ದಾವಣಗೆರೆ
ರಾಜ್ಯ ಸರ್ಕಾರದ ವತಿಯಿಂದ ರಾಜ್ಯಾದ್ಯಂತ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿರುವ ಜಾತಿಗಣತಿ ಹಾಗೂ ಕೇಂದ್ರ ಸರ್ಕಾರ ವತಿಯಿಂದ 2027 ರಲ್ಲಿ ನಡೆಯಲಿರುವ ಜನಗಣತಿ ಪಟ್ಟಿಯಲ್ಲಿ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಕೋಡ್ ಕೊಡಬೇಕೇಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರೇಗೌಡ ಗೋಪನಾಳ, ವಿಶ್ವೇಶ್ವರಯ್ಯ ಬಿ.ಎಂ. ಹೆಮ್ಮನಬೇತೂರು, ಟಿ.ಎಂ. ಶಿವಮೂರ್ತಯ್ಯ ಹಿರೆಮೆಗಳಗೆರೆ, ಅತ್ತಿಗೆರೆ ನಾಗರಾಜ, ಕಕ್ಕರಗೊಳ್ಳದ ನಾಗರಾಜ, ಪೂರ್ಣಿಮಾ ಪ್ರಸನ್ನ, ಕುಸುಮಾ ಲೋಕೇಶ, ಶಿವಬಸಮ್ಮ, ಸುವರ್ಣಮ್ಮ ಮಂಜುನಾಥ್, ಭರಮಣ್ಣ ಮೈಸೂರು, ಸಿದ್ಧೇಶಪ್ಪ ಕರೂರು, ಹನುಮಂತಪ್ಪ ಮಲ್ಲಿಕಾರ್ಜುನ, ಮಲ್ಲೇಶಪ್ಪ ಹಳೆಬಾತಿ
ಸೇರಿದಂತೆ ಅನೇಕ ಬಸವಾನುಯಾಯಿಗಳು ಭಾಗವಹಿಸಿದ್ದರು.