ವಿಶ್ವಬಸವ ಸೇನೆಯಿಂದ ದೊಡ್ಡಹುಂಡಿಯಲ್ಲಿ ಶರಣ ಅನುಭಾವ ಸಂಗಮ ಕಾರ್ಯಕ್ರಮ

ಬಸವ ಯೋಗೇಶ್
ಬಸವ ಯೋಗೇಶ್

ಗುಂಡ್ಲುಪೇಟೆ

ತಾಲೂಕಿನ ದೊಡ್ಡಹುಂಡಿ ಗ್ರಾಮದಲ್ಲಿ ವಿಶ್ವಬಸವ ಸೇನೆ ಸಂಘಟನೆ ವತಿಯಿಂದ ರಾಜಮ್ಮ (ನಂದಕುಮಾರಿ ಮಹೇಶ )ರವರ ಮನೆಯಲ್ಲಿ ಮನೆ ಮನದ 2ನೇ ಮಾಸಿಕದ ಶರಣ ಅನುಭಾವ ಸಂಗಮ ಹಾಗು ಲಿಂಗೈಕ್ಯ ನಂದೀಶ್‍ರವರ ಸ್ಮರಣೋತ್ಸವ ಶರಣಾನುಭವ ಚಿಂತನ ಗೋಷ್ಠಿ ಸೋಮವಾರ ನಡೆಯಿತು.

ಮನೆ ಹಿರಿಯರು ಮಾಡಿದ ಬಸವಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು.

ಮೂಡಗೂರು ಮಠದ ಶ್ರೀ ಇಮ್ಮಡಿ ಉಧ್ಧಾನಸ್ವಾಮಿಗಳು ಇಷ್ಟಲಿಂಗ ಪೂಜಾ ಮಹತ್ವ ತಿಳಿಸಿ ಲಿಂಗಾಯತ ಧರ್ಮಿಯರು ಶರಣರ ವಿಚಾರಗಳನ್ನ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಬೇಕೆಂದು ಭಕ್ತರಿಗೆ ತಿಳಿಸಿದರು.

ಕಾ.ಸು.ನಂಜಪ್ಪನವರಿಂದ ದೇವರೆಲ್ಲಿದ್ದಾನೆ ಎಂಬುದರ ಬಗ್ಗೆ ಸುವಿಸ್ತಾರವಾಗಿ ಅನುಭಾವ ವಿಚಾರ ನಡೆಯಿತು. ಚೌಹಳ್ಳಿ ಲಿಂಗರಾಜಪ್ಪನವರು ಮೌಡ್ಯಾಚರಣೆಯ ಜೀವನದಿಂದ ಬದುಕಿಗೆ ಹಾಗೂ ರಾಷ್ಟ್ರಕ್ಕೆ ನಷ್ಟವೆಂದರಲ್ಲದೆ ಬಸವಣ್ಣನವರ ಇಷ್ಟಲಿಂಗ ಶಿವಯೋಗವು ಸಕಲ ಸಮಸ್ಯೆಗಳಿಗೆ ಪರಿಹಾರ ಮಾರ್ಗವೆಂದರು.

ನಂಜನಗೂಡಿನ ನಂದೀಶ್ ಮಾಸ್ಟರ್ ಅವರು ಬಸವ ಧರ್ಮದ ನಿಜ ಆಚರಣೆಗಳ ಬಗ್ಗೆ ಅನುಭಾವ ನೀಡಿದರು.

ಬಸವಸೇನೆಯ ಪ್ರಧಾನ ಕಾರ್ಯದರ್ಶಿ ಹೊರಳವಾಡಿ ಮಹೇಶ್ ರವರು ನಿರೂಪಣೆ ಮತ್ತು ಪುಟಾಣಿ ಪೂರ್ವಿಕ ಸ್ವಾಗತ ಮಾಡಿದರು. ಪುಟಾಣಿಗಳಾದ ಪೂರ್ವಿಕ ಮತ್ತು ಜೀವಿಕ ವಚನ ಪ್ರಾರ್ಥನೆ ಮಾಡಿದರು. ಶರಣೆ ನಂದಕುಮಾರಿಮಹೇಶ್ ಅವರು ವಂದನಾರ್ಪಣೆ ಮಾಡಿದರು. ಬಸವಸೇನೆಯ

ಅಧ್ಯಕ್ಷರಾದ ಬಸವಯೋಗೇಶ್ ಮಾತನಾಡಿ ಮನಸ್ಸಿನ ಶ್ರೀಮಂತಿಕೆಗೆ ಬಸವಾದಿಪ್ರಮಥರ ವಿಚಾರಗಳು ಪ್ರಸ್ತುತ ಜಗತ್ತಿಗೆ ಅವಶ್ಯಕತೆಯಿದೆ ಹಾಗು ಮರಣವೇ ಮಹಾನವಮಿ ಎಂದು ಶರಣರು ಸಾವನ್ನು ಶೋಕವೆನ್ನದೆ ಮಹೋನತ್ತ ಶಿವಕಾರ್ಯವೆಂದಿದ್ದಾರೆ ಎಂದು ಮಾತನಾಡಿದರು.

ಉಳಿದಂತೆ ಬಸವಸೇನೆಯ ಎಲ್ಲಾ ಪದಾಧಿಕಾರಿಗಳು ಹಾಗು ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಇಂತಹ ಉಪಯುಕ್ತ ಮನೆ ಮನದ ಶರಣಾನುಭವ ಚಿಂತನ ಘೋಷ್ಠಿ ಕಾರ್ಯಕ್ರಮವನ್ನ ಪ್ರತಿ ತಿಂಗಳು ಪ್ರತಿ ತಾಲೋಕಿನಾದ್ಯಂತ ನಡೆಸುವುದಾಗಿ ವಿಶ್ವ ಬಸವಸೇನೆಯ ಅಧ್ಯಕ್ಷರು ತಿಳಿಸಿದರು.

Share This Article
1 Comment

Leave a Reply

Your email address will not be published. Required fields are marked *

ಅಧ್ಯಕ್ಷರು ವಿಶ್ವ ಬಸವ ಸೇನೆ, ಮೈಸೂರು ಮತ್ತು ಚಾಮರಾಜನಗರ