ಗದಗ:
ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ವಚನ ಶ್ರಾವಣ 2024ರ ಕಾರ್ಯಕ್ರಮ ಶರಣ ಮಹಾಂತೇಶ ಹವಾಲ್ದಾರ ಅವರ ಮನೆಯಲ್ಲಿ ಗುರುವಾರ ನಡೆಯಿತು.
ಅವಿರಳ ಜ್ಞಾನಿ ಚನ್ನಬಸವಣ್ಣನವರ ವಚನ ಚಿಂತನೆಯನ್ನು ಹಿರಿಯ ಶರಣರಾದ ಎಸ್.ಎ.ಮುಗದ ಅವರು ಮಾಡಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯನ್ನು ಮಾಡಲಾಯಿತು. ಕದಳಿ ಮಹಿಳಾ ವೇದಿಕೆ ಗದಗ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ, ತಾಲೂಕಾ ಅಧ್ಯಕ್ಷೆ ಸುಲೋಚನ ಐಹೊಳೆ, ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ದಾನರೆಡ್ಡಿ, ತಾಲೂಕು ಅಧ್ಯಕ್ಷ ಪ್ರಕಾಶ ಅಸುಂಡಿ ಈ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಹಿರಿಯ ಶರಣ ವಿ.ಕೆ.ಕರೇಗೌಡ್ರ ವಹಿಸಿದ್ದರು.
ಶರಣ/ ಶರಣೆಯರಾದ ಎಂ.ಬಿ. ಲಿಂಗದಾಳ, ಪ್ರಶಾಂತ ಲಿಂಗದಾಳ, ಸುರೇಶ ಹಳ್ಳಿಕೇರಿ, ರಾಮಣ್ಣ ಕಳ್ಳಿಮನಿ, ಮಾರುತಿ ಹೊಸೂರ, ಎನ್ .ಹೆಚ್. ಹಿರೇಸಕ್ಕರಗೌಡ್ರ, ಗೌರಕ್ಕ ಬಡಿಗಣ್ಣವರ, ನಾಗರತ್ನ ಅಸುಂಡಿ, ಸರೋಜಾ ಮುಗದ, ಮಂಜುಳಾ ಹಾಸಲಿಕರ, ಲೀಲಾವತಿ ಬೆಳ್ಳುಳ್ಳಿ, ಗಂಗಮ್ಮ ಹೂಗಾರ ಹಾಗೂ ಸಿದ್ದಲಿಂಗ ನಗರದ ಜನ ಭಾಗಿಯಾಗಿದ್ದರು.