ಒಂದು ಗ್ರಾಮದಲ್ಲಿ ಧಾರ್ಮಿಕ ಸಭೆ ನಡೆಯುತ್ತಿರುತ್ತದೆ. ವೇದಿಕೆಯ ಮೇಲೆ ಪ್ರಗತಿಪರ ಚಿಂತನೆಯ ಸ್ವಾಮಿಗಳು ಆಸೀನರಾಗಿರುತ್ತಾರೆ.
ಗುರುಗಳು ಅಲ್ಲಿಯೇ ಇದ್ದ ಯುವ ಭಾಷಣಕಾರನಿಗೆ ಮಾತನಾಡಲು ಸೂಚಿಸುತ್ತಾರೆ.
ಯುವ ಚಿಂತಕ ವೇದಿಕೆಯ ಮೇಲೆ ಇದ್ದ ಎಲ್ಲರಿಗೂ ವಂದಿಸಿ ತನ್ನ ಮಾತುಗಳನ್ನು ಆರಂಭಿಸುತ್ತಾನೆ.
ಯುವ ಚಿಂತಕ: ಶರಣ ಬಂಧುಗಳೇ ಗಣಪತಿ ಪೂಜೆ ನಮ್ಮ ಸಂಸ್ಕೃತಿಯೇ.
ಸಭಿಕರು: ಒಕ್ಕೊರಲಿನಿಂದ ಹೌದು ನಮ್ಮ ಸಂಸ್ಕೃತಿ ಎನ್ನುತ್ತಾರೆ.
ಯುವ ಚಿಂತಕ: ಹೇಗೆ ಹೇಳುವಿರಿ.
ಸಭಿಕರು: ನಮ್ಮ ಅಜ್ಜ ಮಾಡುತಿತ್ತು ನಮ್ಮ ಅಪ್ಪ ಮಾಡುತಿದ್ದರು ಈಗ ನಾವು ಮಾಡುತಿದ್ದೇವೆ.
ಯುವ ಚಿಂತಕ: ನಿಮಗೆ ಒಂದು ಕಥೆ ಹೇಳುತ್ತೇನೆ ಎಂದು ಕಥೆ ಪ್ರಾರಂಭಿಸಿದ.
ಸ್ವಾತಂತ್ರ್ಯ ಪೂರ್ವದಲ್ಲಿ ತಿಮ್ಮಜ್ಜ ಎಂಬ ಸ್ವಾತಂತ್ರ್ಯ ಹೋರಾಟಗಾರ ಆತ ಅದ್ಭುತ ಸಂಘಟನಾ ಚತುರ
ದೇಶದ ಸ್ವಾತಂತ್ರ್ಯ ಚಳುವಳಿಗಾಗಿ ತನ್ನ ಆಸ್ಥಿಯನ್ನು ಕಳೆದುಕೊಂಡ.
ದೇಶಕ್ಕೆ ಸ್ವಾತಂತ್ರ್ಯ ಬಂತು ಜನ ಆತನನ್ನು ಆವಿರೋಧವಾಗಿ ಶಾಸಕನನ್ನಾಗಿ ಮಾಡಿದರು.
ಆಳುವ ಸರಕಾರ ಆತನನ್ನು ಮಂತ್ರಿ ಮಾಡಿತು ಕೆಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವಯೋ ಸಹಜವಾಗಿಯೇ ಅವರು ನಿಧನರಾದರು.
ಸಹಜವಾಗಿಯೇ ಜನ ಆತನ ಮಗ ಮಲ್ಲಪ್ಪನನ್ನು ಶಾಸಕರನ್ನು ಮಾಡಿದರು. ಆಳುವ ಸರಕಾರ ಆತನನ್ನು ಮಂತ್ರಿ ಮಾಡಿತು ಆತ ಕೆಲವು ವರ್ಷಗಳ ಕಾಲ ಮಂತ್ರಿ ಆಗಿ ಸ್ವಲ್ಪ ಮಟ್ಟಿಗೆ ಭ್ರಷ್ಟಾಚಾರ ಮಾಡಿ ತನ್ನ ತಂದೆ ಕಳೆದುಕೊಂಡ ಆಸ್ಥಿಯನ್ನು ಪುನಃ ಸಂಪಾದಿಸಿ ವಯೋ ಸಹಜವಾಗಿ ನಿಧನರಾದರು.
ಮಾಮೂಲಿನಂತೆ ಜನ ಮತ್ತೆ ಮಲ್ಲಪ್ಪನ ಮಗ ಸಿದ್ದಪ್ಪನನ್ನು ಗೆಲ್ಲಿಸಿದರು ತಂದೆ ಮತ್ತು ಅಜ್ಜನ ಪ್ರಭಾವದಿಂದ ಮಂತ್ರಿ ಆಗಿ ತನ್ನ ತಂದೆಗಿಂತಲೂ ಹೆಚ್ಚಿನ ಭ್ರಷ್ಟಾಚಾರ ಮಾಡಿ ರಸ್ತೆ ಅಪಘಾತದಲ್ಲಿ ನಿಧನರಾದರು.
ಸಿದ್ದಪ್ಪನ ಮಗ ರಾಜಣ್ಣನನ್ನು ಜನ ಭರ್ಜರಿ ಬಹುಮತದಿಂದ ಗೆಲ್ಲಿಸಿದರು. ಆತ ಕೆಲವು ವರ್ಷಗಳ ಕಾಲ ಶಾಸಕನಾಗಿ ಮಂತ್ರಿ ಆಗಿ ಭರ್ಜರಿ ಭ್ರಷ್ಟಾಚಾರ ಮಾಡುತಿದ್ದ. ಆತನಿಗೆ ಹತ್ತಿರ ಇದ್ದ ಒಬ್ಬ ಹಿರಿಯ ವ್ಯಕ್ತಿ
ಇಷ್ಟೊಂದು ಭ್ರಷ್ಟಾಚಾರ ಮಾಡಬೇಡ ನಿಮ್ಮ ಕುಟುಂಬಕ್ಕೆ ಕಳಂಕ ಎಂದರು.
ಆಗ ರಾಜಣ್ಣ ಸಮ್ಮನಿರಿ ಅಜ್ಜ ನಿಮಗೆ ಗೊತ್ತಿಲ್ಲ ನಮ್ಮ ಅಜ್ಜ ಭ್ರಷ್ಟಾಚಾರಿ ನಮ್ಮ ತಂದೆ ಭ್ರಷ್ಟಾಚಾರಿ ನಾನು ಸಹ ಭ್ರಷ್ಟಾಚಾರಿ ಹೀಗೆ ನಮ್ಮ ವಂಶವೇ ಭ್ರಷ್ಟಾಚಾರಿ ಸಂಸ್ಕೃತಿ ಎಂದನು.
ಯುವ ಚಿಂತಕ ಹೀಗೆ ಕಥೆ ಹೇಳಿ ಮತ್ತೆ ಸಭಿಕರನ್ನು ಮತ್ತೆ ಪ್ರಶ್ನೆ ಮಾಡಿದ.
ಯುವ ಚಿಂತಕ: ಈಗ ಹೇಳಿ ಆತನ ಕುಟುಂಬ ಭ್ರಷ್ಟಾಚಾರಿ ಸಂಸ್ಕೃತಿಯೇ.
ಸಭಿಕರು: ಒಕ್ಕೊರಲಿನಿಂದ ಇಲ್ಲ.
ಯುವ ಚಿಂತಕ: ಹೇಗೆ ಹೇಳುವಿರಿ.
ಸಭಿಕರು: ಅವರ ವಂಶದ ಮೂಲ ಗೊತ್ತಿದ್ದರಿಂದ.
ಯುವ ಚಿಂತಕ: ಈಗ ಹೇಳಿ ಗಣಪತಿ ಪೂಜೆ ನಮ್ಮ ಸಂಸ್ಕೃತಿಯೇ
ಸಭಿಕರು: ಗೊತ್ತಿಲ್ಲ
ಯುವ ಚಿಂತಕ: ಏಕೆ
ಸಭಿಕರು: ನಮ್ಮ ಮೂಲ ನಮಗೆ ಗೊತ್ತಿಲ್ಲ
ಯುವ ಚಿಂತಕ: ಹಾಗಾದರೆ ನಮ್ಮ ಮೂಲ ಯಾವುದು
ಸಭಿಕರು: ಮೌನ
ಯುವ ಚಿಂತಕ: ನಮ್ಮ ಮೂಲ ವಚನ ಸಾಹಿತ್ಯ
( ಸಭಿಕರು ಚಪ್ಪಾಳೆ ತಟ್ಟಿದರು)
ಯುವ ಚಿಂತಕ: ಈಗ ಹೇಳಿ ಗಣಪತಿ ಪೂಜೆ ನಮ್ಮ ಸಂಸ್ಕೃತಿಯೇ
ಸಭಿಕರಲ್ಲಿ ಕೆಲವರು ನಾವು ವಚನ ಸಾಹಿತ್ಯ ಓದಿ ನಿರ್ಧಾರ ಮಾಡುತ್ತೇವೆ
ಆಗ ಒಬ್ಬ ಯುವಕ ಎದ್ದು ನಿಂತು ವಚನ ಸಾಹಿತ್ಯ ನಾನು ಸಹ ಅಲ್ಪಸ್ವಲ್ಪ ಓದಿದ್ದೇವೆ ಗಣಪತಿ ತಿರಸ್ಕರಿಸುವ ಕೆಲವು ವಚನಗಳು ಮಾತ್ರ ಇವೆ ಗಣಪತಿಯನ್ನೇ ತಿರಸ್ಕರಿಸುವ ಗುರಿಯಾಗಿಟ್ಟುಕೊಂಡಿರುವ ವಚನಗಳು ಕಡಿಮೆ ಇವೆ
ಯುವ ಚಿಂತಕ: ಹೌದು ಶರಣರು ಗಣಪತಿಯನ್ನೇ ತಿರಸ್ಕರಿಸುವ ಗುರಿಯಾಗಿರಿಸಿಕೊಂಡ ವಚನಗಳು ಕಡಿಮೆ
ಗಣಪತಿ ಸೇರಿದಂತೆ ಹಲವು ದೇವರನ್ನು ತಿರಸ್ಕರಿಸಿದ ವಚನಗಳು ಸಾಕಷ್ಟು ಇವೆ
ಶರಣರ ಅಭಿಪ್ರಾಯದಲ್ಲಿ ದೇವರು ಮೂರ್ತ ರೂಪದಲ್ಲಿ ಇಲ್ಲ ಸಾವಿಲ್ಲದ ಕೇಡಿಲ್ಲದ ರೂಪ ಇಲ್ಲದ ಚಲುವ
ಜಗದಗಲ ಮುಗಿಲಗಲ ಅಗಮ್ಯ ಅಗೋಚರ ಅಪ್ರತಿಮ
ಹೀಗೆ ದೇವರನ್ನು ಶರಣರು ವಿವರಿಸಿದ್ದಾರೆ
ಎಲ್ಲರೂ ವಚನ ಸಾಹಿತ್ಯ ಓದಿ ಗಣಪತಿ ಪೂಜೆ ನಮ್ಮ ಸಂಸ್ಕೃತಿಯೇ ಎಂದು ನಿರ್ಧರಿಸಿ ಎಂದು ಎಲ್ಲರಿಗೂ ವಂದಿಸಿ ತನ್ನ ಭಾಷಣ ಮುಗಿಸಿದರು
ಶರಣ ಬಂಧುಗಳೇ ನೀವು ಸಹ ಚಿಂತಿಸಿ ವಚನ ಸಾಹಿತ್ಯ ಓದಿ ನಮ್ಮ ಮೂಲವನ್ನು ತಿಳಿದು ಗಣಪತಿ ಸೇರಿದಂತೆ ಎಲ್ಲಾ ದೇವರುಗಳ ಪೂಜೆ ನಮ್ಮ ಸಂಸ್ಕೃತಿಯೇ ಅಲ್ಲವೇ ಎಂದು ನಿರ್ಧರಿಸಿ
ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ, ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ ನೋಡಾ ! ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ.
ಬಸವಣ್ಣ