ಗದಗಿನ ತೋಂಟದಾರ್ಯ ಜಾತ್ರೆಯಲ್ಲಿ ಮಕ್ಕಳ ವಚನ ಕಂಠಪಾಠ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಜಗದ್ಗುರು ಶ್ರೀ ಎಡೆಯೂರ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ, ಮಕ್ಕಳಿಗಾಗಿ ವಚನ ಕಂಠಪಾಠ ಸ್ಪರ್ಧೆ ನಡೆಯಿತು.

75 ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಕ್ಕಳು ಆಸಕ್ತಿ, ಹುರುಪಿನಿಂದ ವಚನಗಳನ್ನು ಹೇಳಿದರು. ಪಾಲಕರು ತಮ್ಮ ಮಕ್ಕಳು ಸಂತಸದಿಂದ ಪಾಲ್ಗೊಂಡು ವಚನ ಹೇಳುವಿಕೆಯ ದೃಶ್ಯ ಕಂಡು ಸಂತೋಷಪಟ್ಟರು.

ಕಿರಿಯರ ವಿಭಾಗ;
೧) ಶ್ರಾವ್ಯ ಕಲ್ಗುಡಿ, ಪ್ರಥಮ ಸ್ಥಾನ
೨) ಯುವರಾಣಿ ನಾಯಕ, ದ್ವಿತೀಯ ಸ್ಥಾನ
೩) ಗಂಗಾಂಬಿಕಾ ಮೆಣಸಿನಕಾಯಿ, ತೃತೀಯ ಸ್ಥಾನ ಪಡೆದರು.

ಹಿರಿಯರ ವಿಭಾಗ;
೧) ಶಶಾಂಕ ಫಕೀರೇಶ ಸಂಕದಾಳ, ಪ್ರಥಮ ಸ್ಥಾನ
೨) ವಚನ ಆಲತಗಿ, ದ್ವಿತೀಯ ಸ್ಥಾನ
೩) ಪ್ರಣವಿ ಕೆರಿ, ತೃತೀಯ ಸ್ಥಾನ ಗಳಿಸಿದರು.

ಜಾತ್ರಾ ಮಹೋತ್ಸವ ಕಮಿಟಿಯ ಉಪಾಧ್ಯಕ್ಷೆ ಶರಣೆ ಶೈಲಾ ಕೊಡೇಕಲ್ಲ, ಕರವೀರಯ್ಯ ಕೋರಿಮಠ, ಕಾರ್ಯದರ್ಶಿ ಶಿವಪ್ಪ ಕತ್ತಿ, ಕೋಶ್ಯಾಧ್ಯಕ್ಷ ಈರಣ್ಣ ಗೊಡಚಿ ಉಪಸ್ಥಿತರಿದ್ದು ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.

ಶರಣೆ ಗೌರಮ್ಮ ಬಡಿಗಣ್ಣವರ ಮತ್ತು ಶಸಾಪ ಜಿಲ್ಲಾಧ್ಯಕ್ಷ ಕೆ.ಎ. ಬಳಿಗೇರ ಅವರು ವಚನಗಳು ಹಾಗೂ ಶರಣರ ಕುರಿತು ಮಾತನಾಡಿದರು.

ಬಸವದಳದ ಅಧ್ಯಕ್ಷರಾದ ಶರಣ ವೀರನಗೌಡ ಕರೇಗೌಡ್ರ ಮತ್ತು ನಿಂಗನಗೌಡ ಹಿರೇಸಕ್ಕರಗೌಡ್ರ ಸ್ಪರ್ಧಾ ನಿರ್ಣಾಯಕರಾಗಿ ಕರ್ತವ್ಯ ನಿರ್ವಹಿಸಿದರು.

ಸ್ವಾಗತವನ್ನು ಶಿವಕುಮಾರ ಬಂಡೆಮೇಗಳ ಮಾಡಿದರು. ಕಾರ್ಯಕ್ರಮವನ್ನು ಶರಣೆ ಜ್ಯೋತಿ ಹೇರಲಗಿ ನಿರೂಪಿಸಿದರು. ಮಕ್ಕಳ ಪಾಲಕರು ಉಪಸ್ಥಿತರಿದ್ದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
Leave a comment

Leave a Reply

Your email address will not be published. Required fields are marked *