ಗಜೇಂದ್ರಗಡ ಅದ್ದೂರಿ ಬಸವಣ್ಣನವರ 892ನೇ ಜಯಂತ್ಯೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಗಜೇಂದ್ರಗಡ

ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು, ಲಿಂಗಾಯತ ಧರ್ಮ ಸಂಸ್ಥಾಪಕ, ಅಪ್ಪ ಬಸವಣ್ಣನವರ 892ನೇ ಜಯಂತ್ಯೋತ್ಸವವು ಮುಂಜಾನೆ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಿತು.

ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಬಸವ ಕೇಂದ್ರ, ಲಿಂಗಾಯತ ಉಪಪಂಗಡಗಳ ಒಕ್ಕೂಟ, ಬಸವಪರ ಸಂಘಟನೆಗಳ ನೇತೃತ್ವದಲ್ಲಿ, ವಾಹನದ ಮೇಲೆ ಐಕ್ಯಮಂಟಪ ಮಾದರಿಯಲ್ಲಿ ಬಸವಣ್ಣನವರ ಭವ್ಯ ಮೂರ್ತಿಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.

ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಂ.ಪಿ.ಎಂ.ಸಿ.) ಎದುರಿಗೆ ಪುರಸಭೆಯ ಅಧ್ಯಕ್ಷ ಸುಭಾಷ ಮ್ಯಾಗೇರಿ, ರೈತ-ಕಾರ್ಮಿಕರಾದ ಪ್ರಕಾಶ ವದೇಗೋಳ, ನಾರಾಯಣಪ್ಪ ರಾಠೋಡ, ಪರಶುರಾಮ ರಾಥೋಡ, ಮಾಜಿ ಸೈನಿಕರಾದ ಎಚ್.ಎಸ್. ಮುಜಾವರ, ಇಮಾಮಸಾಬ ಕೋಲಕಾರ, ಹುಸೇನಸಾಬ ನಿಶಾನ್ದಾರ ಅವರುಗಳು ಸಾಮೂಹಿಕವಾಗಿ ಬಸವಣ್ಣನವರ ಮೂರ್ತಿಗೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಬಸವಣ್ಣ, ಬಸವಾದಿ ಶರಣರಿಗೆ ಜಯಘೋಷಗಳನ್ನು ಹಾಕಲಾಯಿತು. ವಚನಗಳನ್ನು ವಡಪುಗಳ ಮುಖಾಂತರ ಹೇಳುತ್ತ ಸಾಗಲಾಯಿತು.

ಕಳಕಯ್ಯ ಸಾಲಿಮಠ, ಬಸವರಾಜ ಅಂಗಡಿ, ಗುರುಲಿಂಗಯ್ಯ ಓದಸುಮಠ, ಮಲ್ಲಿಕಾರ್ಜುನ ಹಡಪದ, ಜ್ಯೋತಿ ವಾಲಿ, ವಿಜಯಲಕ್ಷ್ಮೀ ಸಾಲಿಮಠ, ಕೀರ್ತಿ ಕೊಟಗಿ, ರೂಪಾ ಅಂಗಡಿ, ಅನಸೂಯಾ ಹೊನವಾಡ, ಮೈಲಾರಪ್ಪ ಸೋಂಪುರ, ಬಸವರಾಜ ಹೊಳಿ, ಬಸವರಾಜ ಕೊಟಗಿ, ಬಸವರಾಜ ಹೂಗಾರ, ಕುಮಾರ ಹೊನವಾಡ, ರಾಜು ಸಾಂಗ್ಲೀಕರ್, ಹೆಚ್.ಎಸ್. ಸೋಂಪುರ, ಮಂಜುನಾಥ ಹೂಗಾರ, ಶರಣಪ್ಪ ಹಡಪದ, ಸುರೇಶ ಚೋಳಿನ, ಸಾಗರ ವಾಲಿ, ಯು.ಆರ್. ಚನ್ನಮ್ಮನವರ, ಎಫ್.ಡಿ. ಕಟ್ಟಿಮನಿ, ಸಂತೋಷ ಕತ್ತಿಶೆಟ್ಟರ, ಮಂಜುನಾಥ ಹರಿಹರ, ರಾಘು ಹೋಳಗಿ, ಜಗದೀಶ ಬಳಿಗೇರ, ರವಿ ಗಡೇದವರ, ಬಸವರಾಜ ಶೀಲವಂತರ, ರವಿ ಹಾಸಿಗಲ್ಲ, ಎಂ. ಎಸ್. ಅಂಗಡಿ, ಶ್ರೀಕಾಂತ ತಾಳಿಕೋಟಿ, ಬಿ.ಎಸ್. ಬಸನಗೌಡರ, ಅವಿನಾಶ ಮತ್ತಿಕಟ್ಟಿ, ಉಮೇಶ ಪಟ್ಟಣಶೆಟ್ಟಿ, ಅಶೋಕ ಅಂಗಡಿ, ಬಸವರಾಜ ಚೋಳಿನ, ಕುಮಾರ ಸಂಗಮದ, ಕಳಕಪ್ಪ ಪತಂಗರಾಯ, ರವೀಂದ್ರ ಹೊನವಾಡ ಹಾಗೂ ಹಲವಾರು ಶರಣ-ಶರಣೆಯರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KrUBaygNRHP7UH6E1mcSRN

Share This Article
Leave a comment

Leave a Reply

Your email address will not be published. Required fields are marked *