ಕನ್ನೇರಿ ಸ್ವಾಮಿಗೆ ಕೆಟ್ಟ ಕಾಲ ಶುರುವಾಗಿದೆ: ಬಸವರಾಜ ಧನ್ನೂರ

ಬಸವ ಮೀಡಿಯಾ
ಬಸವ ಮೀಡಿಯಾ

ಕನಕಪುರ ಗ್ರಾಮದಲ್ಲಿ ಬಸವಣ್ಣ ಪುತ್ಥಳಿ ಲೋಕಾರ್ಪಣೆ ಸಮಾರಂಭ

ಚಿಂಚೋಳಿ

ತಾಲಿಬಾನಿಗಳನ್ನು ಶರಣರನ್ನಾಗಿಸುವ ಶಕ್ತಿ ಬಸವ ತತ್ವಕ್ಕಿದೆ. ತಾಲಿಬಾನಿಗಳು ಬಸವತತ್ವ ಅನುಸರಿಸಿದರೆ ಅವರು ಶರಣರಾಗುತ್ತಾರೆ. ಕನ್ನೇರಿ ಸ್ವಾಮಿ ತಕ್ಷಣ ಬಸವ ಭಕ್ತರ ಮತ್ತು ಸ್ವಾಮೀಜಿಗಳ ಕ್ಷಮೆ ಕೇಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ಅವರು ತಾಲ್ಲೂಕಿನ ಕನಕಪುರ ಗ್ರಾಮದಲ್ಲಿ ಸ್ಥಾಪಿಸಿದ ಅಶ್ವಾರೂಢ ಬಸವೇಶ್ವರರ ಪುತ್ಥಳಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

ಕನ್ನೇರಿ ಸ್ವಾಮಿ ಈಚೆಗೆ ರಾಯಬಾಗ ಪಟ್ಟಣದಲ್ಲಿ ಬಸವ ಭಕ್ತರನ್ನು ತಾಲಿಬಾನಿಗಳೆಂದು ಕರೆಯುವ ಮೂಲಕ ತಮ್ಮ ಬಗ್ಗೆ ಇದ್ದ ಗೌರವವನ್ನು ಅವರೇ ಕಳೆದುಕೊಂಡಿದ್ದಾರೆ. ಅವರಿಗೆ ಇದು ಕೆಟ್ಟಕಾಲ ಶುರುವಾದುದರ ಸಂಕೇತವಾಗಿದೆ.

ಬಸವತತ್ವ ಅರಿಯದ ನೀವು ಈ ರೀತಿ ಮಾತನಾಡಿದ್ದನ್ನು ನಾವು ಖಂಡಿಸುತ್ತೇವೆ. ನೀವು ಬಸವತತ್ವಕ್ಕೆ ಮತ್ತು ಬಸವಣ್ಣನವರಿಗೆ ಮಾಡಿದ ಅಪಮಾನವನ್ನು ನಾವೆಂದೂ ಸಹಿಸುವುದಿಲ್ಲ. ನೀವೇ ತಾಲಿಬಾನಿಗಳಾಗಿದ್ದೀರಿ. ನಿಮ್ಮಂತಹ ತಾಲಿಬಾನಿಗಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಧನ್ನೂರ ತರಾಟೆಗೆ ತೆಗೆದುಕೊಂಡರು.

ಬಸವತತ್ವ ಒಪ್ಪಿಕೊಂಡರೆ ಭಾರತ ದೇಶ ವಿಶ್ವಗುರುವಾಗಲು ಸಾಧ್ಯ. ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಶ್ರೇಯಸ್ಸು ಮತ್ತು ಮಾನವೀಯತೆಯನ್ನು ಎತ್ತಿಹಿಡಿದು ಮನೆಗಳನ್ನು ಮಹಾಮನೆಯಾಗಿಸಿದವರು ಬಸವಣ್ಣನವರು ಎಂದರು.

ಮಾನವೀಯತೆಯ ಸಾಕಾರ ಮೂರ್ತಿ ಬಸವಣ್ಣನವರು. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗುವ ನಾಯಕತ್ವದ ಗುಣ ರಕ್ತಗತವಾಗಿ ಬಂದಿರುವ ಕರ್ನಾಟಕ ದೊಡ್ಡ ಸಮಾಜ ಒಗ್ಗಟ್ಟಿನಿಂದ ಸಾಗಬೇಕು. ಈ ಸಮಾಜ ಒಡೆಯಬಾರದು ಎಂದು ಕಲಬುರಗಿ ಮಾಜಿ ಸಂಸದ ಡಾ. ಉಮೇಶ ಜಾಧವ ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಮಾತನಾಡಿ, ಬಸವತತ್ವಕ್ಕೆ ನಿಷ್ಠೆ ಅತಿ ಅಗತ್ಯ. ಬಸವಣ್ಣ ಜಗತ್ತು ಕಂಡ ಅಚ್ಚರಿ ಮತ್ತು ವಿಸ್ಮಯ ಎಂದರೂ ತಪ್ಪಾಗದು. ಬಸವ ತತ್ವ ಪ್ರತಿಯೊಬ್ಬರು ಪಾಲಿಸಿದರೆ ಸಮಾಜದಲ್ಲಿ ಅಪರಾಧಗಳು ಇಳಿಮುಖವಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಹುಲಸೂರಿನ ಶಿವಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವ ದಳದ ಆರ್.ಜಿ. ಶೆಟಕಾರ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ಮಾತನಾಡಿದರು.

ಅನುಭವ ಮಂಟಪದ ಅಧ್ಯಕ್ಷ ನಾಡೋಜ ಬಸವಲಿಂಗ ಪಟ್ಟದ್ದೇವರು, ಭರತನೂರಿನ ಚಿಕ್ಕಗುರುನಂಜೇಶ್ವರ ಮಹಾಸ್ವಾಮೀಜಿ, ಬೀದರ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ, ಶಂಕರಲಿಂಗ ಸ್ವಾಮೀಜಿ, ಅನಾವರಣ ಸಮಿತಿ ಗೌರವಾಧ್ಯಕ್ಷ ಬಸವಣಪ್ಪ ಕುಡಳ್ಳಿ, ಕಾಂಗ್ರೆಸ್ ಮುಖಂಡ ಬಸವರಾಜ ಪಾಟೀಲ ಉಡಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಗೌತಮ ಪಾಟೀಲ, ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಸಂತೋಷ ಗಡಂತಿ, ಶರಣು ಪಾಟೀಲ, ಮಲ್ಲಿಕಾರ್ಜುನ ಪಾಲಾಮೂರ, ವೀರೇಶ ಯಂಪಳ್ಳಿ ಮೊದಲಾದವರು ಇದ್ದರು.

ಸಮಿತಿ ಅಧ್ಯಕ್ಷ ರೇವಣಸಿದ್ದಯ್ಯ ಮಠ ಸ್ವಾಗತಿಸಿದರು. ವೈಜನಾಥ ಸಜ್ಜನಶೆಟ್ಟಿ ನಿರೂಪಿಸಿದರು. ಜಗದೀಶ ಸೇಡಂ ವಂದಿಸಿದರು.
ಕಾರ್ಯಕ್ರಮದಲ್ಲಿ ಮೂರ್ತಿದಾನಿ ಜಹೀರಾಬಾದನ ರವಿಕುಮಾರ ವೈಜನಾಥ ಗೋಪಾಲಗಡೆ, ದಾಸೋಹ ಸೇವೆ ಸಲ್ಲಿಸಿದ ಕರಬಸಪ್ಪ ದೇಶಮುಖ, ಭೀಮಶೆಟ್ಟಿ ಪಾರಾ, ಭದ್ರಯ್ಯ ಮಠ, ಬಸವರಾಜ ಪ್ಯಾಟಿ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಗ್ರಾಮದಲ್ಲಿ ನೂರಾರು ಮಹಿಳೆಯರು, ಮಕ್ಕಳು ವಚನ ಸಾಹಿತ್ಯವನ್ನು ತಲೆಮೇಲೆ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಮಕ್ಕಳು ಶರಣರ ವೇಷಭೂಷಣ ಧರಿಸಿ ಗಮನ ಸೆಳೆದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/ILsKluXiq8VG6CRftVzc2g

Share This Article
2 Comments
  • ಶ್ರೀಯುತ : ಚಿನ್ನಪ್ಪಗೌಡ , ಮ , ಪಾಟೀಲ . ಸಾ / ಆಚಮಟ್ಟಿ -591110 says:

    🫵 ಕನ್ನೇರಿ,,,,!!!!! ಕಣ್ಣ್ ತೆರಿ,,,,!!!!!!! ನಿನಗೆ ಸ್ವಾಮಿ ಪದ ಬಳಸಲು 🫵 ನೀನು ಅನರ್ಹ,,,!!!! ನಿಂಗೆ ಬಹು ವಚನ ಸಲ್ಲದು ## ಏಕವಚನ ಕ್ಕೆ ಯೋಗ್ಯ | ವಚನ ವೆಂದರೆ ನಿನಗೆ ಗೊತ್ತಿಲ್ಲ ×××!!!!!! ನಿನಗೆ ಏನಂದರೇನು ,,,,,,, # ಕಲ್ಲಿನ ಮೇಲೆ ನೀರು ಸುರಿವಿದ ಹಾಗೆ .

Leave a Reply

Your email address will not be published. Required fields are marked *