ಗಮನ ಸೆಳೆದ ವಚನಗಳ ಹಾಡಿಗೆ ಚಿತ್ರ ದರ್ಶನ

ಕಲಬುರ್ಗಿ

ಅದು ತುಂಬಾ ಪ್ರಶಾಂತವಾದ ಸ್ಥಳ. ಅಲ್ಲಿ ಮಧುರ ಕಂಠದಲ್ಲಿ ತೇಲಿಬರುವ ಹಾಡು. ಹಾಡಿಗೆ ತಕ್ಕಂತೆ ಹಾರ್ಮೋನಿಯಂ ನುಡಿಸುವುದು ತಬಲಾ ವಾದ್ಯದ ನಾದ‌ ನಿನಾದ. ವಚನಗಳ ಹಾಡು ಸಂಗೀತಕ್ಕೆ ತಕ್ಕಂತೆ ಬೋರ್ಡ್ ಮೇಲೆ ಚಿತ್ರ ಬಿಡಿಸುವುದು ನಡೆದಿತ್ತು.

ಈ ಕ್ರಿಯೆಯನ್ನು ಕಂಡು, ಕೇಳಿದ ಶ್ರೋತೃ ವರ್ಗ ತಲೆದೂಗುವುದು, ಚಪ್ಪಾಳೆ ಬಾರಿಸುವ ಪ್ರಕ್ರಿಯೆ ನಡೆದಿತ್ತು. ಮೇಲಿನ ಈ ದೃಶ್ಯ ಜಯನಗರದ ಅನುಭವ ಮಂಟಪದದಲ್ಲಿ ರವಿವಾರ ಕಂಡು ಬಂದಿತು.

ಕಲಬುರಗಿ ಬಸವ ಸಮಿತಿಯ ಅಕ್ಕನ ಬಳಗ ಹಾಗೂ ಡಾ.ಬಿ.ಡಿ. ಜತ್ತಿ ಅಧ್ಯಯನ‌ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಶನಿವಾರದಿಂದ ಆರಂಭವಾಗಿರುವ ಮಹಾದೇವಿಯಕ್ಕಗಳ ಸಮ್ಮೇಳನ-14 ರ ಹಾಡು-ದರ್ಶನ ನಾಲ್ಕನೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಚನಗಳ ಹಾಡಿಗೆ ಚಿತ್ರ ದರ್ಶನ ಮಾಡುವುದು ಬಹಳ ಕುತೂಹಲ ಹುಟ್ಟಿಸುವಂತಿತ್ತು.

ಡಾ. ಛಾಯಾ ಭರತನೂರ, ಅಶ್ವಿನಿ ಚಿಟ್ಟಾ, ರತ್ನಕಲಾ, ವಿಜಯಲಕ್ಷ್ಮೀ ಕೆಂಗನಾಳ, ವೈಶಾಲಿ ಪಾಟೀಲ ಅವರ ವಚನಗಳ ಹಾಡಿಗೆ ಡಾ. ಶಾಂತಲಾ ನಿಷ್ಠಿ, ಗೀತಾಂಜಲಿ ಮಲ್ಲಾಪುರ, ಶೈಲಾ ಬಿರಾದಾರ, ವಿದ್ಯಾವತಿ ಬಳಿ, ವೀಣಾ ಮಠ ಅವರು ಚಿತ್ರ ದರ್ಶನ ಮಾಡಿಸಿದರು.

ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಸಮ್ಮೇಳನದ ಕಾರ್ಯಾಧ್ಯಕ್ಷೆ ಡಾ. ಜಯಶ್ರೀ ದಂಡೆ ಇತರರು ವೇದಿಕೆಯಲ್ಲಿ ಇದ್ದರು.

Share This Article
Leave a comment

Leave a Reply

Your email address will not be published. Required fields are marked *