ಇದೇ ಎಪ್ರೀಲ್ 28 ರಂದು ಬಸವಣ್ಣನವರ ಅಶ್ವಾರೂಢ ಮೂರ್ತಿಯನ್ನು ಗದಗಿನ ತೋಂಟದಾರ್ಯ ಶ್ರೀಗಳು ಲೋಕಾರ್ಪಣೆ ಮಾಡಲಿದ್ದಾರೆ.
ಗೋಕಾಕ
ತಾಲೂಕಿನ ಖಣಗಾವ-ನಭಾಪುರ ಗ್ರಾಮದ ಅಗಸಿ ಮುಂಭಾಗದಲ್ಲಿ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಅಶ್ವಾರೂಢ ಭವ್ಯ ಮೂರ್ತಿಯನ್ನು ಗ್ರಾಮದ ಬಸವ ಬಳಗದಿಂದ ಪ್ರತಿಷ್ಠಾಪಿಸಲಾಯಿತು.

ಭಜನೆ ಮೇಳ, ಕುಂಭಹೊತ್ತ ಮಹಿಳೆಯರು, ಬಸವ ಜಯಘೋಷಗಳ ಮೆರವಣಿಗೆಗೆ ಗೋಕಾಕ ಶೂನ್ಯ ಸಂಪಾದನೆ ಮಠದ ಪೂಜ್ಯ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸಿ, ಚಾಲನೆ ನೀಡಿದರು.

ಗ್ರಾಮದ ಪ್ರಮುಖ ಬೀದಿಗಳ ಮನೆಗಳ ಮುಂದೆ ರಂಗೋಲಿ ಬಿಡಿಸಲಾಗಿತ್ತು. ಮನೆಮುಂದೆ ಮೂರ್ತಿ ಬಂದಾಗ ಅದಕ್ಕೆ ಪೂಜೆ ಮಾಡಿ ಭಕ್ತರು ಹೂಮಳೆಗರೆದು ಬಸವ ಜಯಘೋಷ ಹಾಕಿದರು.

ಬಸವ ಮೂರ್ತಿಯ ಪ್ರತಿಷ್ಠಾಪನೆಯನ್ನು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ನೆರವೇರಿಸಿದರು.

ಇದೇ ಎಪ್ರೀಲ್ 28 ರಂದು ಈ ಬಸವ ಮೂರ್ತಿಯನ್ನು ಗದುಗಿನ ತೋಂಟದಾರ್ಯ ಮಠದ ಪೂಜ್ಯ ಸಿದ್ಧರಾಮ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ.

ಪಂಚಲೋಹದಿಂದ ತಯಾರಿಸಲಾದ ಮೂರ್ತಿಗೆ 17.50 ಲಕ್ಷ ರೂ. ವೆಚ್ಚವಾಗಿದೆ. 13 ಫೂಟ್ ಎತ್ತರ, 2 ಟನ್ ತೂಕ ಹೊಂದಿದೆ. ತಯಾರಿಕೆಗೆ 10 ತಿಂಗಳು ಸಮಯ ತೆಗೆದುಕೊಳ್ಳಲಾಗಿದೆ ಎಂದು ಶಿಲ್ಪಿ, ಬೆಳಗಾವಿಯ ವಿಕ್ರಮ ಜ್ಯೋತಿಬಾ ಪಾಟೀಲ ಹೇಳಿದರು.
ಗ್ರಾಮದ ಬಸವ ಬಳಗ, ಬಸವಾಭಿಮಾನಿಗಳಿಂದ ಪ್ರತಿಷ್ಠಾಪಿಸಲಾದ ಬಸವೇಶ್ವರ ಮೂರ್ತಿ ಮೆರವಣಿಗೆ ಮತ್ತು ಇತರ ಕಾರ್ಯಗಳ ನೇತೃತ್ವ ವಹಿಸಿ ಶಿದ್ರಾಮಯ್ಯ ಹಿರೇಮಠ, ಅಂಬಿರಾವ ಪಾಟೀಲ, ಬಸಪ್ಪ ವನ್ನೂರ, ಮಹಾಂತೇಶ ಕಡಾಡಿ, ಅಯ್ಯಪ್ಪ ಕಲ್ಲೋಳಿ, ಚಂದ್ರಪ್ಪ ಹಂಚಿನಮನಿ, ಈಶ್ವರ ಭಾಗೋಜಿ, ಮಲ್ಲಪ್ಪ ಪಾಟೀಲ, ಸುರೇಶ ಪಾಟೀಲ, ಚಂದ್ರು ಮಾರಿಹಾಳ, ಶಿವಪ್ಪ ಶೇಬಣ್ಣವರ, ಮಂಜು ಕಲ್ಲೋಳಿ, ಶಂಕರ ಹುರಕಡ್ಲಿ, ಕೆಂಚಪ್ಪ ಕಡಿ, ಸಿದ್ದನಗೌಡ ಪಾಟೀಲ, ಅಪ್ಪಯಾ ಹಮೇಣಿ, ಈರಣ್ಣ ಖನಗಾವಿ, ಅಪ್ಪಯ್ಯ ಹಮ್ಮೇಣಿ, ಈರಪ್ಪ ಖನಗಾವಿ, ಬಸಯ್ಯ ಹೂಗಾರ, ರಮೇಶ ಯಡವನ್ನವರ, ಲಿಂಗನಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.