ಎರ್ಲಾಂಗನ್
ಬಸವ ಸಮಿತಿ ಯುರೋಪ್ ವತಿಯಿಂದ ಜರ್ಮನಿಯ ಎರ್ಲಾಂಗನ್ ನಲ್ಲಿ ಮೇ 31 ರಂದು ಬಸವ ಜಯಂತಿಯನ್ನು ಆಯೋಜಿಸಲಾಗಿದೆ.
ಬಸವ ಜಯಂತಿ ಕಾರ್ಯಕ್ರಮದಲ್ಲಿ ಮೆರವಣಿಗೆ, ಪುಸ್ತಕ ಬಿಡುಗಡೆ, ದಾಸೋಹ, ವಚನ ವಾಚನ, ನೃತ್ಯ, ಸಂಗೀತ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಬಸವಣ್ಣನವರ ಜನ್ಮದಿನ ಸ್ಮರಣಾರ್ಥವಾಗಿ ಯುರೋಪಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಸವ ಜಯಂತಿಯನ್ನು ಆಯೋಜಿಸಲಾಗುತ್ತಿದೆ, ಇದು ಎಲ್ಲ ಬಸವ ಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ, ಎಂದು ಆಯೋಜಕರು ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಮ್ಯೂನಿಚ್, ಮ್ಯಾಗ್ಡೆಬರ್ಗ್, ಫ್ರಾಂಕ್‌ಫರ್ಟ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಜರ್ಮನಿಯ ಎಲ್ಲಾ ಕನ್ನಡ ಸಂಘಗಳು ಬೆಂಬಲ ನೀಡುತ್ತಿವೆ.
ಸೋಮನಗೌಡ ಪಾಟೀಲ್, ಸಿಮ್ರಾನ್ ಮಾಮಿ, ಭರತ ಗೌಡ, ಪ್ರದೀಪ ಚೌಹಾಣ್, ರಮೇಶ್ ರಾಮಾನುಜಂ, ಆಶಾ ರಮೇಶ್, ಸಂಜಯ್, ಅಮರ್ ಮುನ್ನೋಳ್ಳಿಮಠ ಕಾರ್ಯಕ್ರಮದ ಪ್ರಾಯೋಜಕರಾಗಿದ್ದಾರೆ.
ಈಗಾಗಲೇ 150 ಕ್ಕಿಂತ ಹೆಚ್ಚು ಬಸವ ಭಕ್ತರು ಮತ್ತು ಅವರ ಕುಟುಂಬದವರು ಕಾರ್ಯಕ್ರಮಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಕಾರ್ಯಕ್ರಮವನ್ನು ಯುರೋಪಿನ ಬೇರೆ ಬೇರೆ ದೇಶಗಳಲ್ಲಿ ಆಯೋಜಿಸುವ ಸಾಧ್ಯತೆ ಇದೆ.
ಮ್ಯೂನಿಚ್‌ನ ಭಾರತೀಯ ರಾಯಭಾರಿ ಕಚೇರಿ, ಆಸ್ಲಾಂಡರ್ ಇಂಟಿಗ್ರೇಶನ್ ಬೈರತ್-ಎರ್‌ಲಾಂಗನ್, ಐಸಿಎಫ್ ತಂಡ, ನಟ್ರಾಸ್ ನಾಟ್ಯ ತಂಡ, ಓಂ ಧೋಲ್ ತಾಶಾ, ಮಾತಂಗಿ ನೃತ್ಯ ತಂಡ, ಚಾಮುಂಡಿ ಸ್ಕೂಲ್ ಆಫ್ ಮ್ಯೂಸಿಕ್, ಭಾವತರಂಗ ಸಂಗೀತ ತಂಡ ಈ ಕಾರ್ಯಕ್ರಮಕ್ಕೆ ಕೈಜೋಡಿಸುತ್ತಿವೆ.
ಯುರೋಪಿನ ಬಸವ ಭಕ್ತರು ಕಳೆದ ಎರಡು ವರ್ಷಗಳ ಪ್ರಯತ್ನದಿಂದ ಬಸವ ಸಮಿತಿ ಯುರೋಪ್ ಸಂಘವನ್ನು ಸ್ಥಾಪಿಸಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರು
ಬಸವ ಸಮಿತಿ ಯುರೋಪ್ ಸಂಘದ 11 ಕಾರ್ಯಕಾರಿ ಸಮಿತಿಯ ಸದಸ್ಯರು:
ಇನ್ನೂ ಪಂಚಾಕ್ಷರಿ ಲಕ್ಷ್ಮೇಶ್ವರಮಠ (ಪೋಲೆಂಡ್), ಪ್ರಶಾಂತ ಶಿವನಾಗಣ್ಣ (ಪೋಲೆಂಡ್), ಹೇಮೇಗೌಡ ರುದ್ರಪ್ಪ (ಇಟಲಿ), ನವೀನ್ ಓದೊಗೌಡ್ರ (ಇಟಲಿ), ಸತೀಶ ಪಲ್ಲೇದ (ಆಸ್ಟ್ರಿಯಾ), ದೀಪಕ್ ಜಗದೀಶ್ ಗೋಶ್ವಾಲ್ (ಬೆಲ್ಜಿಯಂ), ಸಂಜಯ್ ಗೊಡಬನಹಾಳ ಪ್ರಸನ್ನಕುಮಾರ (ಫ್ರಾನ್ಸ್), ವಿಜಯಕುಮಾರ ತುಮಕೂರು ಚಿಕ್ಕರುದ್ರಯ್ಯ (ಜರ್ಮನಿ), ಪ್ರಿಯಾ ಚಂದ್ರಶೇಖರ (ಜರ್ಮನಿ), ವೇದ ಕುಮಾರಸ್ವಾಮಿ (ಜರ್ಮನಿ), ಶಶಿಕಾಂತ ಗ. ಗುಡ್ಡದಮಠ (ಜರ್ಮನಿ) ಇವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.
