ಕಲಬುರ್ಗಿ
ನಗರದ ಜಯನಗರದ ಅನುಭವ ಮಂಟಪದಲ್ಲಿ ಎರಡು ದಿನಗಳ ಮಹಾದೇವಿ ಅಕ್ಕಗಳ ಸಮ್ಮೇಳನ-೧೪ ನಡೆಯಿತು.
ಮಹಿಳೆಯರಿಗಾಗಿ, ಮಹಿಳೆಯರು ಕೂಡಿ ಮಾಡಿದ ಮಹತ್ವದ ಸಮ್ಮೇಳನವಿದು.
ಎರಡು ದಿನಗಳ ಕಾಲ ಮಹಿಳೆಯರೆ ನಿರೂಪಣೆ, ಸ್ವಾಗತ, ಉಪನ್ಯಾಸ, ವಚನ ಗೋಷ್ಠಿ, ವಚನ ನೃತ್ಯ, ಹೆಜ್ಜೆ ಕುಣಿತ ಮುಂತಾದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಬಹಳ ವಿಶೇಷವಾಗಿತ್ತು.
ಜಯ ನಗರದ ಮಹಿಳಾ ವಚನೋತ್ಸವ ಸಮಿತಿ ವತಿಯಿಂದ ಮಹಾದೇವಿಯಕ್ಕಗಳ ಭಾವಚಿತ್ರದ ಮೆರವಣಿಗೆ ಜರುಗಿತು. ವಚನಗಳ ಹಾಡಿಗೆ ಚಿತ್ರ ದರ್ಶನ ಮಾಡುವುದು ಬಹಳ ಕುತೂಹಲ ಹುಟ್ಟಿಸುವಂತಿತ್ತು.
ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಕಲಬುರಗಿ ಬಸವ ಸಮಿತಿ, ಅಕ್ಕನ ಬಳಗ ಮುಂತಾದ ಸಂಘಟನೆಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ತನುವಿನೊಳಗಿದ್ದು ತನುವ ಗೆದ್ದ ಅಕ್ಕಮಹಾದೇವಿ
ಚನ್ನಮಲ್ಲಿಕಾರ್ಜುನನಿಗೆ ಮನವ ಮಾರಿದ ಅಕ್ಕಮಹಾದೇವಿ
🙏🙏