ಬಸವ ಸಂಸ್ಕೃತಿ ಅಭಿಯಾನದ 9ನೇ ದಿನದ ಲೈವ್ ಬ್ಲಾಗ್
ಸಮಾರಂಭದ ಮಂಗಲ
ಸಾಣೇಹಳ್ಳಿ ಶಿವಸಂಚಾರ ಕಲಾತಂಡದ ಜಯಕಲ್ಯಾಣ ಜಯಗೀತೆಯೊಂದಿಗೆ ಸಮಾರಂಭ ಮಂಗಲಗೊಂಡಿತು.

ಪೂಜ್ಯರಿಂದ ಆಶೀರ್ವಚನ
ಪೂಜ್ಯ ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಂದ ಆಶೀರ್ವಚನ.

ಸಮಾರಂಭದ ನೇತೃತ್ವವಹಿಸಿರುವ ಬಸವಧರ್ಮ ಪೀಠದ ಪೂಜ್ಯ ಡಾ.ಗಂಗಾ ಮಾತಾಜಿಯಿಂದ ಆಶೀರ್ವಚನ.

ಗದಗ ಶಿವಾನಂದ ಮಠದ ಶಿವಾನಂದ ಮಹಾಸ್ವಾಮಿಗಳಿಂದ ಆಶೀರ್ವಚನ.

ಹೊಸಳ್ಳಿ ಬೂದೀಶ್ವರ ಸಂಸ್ಥಾನ ಮಠದ ಪೂಜ್ಯ ಬೂದೀಶ್ವರ ಸ್ವಾಮೀಜಿ ಆಶೀರ್ವಚನ ನೀಡುತ್ತಿದ್ದಾರೆ.

ವಚನ ನೃತ್ಯ
ರಾಜೇಶ್ವರಿ ಕಲಾ ಕುಟೀರ ವಿದ್ಯಾರ್ಥಿಗಳಿಂದ ವಚನ ನೃತ್ಯ.


ಅಧ್ಯಕ್ಷೀಯ ಭಾಷಣ
ಕಲಬುರ್ಗಿ ಪ್ರತಿಷ್ಠಾನದ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಪ್ರೊ. ಚಂದ್ರಶೇಖರ ವಸ್ತ್ರದ ಅವರಿಂದ ಅಧ್ಯಕ್ಷೀಯ ಭಾಷಣ.

ಬಸವರಾಜ ವೆಂಕಟಾಪುರ ಅವರ ಪುಸ್ತಕ ಬಿಡುಗಡೆ
ಬಸವರಾಜ ವೆಂಕಟಾಪುರ ಬರೆದ ವಚನಶಾಸ್ತ್ರ ಸಾರ ಭಾಗ-1, ಭಕ್ತಸ್ಥಲ ಭಾಗ-2 ವಚನ ವಿಶ್ಲೇಷಣಾ ಗ್ರಂಥ ಸಮಾರಂಭದಲ್ಲಿ ಬಿಡುಗಡೆಗೊಂಡಿತು.

‘ಅಸ್ಪೃಶ್ಯತಾ ನಿವಾರಣೆಗೆ ಶರಣರ ಕೊಡುಗೆ’
ಪೂಜ್ಯ ನಿಜಗುಣಾನಂದ ಶ್ರೀಗಳಿಂದ ಅನುಭಾವ.

‘ಶಿವಚಿಂತೆ ಶಿವಜ್ಞಾನ ಇಲ್ಲದ ಮನುಜರು’
ಆಳಂದ ತೋಂಟದಾರ್ಯ ಅನುಭವ ಮಂಟಪದ ಪೂಜ್ಯ ಕೋರಣೇಶ್ವರ ಶ್ರೀಗಳಿಂದ ಅನುಭಾವ

ಸಂಜೆಯ ಸಮಾರಂಭ
ಪೂಜ್ಯರು, ಗಣ್ಯರು ಬಸವ ಪುತ್ಥಳಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಸಾರ್ವಜನಿಕ ಸಮಾರಂಭಕ್ಕೆ ಚಾಲನೆ. ಸ್ವಾಗತ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಡಿ.ಆರ್. ಪಾಟೀಲ ಸರ್ವರಿಗೂ ಸ್ವಾಗತ ಕೋರಿದರು.





ಮೆರವಣಿಗೆಯ ಮುಖ್ಯ ಆಕರ್ಷಣೆ
ಮೆರವಣಿಗೆಯ ಮುಖ್ಯ ಆಕರ್ಷಣೆಗಳಾದ ಧರ್ಮಗುರು ಬಸವಣ್ಣ, ಯಡೆಯೂರ ಸಿದ್ದಲಿಂಗೇಶ್ವರ ಭಾವಚಿತ್ರದ ಅಡ್ಡಪಲ್ಲಕ್ಕಿ, ಬಸವ ರಥ.




ಗದಗ ಮೆರವಣಿಗೆಯಲ್ಲಿ ಸಾವಿರಾರು ಶರಣ, ಶರಣೆಯರು
ಬಸವೇಶ್ವರ ವೃತ್ತದಿಂದ ಶುರುವಾಗಿ
ತೋಂಟದಾರ್ಯ ಮಠ ತಲುಪಿದ ಮೆರವಣಿಗೆ










ಸಂವಾದ ಮುಕ್ತಾಯ
ಸಾಣೇಹಳ್ಳಿ ಕಲಾತಂಡದ ಕಲ್ಯಾಣ ಗೀತೆಯೊಂದಿಗೆ ಸಂವಾದ ಕಾರ್ಯಕ್ರಮ ಮುಕ್ತಾಯ.
ಚಿತ್ರಗಳಲ್ಲಿ ಸಂವಾದ ಕಾರ್ಯಕ್ರಮ









ತುಂಬಿದ ಶ್ರೀಮಠದ ಶಿವಾನುಭವ ಮಂಟಪ


ಸಂವಾದದ ಉದ್ಘಾಟನೆ
ಪೂಜ್ಯರು, ಗಣ್ಯರು ಜ್ಯೋತಿ ಬೆಳಗಿಸುವ ಮುಖಾಂತರ ಮತ್ತು ಬಸವ ಪುತ್ಥಳಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಸಂವಾದ ಕಾರ್ಯಕಮದ ಉದ್ಘಾಟನೆ. ಶೇಗುಣಸಿ ಮಹಾಂತಪ್ರಭು ಸ್ವಾಮೀಜಿಗಳಿಂದ ಪ್ರಾಸ್ತಾವಿಕ ಮಾತು.




ಷಟಸ್ಥಲ ಧ್ವಜಾರೋಹಣ
ಶ್ರೀ ತೋಂಟದಾರ್ಯ ಮಠದ ಆವರಣದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ ಷಟಸ್ಥಲ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪೂಜ್ಯರು, ಮಾಜಿ ಶಾಸಕ ಡಿ. ಆರ್. ಪಾಟೀಲ, ಬಸವಪರ ಸಂಘಟನೆಗಳ ಮುಖಂಡರು, ಸಾರ್ವಜನಿಕರು, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.


ಬಸವ ರಥಕ್ಕೆ ಸ್ವಾಗತ
ತೋಂಟದಾರ್ಯ ಮಠದ ಮುಂದೆ ಬಸವ ರಥವನ್ನು ಪೂಜ್ಯರು, ಲಿಂಗಾಯತ, ಬಸವಪರ ಸಂಘಟನೆಗಳು, ಸಾರ್ವಜನಿಕರು ಭಕ್ತಿಯಿಂದ ಸ್ವಾಗತ ಮಾಡಿಕೊಂಡರು.


ಅಭಿಯಾನದಲ್ಲಿ ಭಾಗವಹಿಸುತ್ತಿರುವ ಸಮುದಾಯಗಳು
ಹಡಪದ ಅಪ್ಪಣ್ಣ, ಸಮಗಾರ ಹರಳಯ್ಯ, ಡೋಹಾರ ಕಕ್ಕಯ್ಯ, ಹೂಗಾರ ಮಾದಯ್ಯ, ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಶಂಕರ ದಾಸಿಮಯ್ಯ, ನುಲಿಯ ಚಂದಯ್ಯ, ಮಡಿವಾಳ ಮಾಚಿದೇವ, ನುಲಿಯ ಚಂದಯ್ಯ, ಶಿವಯೋಗಿ ಸಿದ್ಧರಾಮೇಶ್ವರ, ಜೇಡರ ದಾಸಿಮಯ್ಯ, ಕುರುಬ ಗೊಲ್ಲಾಳೇಶ್ವರ, ಒಕ್ಕಲಿಗ ಮುದ್ದಣ್ಣ ಮತ್ತಿತರ ಸಮಾಜಗಳು.
ಅಭಿಯಾನದಲ್ಲಿ ಭಾಗವಹಿಸುತ್ತಿರುವ ಸಂಘಟನೆಗಳು
ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವ ಕೇಂದ್ರ, ಶ್ರೀ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಬಸವಧರ್ಮ ಮಹಾಪೀಠ, ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ದಲಿತ ಕಲಾ ಮಂಡಳಿ, ದಲಿತ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕನ ಬಳಗ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ.
ಇಂದಿನ ಕಾರ್ಯಕ್ರಮ
11 ಗಂಟೆಗೆ ಶಿವಾನುಭವ ಮಂಟಪದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ.
ಸಂಜೆ 5 ಗಂಟೆಗೆ ಬಸವೇಶ್ವರ ವೃತ್ತದಿಂದ ತೋಂಟದಾರ್ಯ ಮಠದವರೆಗೆ ಪಾದಯಾತ್ರೆ, ಮೆರವಣಿಗೆ.
ಸಂಜೆ 6 ಗಂಟೆಗೆ ಶಿವಾನುಭವ ಮಂಟಪದಲ್ಲಿ ಸಾರ್ವಜನಿಕ ಸಮಾರಂಭ.
ರಾತ್ರಿ 8 ಗಂಟೆಗೆ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ ‘ಜಂಗಮದೆಡೆಗೆ’ನಾಟಕ ಪ್ರದರ್ಶನ.
ರಾತ್ರಿ 9 ರ ನಂತರ ಪ್ರಸಾದ ದಾಸೋಹ ವ್ಯವಸ್ಥೆ ಇರುತ್ತದೆ.
ಅಭಿಯಾನ ಮುಂದುವರಿಯಲಿ, ಬಸವಸಂದೇಶ ದಶದಿಕ್ಕುಗಳಲ್ಲಿ ಬೆಳಗಲಿ. ಜೈ ಬಸವೇಶ ಲಿಂಗಾಯತ ಧರ್ಮ ವಿಶ್ವಾಧರ್ಮವಗಲಿ.