ಧಾರವಾಡ
ಕೆ. ಎಲ್.ಇ. ಸಂಸ್ಥೆಯ ಆರ್.ಎಲ್.ಎಸ್. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಬಸವ ಕೇಂದ್ರದ ವತಿಯಿಂದ ಶನಿವಾರ 1000 ವಚನಸುಧೆ ಕಿರುಪುಸ್ತಕ ಹಾಗೂ 1000 ಪೆನ್ನು ವಿತರಣೆ ಮಾಡಲಾಯಿತು.
ಬರುವ ಆಗಸ್ಟ್ 3ರಂದು ಧಾರವಾಡ ಆರ್.ಎಲ್.ಎಸ್. ಸ್ಕೂಲಿನಲ್ಲಿ ಬಸವಕೇಂದ್ರದಿಂದ ನಡೆಯಲಿರುವ, ಜಿಲ್ಲಾಮಟ್ಟದ ವಚನ ಲೇಖನ ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳಲ್ಲಿ ಕೇಂದ್ರದ ಪ್ರಮುಖರು ವಿನಂತಿಸಿದರು. ಮಕ್ಕಳಿಗೆ ಇದೇ ಸಂದರ್ಭದಲ್ಲಿ ನಾಲ್ಕು ವಚನಗಳನ್ನು ಹೇಳಿಸಿ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರಿಗೆ ಜಯಕಾರ ಹಾಕಿಸಲಾಯಿತು.

ಬಸವ ಕೇಂದ್ರದ ಶರಣ ಮಲ್ಲೇಶಪ್ಪ ಬಿ. ಇಟಗಿ 5 ಸಾವಿರ ಪುಸ್ತಕಗಳ ದಾಸೋಹ ನೀಡಿದ್ದಾರೆ. ಈಗಾಗಲೇ 35 ಶಾಲೆಗಳ ಮಕ್ಕಳಿಗೆ ಈ ಪುಸ್ತಕ ತಲುಪಿಸಿದ್ದೇವೆ ಎಂದು ಬಸವಂತಪ್ಪ ತೋಟದ ಹೇಳಿದರು.
ಕಾರ್ಯಕ್ರಮದಲ್ಲಿ ಶರಣರಾದ ಸಿದ್ರಾಮಣ್ಣ ನಡಕಟ್ಟಿ, ಪ್ರೊ. ಎಸ್.ಎಸ್. ನರೇಗಲ್ಲ, ಮುಖ್ಯೋಪಾಧ್ಯಾಯ ಆರ್.ಜಿ. ಬಾನಪ್ಪನವರ, ಎಂ.ಬಿ. ಇಟಗಿ, ರಾಜೇಶ್ವರಿ ಕಟ್ಟಿಮನಿ, ಶೇಖರ ಕುಂದಗೋಳ, ಅನೀಲ ಅಂಗಡಿ, ಶಿವಕುಮಾರ ಗಾಂಜಿ, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.