಹೇಳಿದರು.
ಒಂಬತ್ತು ನೂರು ವರ್ಷಗಳ ಹಿಂದೆಯೇ ಗುರು ಬಸವೇಶ್ವರರು ಸಂವಿಧಾನದ ಮೂಲ ಆಶಯಗಳನ್ನು ಜಾರಿಗೆ ತಂದಿದ್ದರು ಎಂದು ತಿಳಿಸಿದರು. ಯುವಕರು ವ್ಯಸನಗಳನ್ನು ಬಿಟ್ಟು ಬಸವಾದಿ ಶರಣರ ಸದಾಶಯದಂತೆ ಸಾಗಲು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ಮಹಮ್ಮದ್ ನಾಯ್ಕೋಡಿ, ಮೃತ್ಯುಂಜಯ ಸಾಲಿಮಠ, ಮಲ್ಲಿಕಾರ್ಜುನ ಸಜ್ಜನ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಶ್ರೀ ಬಸವ ಪರುಷ ಕಟ್ಟೆಯ ಅಧ್ಯಕ್ಷರಾದ ಶರಣ ಆನಂದಕುಮಾರ ಬೆಡಸೂರ ಸ್ವಾಗತಿಸಿದರು. ಶಾಂತಪ್ಪ ದುಬಲುಗುಂಡಿ, ವೀರಸಂಗಯ್ಯ ಮದರ್ಗಿ, ಅಣವೀರಯ್ಯ ಮದರಗಿ, ಗುರುಶಾಂತ ಹುಂಡೇಕಾರ, ವಿದ್ಯಾವತಿ ಮದರಗಿ, ಸುಮಿತ್ರಮ್ಮ ಮದರಗಿ, ಕಸ್ತೂರಿ ರಾಜಶೇಖರ, ನಾಗರತ್ನ ಬೆಡಸೂರು, ಚನ್ನಬಸಮ್ಮ ಬೆಡಸೂರು, ಬಸವರಾಜ ಬುರಕಪಳ್ಳಿ, ಶಿವಶರಣ ಕೊಡಂಗಲ್ಲ, ದಯಾನಂದಸ್ವಾಮಿ, ಕಿರಣಕುಮಾರ್ ಬೆಡಸೂರ, ಶಾಂತಕುಮಾರ ಸಿತಾಳ್ಗೇರಾ, ಅರುಣ ವರ್ಧನ್ ಮರಪಳ್ಳಿ, ಶರಣು ಕಪಲಿ, ವೀರಶೆಟ್ಟಿ ದುಬಲಗುಂಡಿ, ಶರಣಕುಮಾರ ನೇತಿ, ದಿಲೀಪ್ ಬೆಡಸೂರು, ಸಿದ್ದಲಿಂಗ ದುಬಲಗುಂಡಿ, ಬಕ್ಕರೆಡ್ಡಿ ಪೊಲೀಸಪಾಟೀಲ, ಕಿರಣ ಹೂಗಾರ, ಮುಂತಾದವರು ಪಾಲ್ಗೊಂಡಿದ್ದರು.