ಬೆಳಗಾವಿ
ತನು ಮನದಿಂದ ಭಾಗವಹಿಸಿದಾಗ ಸಂಘಟನೆ ಬಲಗೊಳ್ಳುತ್ತದೆ. ಸಂಘಟನೆ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗಬೇಕು. ಅವಶ್ಯಕ ಸಲಹೆ ಸೂಚನೆ ನೀಡಬೇಕು, ಸೇವಾಮನೋಭಾವದಿಂದ, ದುರಾಸೆ, ದುರಾಲೋಚನೆಗಳಿಲ್ಲದೆ ತೊಡಗಿಸಿಕೊಂಡಾಗ ಸ೦ಘಟನೆ ಬಲಪಡಿಸಲು ಸಾಧ್ಯವೆಂದು ಲಿಂಗಾಯತ ಸಂಘಟನೆ ಅಧ್ಯಕ್ಷರಾದ ಈರಣ್ಣಾ ದೇಯಣ್ಣವರ ಹೇಳಿದರು.
ಡಾ. ಫ. ಗು. ಹಳಕಟ್ಟಿ ಭವನದಲ್ಲಿ ನಡೆದ ಲಿಂಗಾಯತ ಸಂಘಟನೆಯ ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶರಣ ಮಹಾ೦ತೇಶ ಪುರಾಣಿಕ ಅವರು ಸೈಬರ್ ಅಪರಾಧಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾತನಾಡಿದರು.
ಗುರುಗಳಿಗೆ ವಿದ್ಯಾರ್ಥಿಗಳು ಗೌರವಿಸುವ ಮನೋಭಾವನೆ ಕಡಿಮೆ ಆಗಿದೆ. ಡಿಗ್ರಿ ಮಾಡಿದ್ದರೂ ಮೌಲ್ಯಯುತ ಬದುಕು ಕಡಿಮೆಯಾಗಿದೆ. ಮಕ್ಕಳಿಗೆ ಬಿಗಿಯಾದ ಕಾನೂನುಗಳಿಲ್ಲ, ಎಲ್ಲರಿಗೂ ಒಂದೇ ಮಗು ಎಂದು ಹೆಚ್ಚು ಹೆಚ್ಚು ಪ್ರೀತಿಸುತ್ತಾರೆ ಅದು ಹೋಗಬೇಕು ಎಂದು ಪ್ರೊ. ಅಂಬಿಕಾ ಅತಿಥಿಗಳಾಗಿ ಬಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮೂಹಿಕ ಪ್ರಾಥ೯ನೆಯನ್ನು ಶರಣ ಬಿ. ಪಿ. ಜೇವಣಿ ನಡೆಸಿಕೊಟ್ಟರು. ಆನಂದ ಕರ್ಕಿ, ವಿ. ಕೆ. ಪಾಟೀಲ, ಜಾಹ್ನವಿ ಘೋಪ೯ಡೆ ಈ ಎಲ್ಲ ಶರಣರು ವಚನ ವಿಶ್ಲೇಷಣೆ ಮಾಡಿದರು. ಪ್ರಸಾದ ದಾಸೋಹ ಸೇವೆಯನ್ನು ಶರಣ ಮಹಾದೇವ ಕೆಂಪಿಗೌಡರ ಮಾಡಿದರು. ಸಂಗಮೇಶ ಅರಳಿ ನಿರೂಪಿಸಿದರು.

ಶೇಖರ ವಾಲಿ ಇಟಗಿ, ಸುನೀಲ ಸಾಣೇಕೊಪ್ಪ, ಸಿದ್ದಪ್ಪ ಸಾರಾಪೂರಿ, ಬಾಬಣ್ಣ ತಿಗಡಿ, ಡಾ.ಅಂಬಿಕಾ, ಮಹಾಂತೇಶ ಮೆಣಸಿನಕಾಯಿ, ಗಂಗಪ್ಪ ಉಣಕಲ್, ಸದಾಶಿವ ದೇವರಮನಿ, ಬಸವರಾಜ ಕರಡಿಮಠ ಮುಂತಾದವರು ಉಪಸ್ಥಿತರಿದ್ದರು.