ಬೆಂಗಳೂರು
ರಾಷ್ಟ್ರೀಯ ಬಸವದಳ ಬೆಂಗಳೂರು ದಕ್ಷಿಣದ ನೂತನ ಬಸವ ಮಂಟಪದ ಕಟ್ಟಡದ ಉದ್ಘಾಟನೆ ಸಮಾರಂಭ 8 ಜೂನ್ 2025 ಭಾನುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಗುರುಬಸವ ಮಂಟಪದಲ್ಲಿ ನಡೆಯಲಿದೆ.

ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಡಾ. ಗಂಗಾದೇವಿ ಮಾತಾಜಿ ಸಾನಿಧ್ಯ ವಹಿಸಲಿದ್ದಾರೆ. ಉದ್ಘಾಟನೆಯನ್ನು ರಾಜ್ಯ ಸರಕಾರದ ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರು ಮಾಡಲಿದ್ದು, ಅನುಭಾವ ನುಡಿಗಳನ್ನು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶರಣ ಡಾ. ಶಿವಾನಂದ ಜಾಮದಾರ ಆಡಲ್ಲಿದ್ದಾರೆ.
ಕಲಬುರ್ಗಿಯ ಜಗದ್ಗುರು ಮರುಳ ಶಂಕರ ದೇವರಪೀಠದ ಪೂಜ್ಯ ಸಿದ್ದ ಬಸವ ಕಬೀರ ಸ್ವಾಮೀಜಿ, ಬಸವಕಲ್ಯಾಣ ಕಲ್ಯಾಣ ಮಹಾಮನೆ ಗುಣತೀರ್ಥದ ಪೂಜ್ಯ ಬಸವ ಪ್ರಭು ಸ್ವಾಮೀಜಿ, ಬಸವ ಮಂಟಪದ ಗೌರವಧ್ಯಕ್ಷ ಪೂಜ್ಯ ಬಸವಯೋಗಿ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಅಧ್ಯಕ್ಷ ಸಂತೋಷ ಬಿರಾದಾರ ಮತ್ತು ಇತರ ಪದಾಧಿಕಾರಿಗಳು ಸರ್ವರಿಗೂ ಸ್ವಾಗತ ಕೋರಿದ್ದಾರೆ.