ದೇವದುರ್ಗ:
ದೇವದುರ್ಗ ತಾಲ್ಲೂಕಿನ ಬೂದಿನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಶಾಲೆಗಳೆಡೆಗೆ ವಚನಗಳ ನಡಿಗೆ ವಚನ ವಾಚನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ವಿಶ್ವಗುರು ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪ ನಮನ ವೇದಿಕೆಯ ಮೇಲಿನ ಗಣ್ಯರಿಂದ ನಡೆಯಿತು.
ಮೊದಲಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಚನ ಸುಧೆ ಪುಸ್ತಕಗಳನ್ನು ನೀಡಲಾಯಿತು.
ವಚನ ವಾಚನ ಮಾಡಿದ ವಿಧ್ಯಾರ್ಥಿ- ವಿದ್ಯಾರ್ಥಿನಿಯರಿಗೆ ವಚನ ಸೌರಭ ಪುಸ್ತಕ, ಅಭಿನಂದನೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಮುಖ್ಯ ಶಿಕ್ಷಕ ರವೀಂದ್ರ ಶರಣರು, ೧೨ನೇ ಶತಮಾನದ ಶರಣರು ಹಾಗೂ ಅವರ ವಚನಗಳ ಕುರಿತು ಮಾತನಾಡಿದರು.
ಶರಣು ವಿಶ್ವ ವಚನ ಫೌಂಡೇಶನ್ ಜಿಲ್ಲಾ ಘಟಕ ರಾಯಚೂರಿನ ಗೌರವಾಧ್ಯಕ್ಷೆ ಡಾ.ದೇವೇಂದ್ರಮ್ಮ ಮಾತನಾಡುತ್ತಾ, ಬುದ್ಧ ಬಸವ ಅಂಬೇಡ್ಕರ್ ಅವರ ಮಾರ್ಗ ನಮಗೆ ಶ್ರೀರಕ್ಷೆ, ಅನೇಕ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದಾಗ ಮಾತ್ರ ಉನ್ನತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆ SDMC ಅಧ್ಯಕ್ಷ ಶ್ರೀ ಮುರುಗೇಂದ್ರಸ್ವಾಮಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಅಭಿಷೇಕಸ್ವಾಮಿ ಹಿರೇಮಠ, ಅಮರಗುಂಡಪ್ಪ ಹೂಗಾರ, ವೆಂಕಟರೆಡ್ಡಿ ಹೊಸಮನಿ, ಶ್ರೀ ಬಸನಗೌಡ ಪಾಟೀಲ ಸುಂಕೇಶ್ವರಹಾಳ, ಶ್ರೀ ಮುದುಕಪ್ಪ ನಾಯಕ ಸುಂಕೇಶ್ವರಹಾಳ ಉಪಸ್ಥಿತರಿದ್ದರು.
ಶಿಕ್ಷಕರು, ಶಿಕ್ಷಕಿಯರು, ಅಡುಗೆ ಸಹಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.