ಗದಗಿನ ಹೊಂಬಳ ಗ್ರಾಮದಲ್ಲಿ ಅಕ್ಕಮಹಾದೇವಿ ವಚನ ಚಿಂತನ

ಶರಣು ಅಂಗಡಿ, ಗದಗ
ಶರಣು ಅಂಗಡಿ, ಗದಗ

ಗದಗ:

ಶರಣ ಸಂಕುಲದಲ್ಲಿ ಶರಣೆ ಅಕ್ಕಮಹಾದೇವಿಯವರದು ಒಂದು ವಿಶಿಷ್ಟ ಹೆಸರಾಗಿದೆ. ಅವರು ಬರೆದ ಭಾಷೆ ಅದ್ಭುತ. ವೈರಾಗ್ಯವೇ ಮೈವೆತ್ತಂತಿರುವ ಅಕ್ಕನ ವಚನಗಳು ತುಂಬಾ ವೈಶಿಷ್ಟ್ಯತೆಯಿಂದ ಕೂಡಿವೆ. ಈ ಕಾರಣಕ್ಕೆ ಅಕ್ಕನ ವಚನವೊಂದು ಸರ್ವಶರಣರ ವಚನಗಳಿಗೆ ಸಮವೆಂದು ಹೇಳಲಾಗುವುದು ಎಂದು ಉಪನ್ಯಾಸಕ ರಮೇಶ ಕಲ್ಲನಗೌಡರ ಅಭಿಪ್ರಾಯಪಟ್ಟರು.

ಅವರು ನಾಡಕವಿ ಚೆನ್ನವೀರ ಕಣವಿ ಅವರ ಜನ್ಮಸ್ಥಳ ಹೊಂಬಳ ಗ್ರಾಮದಲ್ಲಿ ಗದಗ ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಹೊಂಬಳ ಗ್ರಾಮದ ಶ್ರೀ ಹೊನ್ನಕೇರಿ ಮಲ್ಲಿಕಾರ್ಜುನ ದೇವಸ್ಥಾನ ಸೇವಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ೨೦೨೪ರ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ವಚನ ಚಿಂತನ ಮಾಡುತ್ತಾ ಅವರು ಮಾತನಾಡಿದರು.

ಚೆನ್ನಮಲ್ಲಿಕಾರ್ಜುನನೇ ನನ್ನ ಗಂಡನೆಂದು ಹೇಳಿಕೊಳ್ಳುವ ಅಕ್ಕ, ಚೆನ್ನಮ್ಮಲ್ಲಿಕಾರ್ಜುನನ ವಿಷಯಕ್ಕೆ ಬಂದಾಗ ಮಾತ್ರ ಮಧುರವಾಗುತ್ತಾರೆ. ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚೆಲುವಂಗೆ ತಾನು ಒಲಿದೆ ಎನ್ನುವ ಅವರ ಪದ ಅದ್ಭುತವಾಗಿದೆ. ಈ ಕಾರಣಕ್ಕಾಗಿ ಅಕ್ಕನನ್ನು ಉಳಿದ ಶರಣರು ಜ್ಞಾನನಿಧಿ, ವೈರಾಗ್ಯನಿಧಿ ಎಂದು ಕರೆದಿದ್ದಾರೆ. ಶರಣ ಧರ್ಮದಲ್ಲಿ ಅಕ್ಕನ ವ್ಯಕ್ತಿತ್ವ ಬಲು ವೈಶಿಷ್ಟ್ಯತೆಯಿಂದ ಕೂಡಿದೆ ಎಂದು ಕಲ್ಲನಗೌಡರ ಹೇಳಿದರು.

ಅಕ್ಕನ ವಚನ ಕುರಿತು ಶರಣೆ ಗೌರಕ್ಕ ಬಡಿಗಣ್ಣವರ ಹಾಗೂ ಶರಣ ಎಸ್.ಎ.ಮುಗದ ಅವರು ಸಹ ಮಾತನಾಡಿದರು. ಬಸವಣ್ಣನವರ ಧರ್ಮಪತ್ನಿ ನೀಲಮ್ಮನವರ ಕುರಿತು ಕವಿ ಚನ್ನವೀರ ಕಣವಿಯವರು ಬರೆದ ಕವನವನ್ನು ಸಹನಾ ಆತಲಗಿ ಹಾಗೂ ಗಿರಿಜಾ ಹಿರೇಮಠ ಸುಶ್ರಾವ್ಯವಾಗಿ ಹಾಡಿದರು.

ಅಧ್ಯಕ್ಷತೆಯನ್ನು ಬಸವರಾಜ ರೋಣದ ವಹಿಸಿಕೊಂಡಿದ್ದರು. ವಿ.ಕೆ.ಕರೇಗೌಡ್ರ, ಶೇಖಣ್ಣ ಕಳಸಾಪುರಶೆಟ್ಟರ, ಶೇಖಣ್ಣ ಕವಳಿಕಾಯಿ, ಚಂದ್ರು ಹುಣಸಿಕಟ್ಟಿ, ಬಸವರಾಜ ರೋಣದ, ಎಸ್.ಎಸ್.ದಿಡ್ಡಿಮನಿ, ಈಶ್ವರಪ್ಪ ಹುಣಸಿಕಟ್ಟಿ, ಚಂದ್ರು ಹುಣಸಿಕಟ್ಟಿ, ಗುರಣ್ಣ ಬಾನಿ, ಶಿವಲಿಂಗಪ್ಪ ದೊಡ್ದುರ, ಮಲ್ಲಪ್ಪ ಹುಣಸಿಕಟ್ಟಿ, ಶ್ರೀಶೈಲಪ್ಪ ಮುರಗಿ, ಹೊಂಬಳ ಗ್ರಾಮಸ್ಥರು, ಸಂಘಟನೆಯ ಮತ್ತೀತರರು ಭಾಗವಹಿಸಿದ್ದರು.

Share This Article
2 Comments
  • 🙏🙏 ಮಹಾನ್ ವೈರಾಗ್ಯದ ಮುತಿ೯ ಅಕ್ಕಮಹಾದೇವಿಯವರ ವಚನ ಮಂಥನ ಕಾಯ೯ಕ್ರಮ ಮಾಡಿದ ಎಲ್ಲರಿಗೂ ಅನಂತ ಶರಣು ಶರಣಾಥಿ೯ಗಳು 🙏🙏

Leave a Reply

Your email address will not be published. Required fields are marked *