ಸುತ್ತೂರು
ನಟ ಡಾಲಿ ಧನಂಜಯ್ ನಂದಿ ಕಂಬ ಹಿಡಿದು ಕುಣಿಯುತ್ತಿರುವ ವಿಡಿಯೋ ಹರಿದಾಡುತ್ತಿದೆ. ಈ ಘಟನೆ ನಡೆದದ್ದು ಸುತ್ತೂರು ಮಠದಲ್ಲಿ ಡಿಸೆಂಬರ್ 29ರಂದು.
ಮುಂದಿನ ತಿಂಗಳು ಮೈಸೂರಿನಲ್ಲಿ ಧನ್ಯತಾ ಅವರನ್ನು ಮದುವೆಯಾಗುತ್ತಿರುವ ಡಾಲಿ ಶ್ರೀಗಳಿಗೆ ಆಮಂತ್ರಣ ನೀಡಲು ಮಠಕ್ಕೆ ಹೋಗಿದ್ದರು.
ಅಲ್ಲಿ ಡಾಲಿ ಪೂಜೆ ಮಾಡಿ ನಂದಿ ಕಂಬ ಹಿಡಿದು ಕುಣಿದು ಸಂಭ್ರಮಿಸಿದರು. ಅವರ ಜೊತೆ ಧನ್ಯತಾ ಹಾಗೂ ನಟ ನಾಗಭೂಷಣ್ ಕೂಡ ಹಾಜರಿದ್ದರು.
ಈ ವೇಳೆ ಡಾಲಿಯನ್ನು ನೋಡಿದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
TAGGED:ಇದು ವೈರಲ್