ಗಂಗಾವತಿ
ರಾಷ್ಟ್ರೀಯ ಬಸವದಳ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಸಂಸ್ಮರಣೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಸವ ಧರ್ಮ ವಿಜಯೋತ್ಸವವು ಯಶಸ್ವಿಯಾಗಿ ಜರುಗಿತು.
ಹತ್ತನೇ ದಿನ ಹರಳಯ್ಯ ತಂದೆ, ಕಲ್ಯಾಣಮ್ಮ ತಾಯಿ, ಲಾವಣ್ಯ ತಾಯಿ, ಮದುವರಸರು, ಶೀಲವಂತ ಶರಣರ ಸಂಸ್ಮರಣೆ ಮತ್ತು ಕಲ್ಯಾಣ ಕ್ರಾಂತಿಯಲ್ಲಿ ವಿಜಯ ಸಾಧಿಸಿದ ಶರಣ ಚೇತನಗಳ ಕುರಿತು ಪೂಜೆ, ಪ್ರಾರ್ಥನೆ ಮತ್ತು ಅನುಭಾವ ನೆರವೇರಿತು.

ಗಂಗಾವತಿ ಗುರು ಬಸವ ಮಂಟಪದಲ್ಲಿ ಶರಣರಾದ ಬಿ.ಸಿ. ಐಗೋಳು ಅವರು ಕಲ್ಯಾಣ ಕ್ರಾಂತಿಯ ಶರಣರ ತ್ಯಾಗ ಬಲಿದಾನದ ಅರಿವು ಮೂಡಿಸಿದರು. ಇಂದು ಮತ್ತೆ ಆ ಗತವೈಭವ ಕಾಣಬೇಕಾದರೆ ಶರಣರ ಆಶಯದಂತೆ ನಾವೆಲ್ಲ ನಡೆಯಬೇಕೆಂದು ಎಚ್ಚರಿಸಿದರು. ರಾಷ್ಟ್ರೀಯ ಬಸವ ದಳ ಕಲ್ಯಾಣ ಕ್ರಾಂತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹೆಚ್. ಮಲ್ಲಿಕಾರ್ಜುನ ಅವರು ಬಸವ ಧ್ವಜಾರೋಹಣ ಮಾಡಿದರು. ದಿಲೀಪಕುಮಾರ ವಂದಾಲ ಅವರು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತವನ್ನು ಬಸವ ಜ್ಯೋತಿ, ನಿರೂಪಣೆ ವೀರೇಶ ಅಸರಡ್ಡಿ, ಶರಣು ಸಮರ್ಪಣೆಯನ್ನು ವಿನಯಕುಮಾರ ಅಂಗಡಿ, ಕೆ. ಪಂಪಣ್ಣ ಅವರು ಪ್ರಾಸ್ತಾವಿಕವಾಗಿ ಮಾತಾಡಿದರು. ಬಸವ ಕೇಂದ್ರದ ಅಧ್ಯಕ್ಷರಾದ ಕೆ. ಬಸವರಾಜ, ಕೆ. ವೀರೇಶಪ್ಪ, ಚನ್ನಬಸಮ್ಮ ಕಂಪ್ಲಿ, ರಾಯಮ್ಮ ಕೆ. ಮತ್ತು ರಾಷ್ಟ್ರೀಯ ಬಸವ ದಳದ ಸದಸ್ಯರು, ಬಸವ ಭಕ್ತರು ಉಪಸ್ಥಿತರಿದ್ದರು.

