ಶ್ರಾವಣ ಮಾಸವು ಆಗಸ್ಟ ೦೫ ರಿಂದ ಆರಂಭಗೊಳ್ಳಲಿದ್ದು ಬಸವ ಕೇಂದ್ರ ವತಿಯಿಂದ ಒಂದು ತಿಂಗಳ ವರೆಗೆ ಪ್ರತಿನಿತ್ಯ ವಚನೋತ್ಸವ ಕಾರ್ಯಕ್ರಮವು ಶಹರದ ೧೫ ಬಡಾವಣೆಯ ೫೦೦ ಕ್ಕೂ ಹೆಚ್ಚು ಮನೆಗಳಲ್ಲಿ ಏಕಕಾಲಕ್ಕೆ ವಚನ ವಿಶ್ಲೇಷಣೆ ಹಾಗೂ ಪ್ರತಿ ರವಿವಾರ ಶರಣ ಸಂಗಮ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಬಸವ ಕೇಂದ್ರ ಗೌರವಾದ್ಯಕ್ಷ ಡಾ ವೀರಣ್ಣ ರಾಜೂರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ. ಬಸವಾದಿ ಶರಣರ ವಿಚಾರಧಾರೆಯನ್ನು ಮನೆ ಮನ ತಲುಪಿಸುವ ನಿಟ್ಟಿನಲ್ಲಿ ಕಳೆದ ೨೫ ವರ್ಷದಿಂದ ನಿರಂತರವಾಗಿ ಪ್ರತಿ ಶ್ರಾವಣ ಮಾಸದ ಅವಧಿಯಲ್ಲಿ ಎಲ್ಲಾ ಬಡಾವಣೆಗಳ ಮನೆಯಲ್ಲಿ ನಿತ್ಯ ವಚನೋತ್ಸವ ನಡೆಯುತ್ತಾ ಬಂದಿದ್ದು ಈ ಬಾರಿ ವಿಶೇಷ ಸಮಾರಂಭ ಏರ್ಪಡಿಸುವ ಮೂಲಕ ಮಕ್ಕಳಿಗೆ ಹಾಗೂ ಯುವ ಜನರಿಗೆ ಮತ್ತು ಮಹಿಳೆಯರಿಗೆ ಆಧ್ಯತೆ ನೀಡಲಾಗಿದೆ.
ಮಕ್ಕಳಿಗೆ ವಚನ ಲೇಖನ ಸ್ಪರ್ಧೆ ಏರ್ಪಡಿಸಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಬಹುಮಾನ ನೀಡುವ ಯೋಜನೆ ಹೊಂದಿದೆ. ಶಾಲಾ ಮಕ್ಕಳಿಗಾಗಿ ಬಸವಾದಿ ಶರಣ ಶರಣೆಯರ ರೂಪಕಗಳು, ಛದ್ಮವೇಶ ಸ್ಪರ್ಧೆಗಳು ನಡೆಯಲಿವೆ ಎಂದರು.
ಗ್ರಾಮಾಂತರ ಪ್ರದೇಶದಲ್ಲಿ ಇಷ್ಟಲಿಂಗ ಧಾರಣೆ ಹಾಗೂ ಬಸವತತ್ವ ಸಂದೇಶ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಜಾತಿ, ಧರ್ಮ, ಲಿಂಗಬೇಧವಿಲ್ಲ ಒಟ್ಟಾರೆಯಾಗಿ ಪ್ರತಿಯೊಂದು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬೇಕಿದ್ದು ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಲಿದ್ದೇವೆ ಎಂದರು.
ಆ.೦೫ ರ ಸಂಜೆ ೫ ಕ್ಕೆ ವಚನೋತ್ಸವ ಉದ್ಘಾಟನೆ ಹಾಗೂ ವಚನ ಪರಿಮಳ ಭಾಗ-೦೭ ಗೃಂಥ ಬಿಡುಗಡೆ ಸಮಾರಂಭ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಜರುಗಲಿದ್ದು ಸಂಶೋಧಕ ಡಾ. ವೀರಣ್ಣ ರಾಜೂರ ಸಮಾರಂಭ ಉದ್ಘಾಟಿಸುವರು. ಡಾ.ವಿಜಯಲಕ್ಮೀ ಅಮ್ಮಿನಭಾವಿ ಗೃಂಥ ಬಿಡುಗಡೆಗೊಳಿಸಲಿದ್ದು ಬಸವಕೇಂದ್ರ ಅಧ್ಯಕ್ಷ ಸಿದ್ದರಾಮ ನಡಕಟ್ಟಿ ಹಾಗೂ ಶಂಕರಣ್ಣ ಕೋರಿಶೆಟ್ಟರ ಉಪಸ್ಥಿತರಿರುವರು. ಚಿಂತಕ ಶಿವಣ್ಣ ಶರಣ್ಣವರ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.
ಬಸವ ಪಂಚಮಿ ಶರಣೆ ಅಕ್ಕನಾಗಮ್ಮ ಸ್ಮರಣೋತ್ಸವ ನಿಮಿತ್ಯ ಆ. ೦೮ ರಂದು ಬೆಳಗ್ಗೆ ೧೦ ಗಂಟೆಗೆ ಹೊನ್ನಾಪೂರ ಗ್ರಾಮದ ಶ್ರೀ ಅಲ್ಲಮಪ್ರಭು ದೇವಸ್ಥಾನದ ಆವರಣದಲ್ಲಿ ಹಾಲು, ಉಂಡಿ ವಿತರಣೆ ಮಾಡಲಾಗುವುದು. ಆ.೧೧ ರ ಬೆಳಗ್ಗೆ ೧೦ ಗಂಟೆಗೆ ಶಹರದ ಆರ್.ಎಲ್.ಎಸ್ ಮಹಾವಿದ್ಯಾಲಯದಲ್ಲಿ ೫ ರಿಂದ ೧೦ ನೇ ತರಗತಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ, ಬರೆಯುವ ಸ್ಪರ್ಧೆ ನಡೆಯಲಿದ್ದು ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆದ ಮಕ್ಕಳಿಗೆ ನಗದು ಪ್ರಮಾಣ ಪತ್ರ ನೀಡಲಾಗುವುದು.
ಅ. ೧೮ ರ ಸಂಜೆ ೫ ಕ್ಕೆ ತತ್ವಾನ್ವೇಶಣ ಮಂದಿರದಲ್ಲಿ ಪ್ರೊ. ಸಿದ್ದಣ್ಣ ಲಂಗೋಟಿ ಇವರಿಂದ ಶರಣ ಸಂಗಮ, ೧೯ ರ ಮದ್ಯಾನ್ಹ ೧೨ ಕ್ಕೆ ಜೋಡಳ್ಳಿ ಗ್ರಾಮದಲ್ಲಿ ನುಲಿಯ ಚಂದಯ್ಯನ ಜಯಂತಿ ಕಾರ್ಯಕ್ರಮ ಜರುಗಲಿದೆ. ಆ. ೨೫ ರಂದು ಮಧ್ಯಾಹ್ನ ೧೨ ಕ್ಕೆ ಯಾಲಕ್ಕಿ ಶೆಟ್ಟರ ಕಾಲೋನಿಯಲ್ಲಿ ಶರಣ ಸಂಗಮ ನಡೆಯಲಿದೆ. ಸೆ. ೦೧ ರ ಬೆಳಗ್ಗೆ ೧೦.೩೦ ಗಂಟೆಗೆ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಚನೋತ್ಸವ ಸಮಾರೋಪ ಸಮಾರಂಭ ಏರ್ಪಡಿಸಿದ್ದು ಈ ಎಲ್ಲಾ ಕಾರ್ಯಕ್ರಮದಲ್ಲಿ ಆಸಕ್ತರು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸವoತ ತೋಟದ. ಶಿವಣ್ಣ ಶರಣ್ಣವರ. ಸಿದ್ದರಾಮಣ್ಣ ನಡಕಟ್ಟಿ. ಶಕುಂತಲಾ ಮನ್ನಂಗಿ.ಶೇಖರ್ ಕುಂದಗೋಳ ಉಪಸ್ಥಿತರಿದ್ದವರು.