ಧರ್ಮ ಒಡೆಯುತ್ತಿರುವವರು ‘ಕಟ್ಟರ್ ಲಿಂಗಾಯತ’ರಲ್ಲ ಯತ್ನಾಳ್ ಅವರೇ?

ಡಾ. ಜೆ ಎಸ್ ಪಾಟೀಲ
ಡಾ. ಜೆ ಎಸ್ ಪಾಟೀಲ

ಹಿಂದೂವಾದಿಗಳಿಗೆ ಲಿಂಗಾಯತ ಧರ್ಮದ ಬೆಳವಣಿಗೆಗಳ ಕುರಿತು ಆತಂಕವೇಕೆ?

ವಿಜಯಪುರ

ಕಟ್ಟರ್ ಹಿಂದುತ್ವವಾದಿ ಶಾಸಕ ಯತ್ನಾಳ ಅವರು ಒಂದು ಕಟ್ಟರ್ ಲಿಂಗಾಯತ ಗುಂಪು ಹುಟ್ಟಿಕೊಂಡು ವೀರಶೈವರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ
ವೀರಶೈವ-ಲಿಂಗಾಯತ ಎರಡೂ ಒಂದೆ ಮುಂತಾಗಿ ಸಂಘ ಕಲಿಸಿದ ಗಿಳಿ ಪಾಠದ ಮಾತುಗಳನ್ನು ಪಂಚಪೀಠದವರ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಮಿ. ಯತ್ನಾಳ್ ಅವರೇ,

೧. ಪಂಚಪೀಠದವರು ಪಂಚಮಸಾಲಿಗಳಿಗೆ ಒಂದು ಪೀಠ ಬಿಟ್ಟುಕೊಡಬೇಕುˌ ಇಲ್ಲದಿದ್ದರೆ ಪಂಚಮಸಾಲಿಗಳು ಪ್ರತ್ಯೇಕ ಪೀಠ ಮಾಡಿಕೊಳ್ಳುತ್ತೇವೆ ಎಂದು ಘೋಷಿಸಿ ಒಂದಲ್ಲ ಮೂರು ಪಂಚಮಸಾಲಿ ಪೀಠ ಮಾಡಿಕೊಂಡು ಲಿಂಗಾಯತ ಧರ್ಮವನ್ನು ಒಡೆದಾಗ ತಾವು ಎಲ್ಲಿದ್ದಿರಿ?

೨. ಅಖಂಡ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ಬೇಡಿಕೆಯ ಹೋರಾಟದ ಸಂದರ್ಭದಲ್ಲಿ ತಾವು ತಮ್ಮ ಪಕ್ಷ ಹಾಗೂ ನಿಮ್ಮನ್ನು ನಿಯಂತ್ರಿಸುವ ವೈದಿಕರ ಹಿತಾಸಕ್ತಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಣತಿಯಂತೆ ಆ ಹೋರಾಟವನ್ನು ವಿರೋಧಿಸಿ ಲಿಂಗಾಯತರಿಗೆ ಅಲ್ಪಸಂಖ್ಯಾತ ಸೌಲಭ್ಯದಿಂದ ವಂಚಿಸಿದವರು ಯಾರು?

೩. ಅಖಂಡ ಲಿಂಗಾಯತರ ಅಭಿವೃದ್ಧಿಗೆ ದುಡಿಯುವುದು ಬಿಟ್ಟು ಕೇವಲ ಪಂಚಮಸಾಲಿಗಳಿಗೆ ಮೀಸಲಾತಿ ಬೇಕೆಂದು ಲಿಂಗಾಯತ ಧರ್ಮವನ್ನು ಇಡೀಯಾಗಿ ಒಡೆಯುತ್ತಿರುವವರು ಯಾರು?

೪. ಪಂಚಮಸಾಲಿ ಪೀಠದ ಉದಯದ ಮೂಲ ಆಶಯಗಳನ್ನು ಕೊಂದು ಅದನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವವರು ಯಾರು?

೫. ಬಸವಾದಿ ಶಿವಶರಣರ ಮೂಲ ಆಶಯಗಳಿಗೆ ಕೊಳ್ಳಿಯನ್ನಿಟ್ಟು ವೈದಿಕ ಆಚರಣೆಗಳನ್ನು ಪ್ರಚಾರ ಮಾಡುತ್ತ ಲಿಂಗಾಯತರನ್ನು ವೈದಿಕ ಮೌಢ್ಯದ ದಾಸರನ್ನಾಗಿಸಿದವರು ಯಾರು?

೬. ಲಿಂಗಾಯತ ಸಮಾಜ ಹಿಟ್ಟುˌ ಬಟ್ಟೆˌ ಅನ್ನವನ್ನು ಕೊಟ್ಟು ಹೆಗಲ ಮೇಲೆ ಹೊತ್ತುಕೊಂಡರೂ ಬೇಡ ಜಂಗಮರಿಗೆ ಮೀಸಲಾತಿ ಬೇಕುˌ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸೌಲಭ್ಯ ಸಿಗಬಾರದು ಎಂದು ಪಿತೂರಿ ಮಾಡುತ್ತಿರುವವರು ಯಾರು?

೭. ೧೯೦೪ ರಿಂದ ಲಿಂಗಾಯತ ಧರ್ಮದಲ್ಲಿನ ಮಠೀಯ ವ್ಯವಸ್ಥೆಯಿಂದ ಅತ್ಯಂತ ಹೆಚ್ಚು ಲಾಭ ಮಾಡಿಕೊಂಡದ್ದು ಯಾವ ಉಪವರ್ಗ?

೯. ಲಿಂಗಾಯತ ಸಂಸ್ಕೃತಿಯನ್ನು ನಾಶ ಮಾಡುತ್ತಿರುವ ಹಾಗೂ ಲಿಂಗಾಯತ ಮಠಗಳನ್ನು ಹಾಳು ಮಾಡುತ್ತಿರುವ ವೈದಿಕ ಶಕ್ತಿಗಳೊಂದಿಗೆ ಕೈಜೋಡಿಸುತ್ತಿರುವ ಲಿಂಗಾಯತ ಧರ್ಮ ದ್ರೋಹಿಗಳು ಯಾರು?

೧೦. ಯಡಿಯೂರಪ್ಪ ಲಿಂಗಾಯತ ನಾಯಕನೇ ಆಗಿದ್ದರೂ ಒಳಗೆ ಕುಳಿತು ಬಗೆಹರಿಸಿಕೊಳ್ಳದಹುದಾದ ಭಿನ್ನಾಭಿಪ್ರಾಯಗಳನ್ನು ಯಾರದೊ ಅಣತಿಯಂತೆ ಬೀದಿ ರಂಪಾಟ ಮಾಡಿರುವ ಅಲ್ಪರು ಯಾರು?

೧೧. ಅಷ್ಟಕ್ಕೂ ಹಿಂದೂವಾದಿಗಳಿಗೆ ಲಿಂಗಾಯತ ಧರ್ಮದ ಬೆಳವಣಿಗೆಗಳ ಕುರಿತು ಆತಂಕವೇಕೆ?

ಒಬ್ಬ ಹುಚ್ಚ ಹಾದಿಗೆ ಹೋಗುವವರ ಮೇಲೆ ಕಲ್ಲೆಸೆದರೆ ಗಂಭೀರವಾಗಿ ಉತ್ತರಿಸುವ ಅಗತ್ಯವಿರುವುದಿಲ್ಲ. ಇತ್ತೀಚಿಗೆ ತಾವು ರಾಜಕೀಯ ಕ್ಷೋಭೆಯಿಂದ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ನೀವು ಯಾವತ್ತೂ ಲಿಂಗಾಯತ ಧರ್ಮಕ್ಕೆ ಒಳಿತಾಗುವ ಕಾರ್ಯಗಳು ಮಾಡುವುದು ಹೋಗಲಿ ಒಳ್ಳೆಯ ಮಾತುಗಳನ್ನೂ ಆಡಿಲ್ಲ. ನಿಮ್ಮಂತವರಿಗೆ ಉತ್ತರಿಸುವ ಅಗತ್ಯವಿಲ್ಲದಿದ್ದರೂˌ ಒಬ್ಬ ನೈಜ ಲಿಂಗಾಯನಾಗಿ ಈ ಸಾಲುಗಳನ್ನು ಬರೆಯಬೇಕೆಂದು ತೀರ್ಮಾನಿಸಿ ಬರೆದಿದ್ದೇನೆ. ಅಷ್ಟಕ್ಕೂ ಬಸವತತ್ವ ಮತ್ತು ಲಿಂಗಾಯತ ಧರ್ಮ ಯಾರ ಮೇಲೂ ಅವಲಂಬಿಸಿಲ್ಲ ಎನ್ನುವ ಮಾತು ನೀವೆಲ್ಲ ಅರ್ಥಮಾಡಿಕೊಳ್ಳಲೇಬೇಕಾದ ಸತ್ಯವಾಗಿದೆ.

ಶರಣುಗಳೊಂದಿಗೆ….

ಡಾ. ಜೆ ಎಸ್ ಪಾಟೀಲ

Share This Article
8 Comments
  • ಯತ್ನಾಳ್ ಗೆ ಮುಟ್ಟಿ ನೋಡಿಕೊಳ್ಳುವಂತ ಒದೆ ಕೊಟ್ಟಿರುವುದಕ್ಕೆ ಪಾಟೀಲ್ ರಿಗೆ ಶರಣು ಶರಣಾರ್ಥಿ.ಇದನ್ನು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಕಳುಹಿಸಿಕೊಡುತ್ತಿದ್ದೇನೆ. ನಂತರ ಅವರ ಪ್ರತಿಕ್ರಿಯೆ ಹೇಗಿರುತ್ತೆ ಎಂದು ಕಾಯೋಣ.

  • ಯತ್ನಾಳ್ ಇಂಥಹ ಅವಿವೇಕಿ ರಾಜಕೀಯ ನಾಯಕನಿಗೆ ಪಾಟೀಲ್ ಸರ್ ಉತ್ತರ ಸರಿಯಾಗಿದೆ.

  • ಯತ್ನಾಳ ಇತಿಹಾಸ ಅರಿಯದ ಮಾನಸಿಕ ಅಸ್ವಸ್ಥ

    • ಯಡೆಯೂರಪ್ಪನು ಸಹ ಲಿಂಗಾಯತ ನಾಯಕನಲ್ಲ. ಜೀವನದಲ್ಲಿ ಒಮ್ಮೆಯಾದರು ವಿಭೂತಿ ಧರಿಸದ ಇವ ಯಾವ ಸೀಮೆ ಲಿಂಗಾಯತ. ಲಿಂಗಾಯತ ಧರ್ಮ ನಾಯಕರುಗಳಿಂದ ಬೆಳೆಯುತ್ತದೆ ಎಂಬ ಬ್ರಮೆಯಿಂದ ಹೊರಬಂದು ಕಾರ್ಯಕರ್ತರಿಂದ ಅದನ್ನು ಉಳಿಸಿ ಬೆಳೆಸಬೇಕಿದೆ. ಮುಖ್ಯವಾಗಿ ಸಂಘ ಪರಿವಾರಕ್ಕೆ ಮಾರು ಹೋಗುವ ಯುವಕರಿಗೆ ಬುದ್ದಿ ಹೇಳಬೇಕಿದೆ.

  • ಯತ್ನಾಳರ ಜಾಣಪೆದ್ದಾಟ ಲಿಂಗಾಯತರನ್ನ ದಾರಿತಪ್ಪಿಸುವ ಕೆಲಸವಾಗಿದೆ. ಯತ್ನಾಳ್ ಲಿಂಗಾಯತರ ಮನೆ ಆಳು ಮಾಡುವ ಕೆಲಸಕ್ಕೆ ಕೈಹಾಕಿದ್ದಾರೆ. ಕ್ಷಮೆ ಕೇಳಬೇಕಾದವರು ಯತ್ನಾಳ್ ಅಲ್ಲ ಬಿಜೆಪಿಯವರು ಯಾಕಂದ್ರೆ ಯತ್ನಾಳ್ ಈ ರೀತಿ ನಡೆದುಕೊಂಡರು ಅವನನ್ನ ಸುಮ್ಮನೆ ಇರುವಂತೆ ಹೇಳದ ಬಿಜೆಪಿಯವರು ಬೇಕಂತಲೇ ಇವನಿಂದ ಹೇಳಿಕೆ ನೀಡಿಸುತಿದ್ದಾರೆ

  • All India Lingayat pooja method is same then why should make difference in this community.
    Soma of the political guys are trying to divide the Lingayat community.
    This is a worst thinking.
    If Lingayat become on unity we can face world.
    Please understand we all are one please get up to say we all one unity.

Leave a Reply

Your email address will not be published. Required fields are marked *