LIVE JLM ಸಮಾವೇಶ: “ಆರ್ ಎಸ್ ಎಸ್ ಮುಖಂಡರಿಗೆ ಯಾಕೆ ಈ ಪುಸ್ತಕದ ಮೇಲೆ ಇಷ್ಟೊಂದು ಮೋಹ”

ಬಸವ ಮೀಡಿಯಾ
ಬಸವ ಮೀಡಿಯಾ
1 year agoSeptember 22, 2024 11:44 am

ಜಾಗತಿಕ ಲಿಂಗಾಯತ ಮಹಾಸಭಾದ ಆರನೆಯ ಸರ್ವಸಾಮಾನ್ಯ ವಾರ್ಷಿಕ ಸಭೆ ಗದಗಿನಲ್ಲಿ ರವಿವಾರ ನಡೆಯಿತು. ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಸುವುದರ ಬಗ್ಗೆ ಮತ್ತು ನಿಜಾಚರಣೆಗಳನ್ನು ಜನರಿಗೆ ಮುಟ್ಟಿಸುವ ಬಗ್ಗೆ ಮಹತ್ತರ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ನಂತರ JLM ಮುಖಂಡರು ಮಾಧ್ಯಮಗಳ ಜೊತೆ ಮಾತನಾಡಿದರು.

1 year agoSeptember 22, 2024 4:27 pm

ಸುದ್ದಿಘೋಷ್ಠಿಯಲ್ಲಿ ಖಡಕ್ ಹೇಳಿಕೆಗಳು

ಹೊಸಬಾಳೆ, ಮುಕುಂದ, ಶಂಕರಾನಂದ ಈ ಆರ್ ಎಸ್ ಎಸ್ ಮುಖಂಡರು ಯಾಕೆ ಇಷ್ಟು ಈ ಪುಸ್ತಕದ ಬಗ್ಗೆ ‌ಆಸಕ್ತಿ ವಹಿಸಿದ್ದಾರೆ, ಏನಿದು ಹುನ್ನಾರ….

ನಮ್ಮ ಲಿಂಗಾಯತ ಚಳುವಳಿ ಜೋರು ಇದ್ದಾಗ ಪ್ರಕಟ ಮಾಡದ ಪುಸ್ತಕವನ್ನು ಈ ಬಸವತತ್ವ ವಿರೋಧಿ ಆರ್. ಎಸ್ ಯ.ಎಸ್. ನವರು ಈಗ ಏಕೆ ಪ್ರಕಟ ಮಾಡಿದ್ದು?

ಲಿಂಗಾಯತ ಧರ್ಮದ ಸ್ವಾಮಿಗಳಾದ ವಚನಾನಂದ ಶ್ರೀ ಹಾಗೂ ಸದಾಶಿವಾನಂದ ಶ್ರೀಗಳು ಲಿಂಗಾಯತ ಧರ್ಮ ವಿರೋಧಿಗಳ ಜೊತೆಗೆ ಕೈಜೋಡಿಸಿದ್ದು ಖಂಡನಾರ್ಹ …

ಲಿಂಗಾಯತ ತತ್ವ ಸಿದ್ಧಾಂತದ ಬುಡಕ್ಕೆ ಕೈ ಹಾಕುವ ಪ್ರಯತ್ನ ಇದು …

ವಚನದರ್ಶನ ಪುಸ್ತಕದ ಮೂಲಕ ಶರಣರ ಐತಿಹಾಸಿಕ ಸತ್ಯವನ್ನು ಪೌರಾಣಿಕಗೊಳಿಸುವ ಯತ್ನಕ್ಕೆ ಖಂಡನೆ

ನಿವೇದಿತಾ ಕುಟುಂಬದ ಮೇಲಿನ ದಬ್ಬಾಳಿಕೆಗೆ ಖಂಡನೆ …

ಸಮಾಜದಲ್ಲಿ ಸಂಘರ್ಷ ಉಂಟು ಮಾಡುವ ಯತ್ನ ಈ ವಚನದರ್ಶನ ಪುಸ್ತಕ ….

ಹಿಂದೂ ಎಂಬುದು ರಾಷ್ಟ್ರದ ಸಂಕೇತ ಹೊರತು ಧರ್ಮದ ಸಂಕೇತವಲ್ಲ. ಹಿಂದೂ ಎಂಬುದು ನೆಲ, ಸಂಸ್ಕೃತಿಯ ಸಂಕೇತವೇ ಹೊರತು ಅದೊಂದು ಧರ್ಮವಲ್ಲ …

1 year agoSeptember 22, 2024 4:26 pm

JLM ಸಮಾವೇಶದ ಅಂಗವಾಗಿ ಗದಗಿನಲ್ಲಿ ಎಸ್ ಎಂ ಜಮಾದಾರ್ ಸುದ್ದಿಘೋಷ್ಠಿ

1 year agoSeptember 22, 2024 4:40 pm

ಇಂದಿನ ಸಮಾವೇಶದಲ್ಲಿ ತೆಗೆದುಕೊಂಡ ಕೆಲವು ಮುಖ್ಯ ನಿರ್ಣಯಗಳು

1 year agoSeptember 22, 2024 2:37 pm

ಮುಖ್ಯ ನಿರ್ಣಯ: ನಿಜಾಚರಣೆ

ಜೆ.ಎಲ್.ಎಂ.ನಿಂದ ಏಕರೂಪದ ನಿಜಾಚರಣೆ ಕಾರ್ಯಕ್ರಮ ಪುಸ್ತಕ ತರುವ ಉದ್ದೇಶ ಹೊಂದಲಾಗಿದೆ.

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಿಜಾಚರಣೆ ಕಾರ್ಯಗಾರ ಜೆ.ಎಲ್.ಎಂ. ನಿರ್ದೇಶನ ಹಾಗೂ ಸಹಯೋಗದಲ್ಲಿ ನಡೆಸುವುದಾಗಿ ಅಶೋಕ ಬರಗುಂಡಿ ಹೇಳಿದರು.

ಮೊದಲ ಕಾರ್ಯಾಗಾರ ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಿಂದ ಪ್ರಾರಂಭಿಸಲಾಗುವದು.

ನಂತರ ಉಳಿದ ಜಿಲ್ಲೆಗಳಲ್ಲಿ ನಡೆಸುವ ಯೋಜನೆ ರೂಪಿಸಲಾಗುವದು…

1 year agoSeptember 22, 2024 2:26 pm

ಮುಖ್ಯ ನಿರ್ಣಯ: ಚುನಾವಣೆ

ಐದು ವರ್ಷ ತುಂಬಿದ ಜಿಲ್ಲಾ ಘಟಕಗಳಿಗೆ 2026 ಫೆಬ್ರುವರಿ 18ರ ಒಳಗಾಗಿ ಚುನಾವಣೆ: ಎಸ್ ಎಂ ಜಾಮದಾರ್

1 year agoSeptember 22, 2024 2:02 pm

ಬಸವರಾಜ ಧನ್ನೂರ್ ಭಾಷಣ

ಬಸವತತ್ವ ಹೇಳುವ ಸ್ವಾಮೀಜಿ, ವ್ಯಕ್ತಿಗಳಿಗೆ ಅಗತ್ಯವಿದ್ದಾಗ ಜೆ.ಎಲ್.ಎಂ. ಕೂಡಲೇ ಮುಂದಾಗಿ ರಕ್ಷಣೆ ನೀಡಬೇಕು

ಎಲ್ಲಾ ಜಿಲ್ಲೆಗಳಲ್ಲಿ ವಿದ್ಯಾರ್ಥಿ ಹಾಸ್ಟೆಲ್ ತೆರೆಯಲು ಜೆ.ಎಲ್.ಎಂ. ಮುಂದಾಗಬೇಕು

1 year agoSeptember 22, 2024 12:40 pm

ಎಸ್ ಎಂ ಜಾಮದಾರ್ ಭಾಷಣ

ದೇಶದ ಒಂದು ದೊಡ್ಡ ಸಂಘಟನೆ ವಚನ ದರ್ಶನ ಪುಸ್ತಕವನ್ನು ಪ್ರಕಟಿಸಿ, ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿರುವುದರ ಮರ್ಮವೇನು? ಗದಗ, ಧಾರವಾಡ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಲ್ಲೇ ಹೆಚ್ಚು ಚಟುವಟಿಕೆ ಹಮ್ಮಿಕೊಂಡಿರುವುದು ಏಕೆ

ಗದಗಿನಲ್ಲಿ ಲಿಂಗದೀಕ್ಷೆ ಕಾರ್ಯಕ್ರಮ ನಡೆಸುವುದು ಯಾಕಾಗಿ ಎಂದು ಪ್ರಶ್ನಿಸಿದರು …

1 year agoSeptember 22, 2024 12:37 pm

ಬಸವಣ್ಣನವರನ್ನು ನಂಬದಿರುವ ವ್ಯಕ್ತಿಗಳಿಂದ ವಚನ ದರ್ಶನ

ಜಾಗತಿಕ ಲಿಂಗಾಯತ ಮಹಾಸಭಾದ ಆರನೆಯ ಸರ್ವಸಾಮಾನ್ಯ ವಾರ್ಷಿಕ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಭಾಷಣ.

1 year agoSeptember 22, 2024 12:05 pm

ನೆರೆದಿರುವ ಶರಣ ಗಣ

1 year agoSeptember 22, 2024 11:52 am

ವೇದಿಕೆಯ ಮೇಲೆ

1 year agoSeptember 22, 2024 11:42 am

ಅಲ್ಲಮಪ್ರಭು ಮಹಾಸ್ವಾಮಿಗಳು, ರುದ್ರಾಕ್ಷಿಮಠ, ಬೆಳಗಾವಿ

ಅಲ್ಲಮಪ್ರಭು ಮಹಾಸ್ವಾಮಿಗಳು, ರುದ್ರಾಕ್ಷಿಮಠ, ಬೆಳಗಾವಿ, ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದಾರೆ. ಈಗ ಶ್ರೀಗಳು ಉದ್ಘಾಟನಾ ಭಾಷಣ ಮಾಡುತ್ತಿದ್ದಾರೆ.

1 year agoSeptember 22, 2024 11:37 am

ನ್ಯಾಯಾಧೀಶ ಶ್ರೀ ಕೆಂಪಣ್ಣಗೌಡರಿಂದ ಷಟಸ್ಥಲ ಧ್ವಜಾರೋಹಣ

ನಗರದ ಶ್ರೀ ಜಗದ್ಗುರು ತೋಂಟದ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಕಾರ್ಯಕ್ರಮ ಶುರುವಾಗಿದೆ. ನ್ಯಾಯಾಧೀಶ ಶ್ರೀ ಕೆಂಪಣ್ಣಗೌಡರಿಂದ ಷಟಸ್ಥಲ ಧ್ವಜಾರೋಹಣ. ಗದಗ ಬಸವದಳ, ಜೆ.ಎಲ್.ಎಂ. ಸದಸ್ಯರಿಂದ ಧ್ವಜಗೀತೆ.

Contents
ಜಾಗತಿಕ ಲಿಂಗಾಯತ ಮಹಾಸಭಾದ ಆರನೆಯ ಸರ್ವಸಾಮಾನ್ಯ ವಾರ್ಷಿಕ ಸಭೆ ಗದಗಿನಲ್ಲಿ ರವಿವಾರ ನಡೆಯಿತು. ಜಿಲ್ಲಾ ಘಟಕಗಳಿಗೆ ಚುನಾವಣೆ ನಡೆಸುವುದರ ಬಗ್ಗೆ ಮತ್ತು ನಿಜಾಚರಣೆಗಳನ್ನು ಜನರಿಗೆ ಮುಟ್ಟಿಸುವ ಬಗ್ಗೆ ಮಹತ್ತರ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ನಂತರ JLM ಮುಖಂಡರು ಮಾಧ್ಯಮಗಳ ಜೊತೆ ಮಾತನಾಡಿದರು.ಸುದ್ದಿಘೋಷ್ಠಿಯಲ್ಲಿ ಖಡಕ್ ಹೇಳಿಕೆಗಳುJLM ಸಮಾವೇಶದ ಅಂಗವಾಗಿ ಗದಗಿನಲ್ಲಿ ಎಸ್ ಎಂ ಜಮಾದಾರ್ ಸುದ್ದಿಘೋಷ್ಠಿಇಂದಿನ ಸಮಾವೇಶದಲ್ಲಿ ತೆಗೆದುಕೊಂಡ ಕೆಲವು ಮುಖ್ಯ ನಿರ್ಣಯಗಳುಮುಖ್ಯ ನಿರ್ಣಯ: ನಿಜಾಚರಣೆಮುಖ್ಯ ನಿರ್ಣಯ: ಚುನಾವಣೆಬಸವರಾಜ ಧನ್ನೂರ್ ಭಾಷಣಎಸ್ ಎಂ ಜಾಮದಾರ್ ಭಾಷಣಬಸವಣ್ಣನವರನ್ನು ನಂಬದಿರುವ ವ್ಯಕ್ತಿಗಳಿಂದ ವಚನ ದರ್ಶನನೆರೆದಿರುವ ಶರಣ ಗಣವೇದಿಕೆಯ ಮೇಲೆಅಲ್ಲಮಪ್ರಭು ಮಹಾಸ್ವಾಮಿಗಳು, ರುದ್ರಾಕ್ಷಿಮಠ, ಬೆಳಗಾವಿನ್ಯಾಯಾಧೀಶ ಶ್ರೀ ಕೆಂಪಣ್ಣಗೌಡರಿಂದ ಷಟಸ್ಥಲ ಧ್ವಜಾರೋಹಣ
Share This Article
4 Comments

Leave a Reply

Your email address will not be published. Required fields are marked *