ಧಾರವಾಡ
ನಗರದ ಗಣ್ಯರಾದ ಚನ್ನಬಸಪ್ಪ ಮರದ ಅವರ ನೂತನ ವಾಣಿಜ್ಯ ಮಳಿಗೆಯ ಗುರು ಪ್ರವೇಶ ಲಿಂಗಾಯತ ಧರ್ಮ ನಿಜಾಚರಣೆಯಂತೆ ರವಿವಾರ ನಡೆಯಿತು.
ಬಸವಾದಿ ಶರಣರ ವಚನ ತತ್ವದಂತೆ ಬಸವ ಕೇಂದ್ರದ ಸದಸ್ಯರು ಕಾರ್ಯಕ್ರಮ ನಡೆಸಿದರು.

ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣವನ್ನು ಚನ್ನಬಸಪ್ಪ ಮರದ ಮಾಡಿದರು. ಧ್ವಜಗೀತೆಯನ್ನು ಶಿವಪ್ಪ ಕಿತ್ತೂರ ಹಾಡಿದರು. ಕುಟುಂಬದ 10 ಮಂದಿಗೆ ಲಿಂಗಧಾರಣೆಯನ್ನು ಮಾಡಿ, ಅವರಿಗೆ ಸಹಜ ಶಿವಯೋಗವನ್ನು ಬಸವಂತಪ್ಪ ತೋಟದ, ಶಿವರುದ್ರಗೌಡ ಪಾಟೀಲ ತಿಳಿಸಿಕೊಟ್ಟರು. ಬಸವ ಗುರುವಿನ ಭಾವಚಿತ್ರ ಪೂಜೆಯನ್ನು ಶೇಖರ ಕುಂದಗೋಳ ನಡೆಸಿದರು.


ಬಸವ ಕೇಂದ್ರದ ಸದಸ್ಯರಾದ ಶಿವಕುಮಾರ್ ಗಾಂಜಿ, ಅಭಿಷೇಕ್, ಚನ್ನಪ್ಪಗೌಡ ಪಾಟೀಲ, ಮರದ ಕುಟುಂಬದ ಶಿವಪ್ಪ ಮರದ, ಆದಿತ್ಯ, ಐಶ್ವರ್ಯ, ಸ್ವಾತಿ ಮರದ, ಸುರೇಬಾನ ಕುಟುಂಬದ ಬಸವರಾಜ ಸುರೇಬಾನ, ಶ್ರೀದೇವಿ ಸುರೇಬಾನ ಹಾಗೂ ದಲಾಲ ವರ್ತಕರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.