ಕೊಪ್ಪಳ
1913ರಲ್ಲಿ ಹರ್ಡೇಕರ್ ಮಂಜಪ್ಪನವರು ದಾವಣಗೆರೆ ವಿರಕ್ತಮಠದ ಮೃತ್ಯುಂಜಯ ಶ್ರೀಗಳನ್ನು ಭೇಟಿಯಾಗಿ ಬಸವ ಜಯಂತಿಯನ್ನು ಆಚರಿಸಲು ಚರ್ಚಿಸಿದರು. ತಕ್ಷಣ ತೀರ್ಮಾನಕ್ಕೂ ಬಂದು ಬಸವ ಜಯಂತಿಯನ್ನು ಆಚರಿಸಲು ದಾವಣಗೆರೆಯಲ್ಲಿ ಪ್ರಾರಂಭ ಮಾಡಿದರು. ಅದೇ ಮೊಟ್ಟಮೊದಲ ಬಸವ ಜಯಂತಿಯಾಗಿದೆ ಎಂದು ಅಶೋಕ ರಾಂಪುರ ಹೇಳಿದರು.
ವಿಶ್ವಗುರು ಬಸವೇಶ್ವರ ಟ್ರಸ್ಟ್, ಕೊಪ್ಪಳ ಶನಿವಾರ ಸಂಜೆ ನಡೆದ 846ನೇ ಅಧ್ಯಯನ ಮತ್ತು ಅನುಸಂಧಾನ ಕಾರ್ಯಕ್ರಮದಲ್ಲಿ ಅವರು ಹರ್ಡೇಕರ್ ಮಂಜಪ್ಪನವರ ಜೀವನ ಮೌಲ್ಯಗಳು ವಿಷಯವಾಗಿ ಅನುಭಾವ ನುಡಿದರು.
1915ರಲ್ಲಿ ಸಾಬರಮತಿಯ ದಡದಲ್ಲಿ ಸತ್ಸವುಹದಲ್ಲಿ ಸತ್ಯ, ಅಹಿಂಸೆ , ಬ್ರಹ್ಮಚರ್ಯ ನಿರ್ಣಯ ಕೈಗೊಂಡರು, ಸ್ವದೇಶಿ ಚಿಂತನೆ, ಬಸವ (ವಚನ) ತತ್ವಗಳನ್ನ ಜನರ ಮನೆ ಮನಗಳಿಗೆ ಪ್ರಸಾರ ಮಾಡಲು ಕಂಕಣ ಬದ್ದರಾದರು. 1926 ಮಾರ್ಚ್ ನಲ್ಲಿ ಆಶ್ರಮ ಸ್ಥಾಪನೆ ಮಾಡಿದರು. ಇಂತಹ ಅನೇಕ ಕಾರ್ಯಗಳನ್ನ ಮಾಡಿದ್ದರಿಂದ ಹರ್ಡೇಕರ್ ಅವರಿಗೆ ಕರ್ನಾಟಕದ ಗಾಂಧಿ ಎಂದು ನಾಮಕರಣವಾಯಿತು ಎಂದು ತಿಳಿಸಿದರು.
ಸರ್ವಜ್ಞರ ಜೀವನ ಮೌಲ್ಯಗಳು ಕುರಿತಾಗಿ ರಾಂಪೂರ ಮಾತನಾಡಿ, ದೇಶ ಸುತ್ತಿ- ಕೋಶ ಓದು ಎನ್ನುವ ವಾಕ್ಯದಂತೆ, ಸರ್ವಜ್ಞರವರು ಅಂದಿನ ವಾಸ್ತವ ಸಂಗತಿಗಳನ್ನು ಕಂಡು ವಚನ ತ್ರಿಪದಿ ಬರೆಯುತ್ತಾರೆ. ಮೂರೆ ಸಾಲು ಇದ್ದರು ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಅಷ್ಟೇ ನಿಷ್ಟುರ ಮಾತಿನಲ್ಲಿ ಅವನ್ನು ರಚನೆ ಮಾಡಿದ್ದಾರೆ.
ಇವರ ವಚನಗಳಲ್ಲಿ ಲಯ, ಪ್ರಾಸಬದ್ದ ನುಡಿಗಳಾಗಿ ರಚನೆಯಾಗಿವೆ. ಸತ್ಯ ನುಡಿಯಲ್ಲಿ ವಚನ ಸಾಹಿತ್ಯ ರಚನೆ ಮಾಡಿದ ಶರಣರಲ್ಲಿ ಇವರೊಬ್ಬರು ಎಂದು ರಾಂಪೂರ ಅನುಭಾವದಲ್ಲಿ ಹೇಳಿದರು.
ಡಾ. ಸಂಗಮೇಶ ಕಲಹಾಳ, ದೇವಪ್ಪ ಮುದೇನೂರ, ಶಿವಸಂಗಪ್ಪ ವಣಗೇರಿ, ಗವೀಶ ಸಸಿಮಠ, ಶೇಖರ ಇಂಗಳದಾಳ ಲಕ್ಷ್ಮಕ್ಕ ಬೆಲ್ಲದ, ಶ್ರೀದೇವಿ ಇಂಗಳದಾಳ, ಸರಸ್ವತಿ ರಾಂಪೂರ ಉಪಸ್ಥಿತರಿದ್ದರು.