‘ದೇಹವನ್ನು ದುಶ್ಚಟಗಳಿಂದ ಕೆಡಿಸಿಕೊಳ್ಳದೆ ಶುದ್ಧವಾಗಿಟ್ಟುಕೊಳ್ಳಬೇಕು’

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ

ಸತ್ಯ ಶುದ್ಧ ಕಾಾಯಕ ಮಾಡುವವರು ಸ್ವಾವಂಬಿಗಳು, ಸ್ವಾಭಿಮಾನಿಗಳು ಆಗುತ್ತಾರೆ, ಅವರು ಯಾವತ್ತೂ ಅನ್ಯಾಯ ಅನಾಚಾರಗಳಿಗೆ ಬಾಗುವುದೇ ಇಲ್ಲ, ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶರಣ ವಿಶ್ವೇಶ್ವರಯ್ಯ ಹೆಮ್ಮನಬೇತೂರು ಮಂಗಳವಾರ ಹೇಳಿದರು.

ಅವರು ಬಿಳಿಚೋಡು ಗ್ರಾಮದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಅವರು ಶರಣರು ದೇಹವನ್ನು ದೇವಾಲಯಕ್ಕೆ ಹೋಲಿಸಿದ್ದಾರೆ, ಶಿಶುನಾಳ ಶರೀಪರು ಗುಡಿಯ ನೋಡಿರಣ್ಣ ದೇಹದ ಗುಡಿಯ ನೋಡಿರಿ ಎಂದು ದೇಹವನ್ನು ಗುಡಿಗೆ ಹೋಲಿಸಿದ್ದಾರೆ. ರಾಮಕೃಷ್ಣ ಪರಮಹಂಸರು ಸಹ ನಮ್ಮ ದೇಹ ಜಗತ್ತಿನ ಅತ್ಯಂತ ಶ್ರೇಷ್ಠ ದೇವಾಲಯ ಎಂದು ಹೇಳಿದ್ದಾರೆ. ಇಂಥಹ ಪವಿತ್ರ ದೇಹವನ್ನು ದುಶ್ಚಟಗಳಿಂದ ಕೆಡಿಸಿಕೊಳ್ಳದೆ ಶುದ್ಧವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು

ಹವ್ಯಾಸಿ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎನ್ ಎಸ್ ರಾಜು ಆವರು ಸಮಾರಂಭವನ್ನು ಉದ್ಘಾಟಿಸಿದರು.

ಸಮಾಜ ಸೇವಕರಾದ ಶರಣ ಸುಧಿರಣ್ಣನವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರಾದ ಸಿದ್ದಯ್ಯ ಒಡೆಯರ್ ವಹಿಸಿದ್ದರು. ಸಮಾರಂಭಕ್ಕೆ ಶರಣ ಪರಮೇಶ್ವರಪ್ಪ ಎಲ್ಲರನ್ನೂ ಸ್ವಾಗತಿಸಿ ಶರಣು ಸಮರ್ಪಣೆ ಮಾಡಿದರೆ, ಬಿಳಿಚೋಡು ಗ್ರಾಮದ ಮುಖ್ಯ ಶಿಕ್ಷಕರಾದ ಶರಣ ಪಿ ನಾಗೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಗ್ರಾಮದ ಹಲವಾರು ಮುಖಂಡರು ಉಪಸ್ಥಿತರಿದ್ದರು. ವಿವಿಧ ಭಜನಾತಂಡದವರಿಂದ ಭಜನಗೀತೆ ಹಾಡಲಾಯಿತು.

Share This Article
Leave a comment

Leave a Reply

Your email address will not be published. Required fields are marked *