ಬಸವ ಕಲ್ಯಾಣ
ಲಿಂಗಾಯತರನ್ನು ವೀರಶೈವರನ್ನು ಒಂದುಗೂಡಿಸಲು ಹೊರಟಿರುವ ಏಕತಾ ಸಮಾವೇಶದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕದಿರಲು ಪೂಜ್ಯ ದಿಂಗಾಲೇಶ್ವರ ಸ್ವಾಮೀಜಿ ನಿರ್ಣಯಿಸಿದ್ದಾರೆ.
ಇಂದು ಹೊರಡಿಸಿರುವ ಪ್ರಕಟಣೆಯಲ್ಲಿ ಬಸವಕಲ್ಯಾಣದ ಬಸವಪರ ಸಂಘಟನೆಗಳ ಒಕ್ಕೂಟ ದಿಂಗಾಲೇಶ್ವರ ಶ್ರೀಗಳ ನಿರ್ಣಯವನ್ನು ಖಂಡಿಸಿದೆ.
“ಏಕತಾ ಸಮಾವೇಶದಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವುದಿಲ್ಲ ಎಂದು ಪೂಜ್ಯ ದಿಂಗಾಲೇಶ್ವರ ಸ್ವಾಮೀಜಿಯವರು ಹೇಳಿಕೆ ನೀಡಿದ್ದಾರೆ.
ಎಲ್ಲಿ ಬಸವಣ್ಣ ಇಲ್ಲವೋ ಅವರು ನಮ್ಮವರಲ್ಲ. ನಾವು ಬಸವಣ್ಣನವರನ್ನು ಒಪ್ಪುವವರು ಅವರು ಬಸವಣ್ಣನವರನ್ನು ಒಪ್ಪದವರು. ಇಲ್ಲಿಯೇ ಗೊತ್ತಾಗುತ್ತದೆ ಅವರು ಬಸವಣ್ಣನವರನ್ನು ಎಷ್ಟು ದ್ವೇಷಿಸುತ್ತಾರೆ ಅಂತ.
ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಬಸವ ಧರ್ಮದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಮತ್ತು ರಾಜಕಾರಣ ಮಾಡುವ ಹಕ್ಕಿಲ್ಲ,” ಎಂದು ಒಕ್ಕೂಟ ತಿಳಿಸಿದೆ.
“ಬಸವ ಸಂಸ್ಕೃತಿ ಅಭಿಯಾನ ಮಾಡುವವರು ಚಿಯಾ ಮಿಯಾ ಸ್ವಾಮಿಗಳು ಎಂದು ಅಪ್ರಬುದ್ಧರಾಗಿ ಮಾತಾಡಿದ್ದೀರಿ ಇದು ನಿಮ್ಮ ಮೇಲರಿಮೆ ಮತ್ತು ನಿಮ್ಮ ನಾಲಿಗೆ ಸಂಸ್ಕೃತಿಯನ್ನು ತೋರಿಸುತ್ತಿದೆ.
ಕರ್ನಾಟಕ ಸರಕಾರ ವಿಶ್ವಗುರು ಬಸವಣ್ಣನವರನ್ನು ಕನ್ನಡದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷವಾದರೂ ಈ ವರೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳದವರಾದ ನಿಮ್ಮಿಂದ ನಾವು ಪಾಠ ಕಲಿಯಬೇಕಿಲ್ಲ,” ಎಂದು ಒಕ್ಕೂಟ ದಿಂಗಾಲೇಶ್ವರ ಶ್ರೀಗಳಿಗೆ ತಿಳಿಸಿದೆ.