ಗೌರಿ ಹತ್ಯೆ ಆರೋಪಿ ಮಹಾರಾಷ್ಟ್ರ ಚುನಾವಣೆ ಕಣದಲ್ಲಿ

ಬಸವ ಮೀಡಿಯಾ
ಬಸವ ಮೀಡಿಯಾ

ಜಾಲ್ನಾ (ಮಹಾರಾಷ್ಟ್ರ)

ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಶ್ರೀಕಾಂತ್‌ ಪಾಂಗಾರ್ಕರ್‌ ಅವರು ಮಹಾರಾಷ್ಟ್ರದ ಜಾಲ್ನಾ ಮಹಾನಗರ ಪಾಲಿಕೆಗೆ ಜನವರಿ 15ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಶ್ರೀಕಾಂತ್‌ ಅವರು 13ನೇ ವಾರ್ಡ್‌ನಿಂದ ಕಣಕ್ಕಿಳಿದಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಇತರ ಹಲವು ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ನವೆಂಬರ್ 2024ರ ವಿಧಾನಸಭಾ ಚುನಾವಣೆಗೆ ಮುನ್ನ, ಪಂಗಾರ್ಕರ್ ಶಿವಸೇನೆಗೆ ಸೇರಿದ್ದರು. ಆಗ ಆಕ್ರೋಶದ ಪ್ರತಿಕ್ರಿಯೆ ಬಂದ ನಂತರ, ಶಿಂಧೆ ತಮ್ಮ ಪಕ್ಷ ಸೇರ್ಪಡೆಯನ್ನು ಸ್ಥಗಿತಗೊಳಿಸಿದ್ದರು.

ಶ್ರೀಕಾಂತ್‌ 2001ರಿಂದ 2006 ತನಕ ಜಾಲ್ನಾ ನಗರಸಭೆಯ ಸದಸ್ಯರಾಗಿದ್ದರು. ಅವರು ಅವಿಭಜಿತ ಶಿವಸೇನಾದಿಂದ ಸ್ಪರ್ಧಿಸಿದ್ದರು. 2011ರಲ್ಲಿ ಶಿವಸೇನಾ ಟಿಕೆಟ್‌ ನೀಡದಿದ್ದಾಗ ಹಿಂದು ಜನಜಾಗೃತಿ ಸಮಿತಿ ಸೇರಿದ್ದರು.

ಬೆಂಗಳೂರಿನಲ್ಲಿರುವ ಲಂಕೇಶ್ ಅವರ ನಿವಾಸದ ಹೊರಗೆ ಸೆಪ್ಟೆಂಬರ್ 5, 2017 ರಂದು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಅವರಿಗೆ ಕರ್ನಾಟಕ ಹೈಕೋರ್ಟ್ 2024ರ ಸೆಪ್ಟೆಂಬರ್‌ನಲ್ಲಿ ಜಾಮೀನು ನೀಡಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HxAWJ403uVgK5HFZlxTVut

Share This Article
Leave a comment

Leave a Reply

Your email address will not be published. Required fields are marked *