ಸಾಣೇಹಳ್ಳಿ
೧೯೨೪ರಲ್ಲಿ ಮಹಾತ್ಮ ಗಾಂಧೀಜಿಯವರು ಬೆಳಗಾವಿ ಅಧೀವೇಶನದಲ್ಲಿ ಭಾಗವಹಿಸಿ ನೂರು ವರ್ಷ. ಇದರ ಸವಿನೆನಪು ಸ್ವಾಗತಾರ್ಹ.
ಗಾಂಧಿ ತತ್ವಗಳನ್ನು ಗಾಳಿಗೆ ತೂರಿ ಗಾಂಧಿ ನೆನಪು ಮಾಡಿಕೊಳ್ಳುವುದು ಅದಕ್ಕಾಗಿ ಕೋಟಿ ಕೋಟಿ ಹಣ ದುರ್ವಿನಿಯೋಗ ಮಾಡುವುದು ಗಾಂಧೀಜಿ ಅವರಿಗೆ ಪ್ರಿಯವಾದ ಕಾರ್ಯವಲ್ಲ.
ದೀಪಾಲಂಕಾರ, ಪ್ರತಿಮೆ ಅನಾವರಣ ಸಾಂಕೇತಿಕವಾಗಿಟ್ಟುಕೊಂಡು ಗಾಂಧಿ ವಿಚಾರಗಳನ್ನು ಜನಮನದಲ್ಲಿ ಬಿತ್ತುವ ಕಾರ್ಯ ನಡೆಯಬೇಕು. ಅವರ ಕೃತಿಗಳನ್ನು ಕಡಿಮೆ ಬೆಲೆಯಲ್ಲಿ ಶಾಲಾ ಕಾಲೆಜುಗಳ ವಿದ್ಯಾರ್ಥಿಗಳಿಗೆ ತಲುಪಿಸಬೇಕು.
ಸರಳತೆ, ಪ್ರಾಮಾಣಿಕತೆ, ಸತ್ಯ, ಅಹಿಂಸೆ, ಸತ್ಯಾಗ್ರಹದ ಮಹತ್ವವನ್ನು ಅರಿತು ಆ ದಾರಿಯಲ್ಲಿ ಜನಪ್ರತಿನಿಧಿಗಳು ಮೊದಲು ನಡೆಯುವ ಸಂಕಲ್ಪ ಮಾಡಬೇಕು. ಗಾಂಧಿ ಬಾರತಕ್ಕೇ ಮಿಸಲಿಟ್ಟಿರುವ ಕೋಟಿ ಕೋಟಿ ಹಣ ಸದುಪಯೋಗವಾಗುವಂತಹ ಯೋಜನೆಗಳನ್ನು ಸರ್ಕಾರ ಹಾಕಿಕೊಳ್ಳಬೇಕು.
ಗಾಂಧೀಜಿಯವರ ಬದುಕನ್ನು ಕಟ್ಟಿಕೊಡುವಂತಹ ನಾಟಕ, ಸಂಗೀತ, ನೃತ್ಯ, ಪುಸ್ತಕ ಪ್ರಕಟಣೆ ಇಂತಹ ವಿಧಾಯಕ ಚಟುವಟಿಕೆಗಳತ್ತ ಸರ್ಕಾರ ಗಮನಹರಿಸಬೇಕು.