ಜನ್ಮ ಕೊಟ್ಟ ತಾಯಿ ಮೊದಲ ಗುರು, ನಿಮ್ಮ ಬೆಳವಣಿಗೆಗೆ ಸಹಕರಿಸಿದ ತಂದೆ ಎರಡನೇ ಗುರು, ಭೂಮಿ ತಾಯಿ ಮೂರನೇ ಗುರು, ನಾಲ್ಕು ಅಕ್ಷರ ಕಲಿಸಿದ ಶಿಕ್ಷಕರು ನಾಲ್ಕನೇ ಗುರುವಾದರೆ, ನಿಮ್ಮೆಲ್ಲರಿಗೂ ಐದನೇ ಗುರು ಎಂದರೆ ಅದು ಲಿಂಗೈಕ್ಯ ಡಾ.ಶಿವಕುಮಾರ ಮಹಾಸ್ವಾಮಿಗಳು, ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸೋಮವಾರ ಹೇಳಿದರು.
ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಗುರು-ಶಿಷ್ಯರ ಮಹಾಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
“30 ವರ್ಷಗಳ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಈ ಕಾರ್ಯಕ್ರಮ ನಡೆಸುತ್ತಿರುವುದು ಸಂತೋಷದ ವಿಚಾರ, ಆದರೆ ಇಂದು ಸೇರಿರುವ ನೀವೆಲ್ಲರೂ ಜನವರಿ 21 ರ ದಾಸೋಹ ದಿನದಂದು, ಏಪ್ರಿಲ್ 1ರ ಗುರುವಂದನೆಯ ದಿನ ಹಾಗೂ ಶಿವರಾತ್ರಿ ಜಾತ್ರೆಯ ಸಂದರ್ಭದಲ್ಲಿ ಹಾಜರಿದ್ದರೆ, ಇದಕ್ಕಿಂತ ಹೆಚ್ಚಿನ ಸಂತೋಷವಾಗುತ್ತದೆ,” ಎಂದರು.
ಶ್ರೀಮಠದ ವಿದ್ಯಾರ್ಥಿಗಳು ಎಂಬುದೇ ಒಂದು ದೊಡ್ಡ ಗುರುತು, ಎಂದರು.
ಶ್ರೀಮಠದ ವಿದ್ಯಾರ್ಥಿಗಳು ಎಂಬುದೇ ಒಂದು ದೊಡ್ಡ ಗುರುತು, ಎಂದರು.