ಸಿಂದಗಿ:
ಲಿಂಗಾಯತ ಸಂಸ್ಕೃತಿ ನಾಶ ಮಾಡುವ ಯತ್ನಗಳು ವೇಗ ಪಡೆದಿವೆ. ಲಿಂಗಾಯತರನ್ನು ಈ ಕುರಿತು ಜಾಗೃತಗೊಳಿಸಲು ಲಿಂಗಾಯತ ಮಠಗಳು ಎದ್ದೇಳಬೇಕು ಎಂದು ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ ಅವರು ಹೇಳಿದರು.
ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಬುಧವಾರ ನಡೆದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಅನುಭಾವ ನೀಡುತ್ತಿದ್ದರು.
ಲಿಂಗಾಯತವು ಸನಾತನ ವೈದಿಕ ಅನಿಷ್ಠಗಳ ವಿರುದ್ಧ ಹುಟ್ಟಿದ ಒಂದು ಬಂಡಾಯ ಚಳುವಳಿಯಾಗಿದ್ದು, ಅದು ವೈದಿಕ ಮತದ ಅನೇಕ ಅನಾಚಾರಗಳ ವಿರುದ್ಧ ಜನಜಾಗೃತಿಯನ್ನು ಮಾಡಿ ಒಂದು ಜಾತಿ ರಹಿತ ಸಮಾಜವನ್ನು ಸೃಷ್ಠಿಸಿತು ಎಂದರು.

ಹನ್ನೆರಡನೇ ಶತಮಾನದಲ್ಲಿ ಲಿಂಗಾಯತರು ತಳವರ್ಗದ ಶೋಷಿತ ಸಮುದಾಯದವರಾಗಿದ್ದರು, ಬಸವಣ್ಣನವರು ಬ್ರಾಹ್ಮಣ್ಯ ತೊರೆದು ಈ ಜನರಿಗೆ ಘನತೆಯ ಬದುಕನ್ನು ನೀಡಿದರು ಎಂದು ಪಾಟೀಲ ಅವರು ಹೇಳಿದರು.
ಮಠದ ಪೂಜ್ಯರಾದ ಪ್ರಭುಲಿಂಗ ಶರಣರು, ಅಫಜಲಪುರ ತಾಲೂಕು ಚಿಂಚೋಳಿ ಗ್ರಾಮದ ಆನಂದಾಶ್ರಮದ ಶ್ರೀಗಳು, ಆಲಮೇಲ ಆರೂಢ ಮಠದ ಶ್ರೀಗಳು ಹಾಗೂ ಮುಸ್ಲಿಮ್ ಧರ್ಮಗುರುಗಳು ಸಾನಿಧ್ಯ ವಹಿಸಿದ್ದರು.
ಅಫಜಲಪೂರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಚಾಂದಕವಟೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಗದೀಶ ಕಲಬುರ್ಗಿ, ಡಾ.ಬಸವರಾಜ ಹೂಗಾರ, ಮಲ್ಲಿಕಾರ್ಜುನ ಕೆಂಭಾವಿ, ಶರಣಬಸವ ಗಂಗಶೆಟ್ಟಿ, ಸೈನಾಬಿ ಮಸಳಿ, ಮಲಕಣ್ಣ ತಳವಾರ ಹಾಗೂ ಸುತ್ತಮುತ್ತಲಿನ ಅನೇಕ ಗ್ರಾಮದ ಬಸವಭಕ್ತರು ಉಪಸ್ಥಿತರಿದ್ದರು.

🙏🙏
ಒಳ್ಳೆಯ ಕಾರ್ಯಕ್ರಮ