ಗದಗ
ತಾಲೂಕಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದ ಕಾರ್ಯಕ್ರಮದಲ್ಲಿ ಡಿಸೆಂಬರ್ 20ರಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯ ಸಹಯೋಗದೊಂದಿಗೆ ಜಿಲ್ಲಾ ಪ್ರಥಮ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ
ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ 20ರಂದು ಬೆಳಿಗ್ಗೆ 9ಕ್ಕೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ರಾಷ್ಟ್ರಧ್ವಜಾರೋಹಣ ಮಾಡುವರು. ಎ.ಎನ್. ನಾಗರಹಳ್ಳಿ ನಾಡಧ್ವಜಾರೋಹಣ ನೆರವೇರಿಸುವರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಪರಿಷತ್ ಧ್ವಜಾರೋಹಣ ಮಾಡುವರು. ಬಳಗಾನೂರ ಗ್ರಾಮ ಪಂಚಾಯತ ಅಧ್ಯಕ್ಷೆ ಶಿವಲಿಂಗವ್ವ ಜಿಗಳೂರ, ಉಪಾಧ್ಯಕ್ಷೆ ಬಸವ್ವ ಚಟ್ರಿ ಉಪಸ್ಥಿತರಿರುವರು ಎಂದರು.
ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮ 20ರ ಬೆಳಗ್ಗೆ 10ಕ್ಕೆ ನಡೆಯಲಿದೆ. ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ ಸಾನಿಧ್ಯ ಹಾಗೂ ಚಿಕೇನಕೊಪ್ಪದ ಶಿವಶಾಂತವೀರ ಶರಣರು ನೇತೃತ್ವ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಸಮ್ಮೇಳನ ಉದ್ಘಾಟಿಸುವರು. ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಪ್ರಣತಿ ಗಡಾದ ವಹಿಸಿಕೊಂಡಿದ್ದಾರೆ. ಕೆ.ಎ. ಬಳಿಗೇರ, ಸುಧಾ ಹುಚ್ಚಣ್ಣವರ, ಸಾಕ್ಷಿದೇವರಡ್ಡಿ, ಎ.ಓ. ಪಾಟೀಲ, ಡಾ. ಶಿವಪ್ಪ ಕುರಿ ಭಾಗವಹಿಸುವವರು ಎಂದರು.

ಬಾಲ ಶರಣಸಿರಿ ಪ್ರಶಸ್ತಿಯನ್ನು ಡಾ. ವೈಧೃತಿ ಕೋರಿಶೆಟ್ಟರ, ಪುನೀತರಡ್ಡಿ ಎನ್.ಎ., ಸಿದ್ದಾರ್ಥ ಬಡ್ನಿ, ಅಪೂರ್ವ ವಡ್ಡರ, ರಕ್ಷಿತಾ ಚುರ್ಚಿಹಾಳ, ಪೂರ್ವಿ ಜೋಶಿ, ಫಲಕೇಶ ಪಾಟೀಲ, ಕೃಷ್ಣಪ್ರಿಯಾ ಬದಿ ಅವರಿಗೆ ನೀಡಲಾಗುತ್ತದೆ ಎಂದರು.
ಶರಣ ತತ್ವ ಚಿಂತನ ಗೋಷ್ಠಿಯ ಮೊದಲ ಗೋಷ್ಠಿಯಲ್ಲಿ ಡಾ. ನಿಂಗು ಸೊಲಗಿ ಅಧ್ಯಕ್ಷತೆ ವಹಿಸುವರು. ಪೂಜಾ ಸ್ವಾಮಿ, ಚೈತ್ರಾ ರೋಣದ ಉಪನ್ಯಾಸ ನೀಡುವರು ಎಂದರು.
ಸಮಾರೋಪ ಸಮಾರಂಭವನ್ನು ಸಂಜೆ 4ಕ್ಕೆ ನಡೆಯಲಿದೆ. ಹೊಸಳ್ಳಿ ಬೂದಿಶ್ವರ ಮಠದ ಅಭಿನಯ ಬೂದೀಶ್ವರ ಸ್ವಾಮೀಜಿ ಸಾನಿಧ್ಯ ಹಾಗೂ ಪ್ರೊ. ಚಂದ್ರಶೇಖರ ವಸ್ತ್ರದ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಸರ್ವಾಧ್ಯಕ್ಷೆ ಪ್ರಣತಿ ಗಡಾದ, ಡಾ. ಸಿ. ಸೋಮಶೇಖರ, ಸೋಮಶೇಖರ ಗಾಂಜಿ, ಆರ್. ಎಸ್. ಬುರಡಿ, ವಿ.ವಿ. ನಡುವಿನಮನಿ, ಬಿ.ವೈ. ಡೊಳ್ಳಿನ, ಎಂ.ಕೆ. ಲಮಾಣಿ ಭಾಗವಹಿಸುವರು ಎಂದರು.
ಇದೇ ಸಂದರ್ಭದಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಗೋಷ್ಠಿಯಲ್ಲಿ ಕಳಕಯ್ಯ ಸಾಲಿಮಠ, ಬೂದಪ್ಪ ಅಂಗಡಿ, ಸುಲೋಚನ ಐಹೊಳ್ಳಿ, ಗಿರಿಜಾ ಹಸಬಿ, ಡಿ.ಎಸ್. ಬಾಪೂರಿ, ಕದಳಿ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ, ನಂದಾ ಕಪ್ಪತನವರ, ಬಸವರಾಜ ಕೊಟಗಿ, ನಾಗರಹಳ್ಳಿ, ಐ.ಬಿ. ಬೆನಕೊಪ್ಪ, ಎಸ್.ಎಂ. ಮರಿಗೌಡ್ರ, ಅಶ್ವಿನಿ ಅಂಕಲಕೋಟೆ ಉಪಸ್ಥಿತರಿದ್ದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಕುಮಾರಿ ಪ್ರಣತಿ ಗಡಾದ ಅವರಿಗೆ ಅವರ ಮನೆಯಲ್ಲಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.


ಅತ್ಯುತ್ತಮವಾದ ಕೆಲಸ ಶರಣು ಶರಣಾರ್ಥಿಗಳು ಶರಣ ಸಾಹಿತ್ಯ ಪರಿಷತ್ತಿಗೆ