ಬೆಂಗಳೂರು
ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಆಘಾತ ನೀಡಿರುವ ಶರಣರ ಶಕ್ತಿ ಚಲನಚಿತ್ರವನ್ನು ಅಕ್ಟೋಬರ್ 18ರಂದು ಬಿಡುಗಡೆ ಮಾಡುವ ತಯಾರಿ ಭರದಿಂದ ಸಾಗಿದೆ.
ಇದರಿಂದ ಸಮಾಜದಲ್ಲಿ ಅನಾವಶ್ಯಕ ವಿವಾದ, ಅಶಾಂತಿ ಉಧ್ಭವಿಸುವ ಸಾಧ್ಯತೆಯಿರುವುದರಿಂದ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳು ಮತ್ತು ಕೋರ್ಟುಗಳು ಇದರ ಬಿಡುಗಡೆಯನ್ನು ತಕ್ಷಣ ನಿಲ್ಲಿಸಬೇಕು, ಎಂದು ಜಾಗತಿಕ ಲಿಂಗಾಯತ ಮಹಾಸಭಾ ಹೇಳಿದೆ.
ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್ ನಲ್ಲಿ ಲಿಂಗಾಯತರು ಭಕ್ತಿಯಿಂದ ಕಾಣುವ ಶರಣೆ ಅಕ್ಕ ನಾಗಮ್ಮ ಅವರನ್ನು ಅಶ್ಲೀಲವಾಗಿ ಚಿತ್ರಿಸಲಾಗಿತ್ತು. ಲಿಂಗಾಯತರು ಒಂದು ಹಿಂಸೆಯ ಪ್ರವೃತ್ತಿಯ ಸಮುದಾಯವೆಂದು ಬಿಂಬಿಸಲಾಗಿತ್ತು. ಬಸವಣ್ಣನವರ ಕೊಲೆಯ ದೃಶ್ಯವೂ ಸೇರಿಸಲಾಗಿದೆ, ಎಂದು ಪ್ರೊಫೆಸ್ಸರ್ ವೀರಭದ್ರಯ್ಯ ಶನಿವಾರ ಹೇಳಿದರು.
ಪ್ರೊಫೆಸ್ಸರ್ ವೀರಭದ್ರಯ್ಯ ಜಾಗತಿಕ ಲಿಂಗಾಯತ ಮಹಾಸಭಾದ ಬೆಂಗಳೂರು ಘಟಕದ ಅಧ್ಯಕ್ಷರು.
ಭಾರಿ ಪ್ರತಿರೋಧ ಬಂದ ನಂತರ ಇವುಗಳಲ್ಲಿ ಕೆಲವು ದೃಶ್ಯಗಳನ್ನು ತೆಗೆಯಲಾಗಿದೆ. ಆದರೆ ಇಡೀ ಚಿತ್ರದ ನಿರೂಪಣೆ, ಸಂಭಾಷಣೆಯ ಸ್ವರೂಪ ಮತ್ತು ಉದ್ದೇಶದ ನಮಗೆ ಅನುಮಾನವಿದೆ, ಎಂದು ಹೇಳಿದರು.
ಈ ಹಿನ್ನಲೆಯಲ್ಲಿ ಲಿಂಗಾಯತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಸರಕಾರ ಮತ್ತು ಚಲನ ಚಿತ್ರ ತಂಡ ಮೂರು ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
1) ಮೊದಲು ಈ ಚಿತ್ರದ ಬಿಡುಗಡೆ ಅಧಿಕೃತವಾಗಿ ನಿಲ್ಲಬೇಕು.
2) ನಂತರ ತಂಡದವರು ಲಿಂಗಾಯತ ಸಮಾಜದ ಚಿಂತಕರಿಗೆ, ಮುಖಂಡರಿಗೆ ಈ ಸಿನಿಮಾ ತೋರಿಸಿ ಅವರು ಅಭಿಪ್ರಾಯದಂತೆ ಸಿನಿಮಾ ಪರಿಷ್ಕರಿಸಿಬೇಕು.
3) ಮತ್ತೆ re-censor ಮಾಡಿಸಿ ಸರಿ ಪಡಿಸಿದ ಅಧಿಕೃತ ಕಾಪಿಯನ್ನು ಸಮಾಜದ ಚಿಂತಕರಿಗೆ, ಮುಖಂಡರಿಗೆ ತೋರಿಸಬೇಕು.
ಶಶಿಧರ್ ಕರವೀರಶೆಟ್ಟರ್ (ಹುಬ್ಬಳ್ಳಿ), ವೀರಣ್ಣ ರಾಜೂರ (ಧಾರವಾಡ) ಮತ್ತು ಎಸ್ ಎಮ್ ಜಾಮದಾರ್ (ಬೆಂಗಳೂರು) ಅವರು ಶರಣ ಶಕ್ತಿಯನ್ನು ವೀಕ್ಷಿಸುವ ಚಿಂತಕರ ತಂಡವನ್ನು ಗುರುತಿಸಿದರೆ ಅವರ ನಿರ್ಧಾರವನ್ನು ಎಲ್ಲಾ ಲಿಂಗಾಯತರು ಒಪ್ಪಿಕೊಳ್ಳುತ್ತಾರೆಂದು ಹೇಳಿದರು.
ಈ ಎಲ್ಲಾ ಕ್ರಮಗಳನ್ನು ತಕ್ಷಣ ತೆಗದುಕೊಳ್ಳದಿದ್ದರೆ ಜಾಗತಿಕ ಲಿಂಗಾಯತ ಮಹಾಸಭಾ ಎಲ್ಲಾ ರೀತಿಯ ಕಾನೂನಾತ್ಮಕ ಹೋರಾಟವನ್ನು ನಡೆಸುವುದೆಂದು ಎಚ್ಚರಿಸಿದರು.
ಸಿನೆಮಾ ಬಿಡುಗಡೆ ಆಗದಂತೆ ಕೂಡಲೇ ಸ್ಟೇ ತರುವ ಕೆಲಸವನ್ನು ಎಲ್ಲಾ ಲಿಂಗಾಯತ ಸಂಘಟನೆಗಳು ಮಾಡಬೇಕು …
“ಶರಣರ ಶಕ್ತಿ” ಎಂಬ ಸದರಿ ಚಲನೆ ಚಿತ್ರದ ಪ್ರಸರಣ ಕೂಡಲೆ ನಿಲ್ಲಬೇಕು. ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಘಟಕದವರು ಇದರ ಬಗ್ಗೆ ಆಸಕ್ತಿ ವಹಿಸಿರುವುದಕ್ಕೆ ಅನುಭಾವ ಸಂಗಮದಿಂದ ಬೆಂಬಲಿಸುತ್ತೆವೆ ಶರಣಾರ್ಥಿ.
Essensial.