ಪ್ರತಿ ಹತ್ತು ವರ್ಷಕೊಮ್ಮೆ ಭಾರತ ಸರಕಾರ ನಡೆಸುವ ಧರ್ಮ ಜನಗಣತಿಯಲ್ಲಿ ನಾವು ಲಿಂಗಾಯತರು “ಹಿಂದು-ಲಿಂಗಾಯತ”, “ವೀರಶೈವ-ಲಿಂಗಾಯತ”, ಎಂದು ಬರೆಸುತ್ತೇವೆ. ದಯಮಾಡಿ ಮೇಲಿನ ಎರಡನ್ನೂ ಬರೆಸದೆ ಕೇವಲ ಧರ್ಮದ ಕಾಲಂನಲ್ಲಿ “ಲಿಂಗಾಯತ” ಎಂದು ಬರೆಸಿರಿ. ಜಾತಿಯ ಕಾಲಂನಲ್ಲಿ ನಿಮ್ಮ ನಿಮ್ಮ ಜಾತಿಯನ್ನು ಬರೆಸಿರಿ.
ನಾನು ವೀರಶೈವ ಅನ್ನುವವರು ದಯಮಾಡಿ ನಿಮ್ಮ ಸ್ಕೂಲ್ ದಾಖಲಾತಿಯಲ್ಲಿ “ಹಿಂದು-ಲಿಂಗಾಯತ” ಇದೆ ಎಂದು ನೋಡಿ.
ಭಾರತ ಸ್ವತಂತ್ರ ಸಿಕ್ಕ ನಂತರ 1951ನೇ ಜನಗಣತಿಯಲ್ಲಿ ಹಿಂದು ಅಂದರೆ ಧರ್ಮ, ಮುಸ್ಲಿಮ್ ಅಂದರೆ ಜಾತಿ, ಸುನ್ನಿ ಅಂದರೆ ಉಪಜಾತಿ,. ಹೀಗೆ ಹಿಂದು-ಜೈನ, ಹಿಂದು-ಕ್ರಿಶ್ಚಿಯನ್ನ, ಹಿಂದು-ಮುಸ್ಲಿಮ್, ಹಿಂದು-ಸಿಖ್ ಹಿಂದು-ಬೌದ್ಧ, ಹಿಂದು-ಪಾರ್ಸಿ, ಮತ್ತು ಹಿಂದು-ಲಿಂಗಾಯತ ಎಂದು ಇರುತಿತ್ತು.
ಮುಸ್ಲಿಮ್, ಕ್ರಿಶ್ಚಿಯನ್ ಜೈನ ಬೌದ್ಧ ಪಾರ್ಸಿ, ಸಿಖ್ ಇವೆಲ್ಲವೂ ಧರ್ಮಗಳು ತಮ್ಮ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಕ್ಕ ನಂತರ ಹಿಂದು ಪದವನ್ನು ತೆಗೆದುಹಾಕಿದವು, ಆದರೆ ನಾವು ಲಿಂಗಾಯತರು ಇನ್ನೂ ಅದಕ್ಕೆ ಹಿಂದು ಪದವನ್ನು ಹಿಡಿದುಕೊಂಡಿದ್ದೆವೆ.
ಹಿಂದು-ವೀರಶೈವ ಅಂತ ಎಲ್ಲೂ ಇಲ್ಲ, ಸರಕಾರದ ಯಾವ ದಾಖಲೆಯಲ್ಲಿಯೂ ವೀರಶೈವ ಇಲ್ಲ. ಆದರೂ ನಾವು ಲಿಂಗಾಯತರು ವೀರಶೈವ ಪದವನ್ನು ಬಳಸಿ ಸರಳವಾಗಿ ಸಿಗಬೇಕಾಗಿದ್ದ ಸ್ವತಂತ್ರಧರ್ಮವನ್ನು ಕಳೆದುಕೊಂಡಿದ್ದೆವೆ.
ಸ್ವತಂತ್ರ ಧರ್ಮದ ಮಾನ್ಯತೆ ಸಿಕ್ಕರೆ ನಮಗೆ ಎಷ್ಟು ಲಾಭ ಇದೆ ಎಂದು ನಿಮಗೆ ಗೊತ್ತಾಗಿದ್ದರೆ ನಮಗೆ ಎಂದೋ ಸ್ವತಂತ್ರ ಮಾನ್ಯತೆ ಸಿಕ್ಕಿರುತಿತ್ತು.
2013ರಲ್ಲಿ ಕಾಂಗ್ರೆಸ್ ಸರಕಾರ ತನ್ನ ಕೊನೆಯ ಅವಧಿಯಲ್ಲಿ ಜೈನರಿಗೆ ಮತ್ತು ಲಿಂಗಾಯತರಿಗೆ ಸ್ವತಂತ್ರ ಧರ್ಮ ಮಾನ್ಯತೆ ಪಡೆದುಕೊಳ್ಳಲು ಜೈನರಿಗೆ ಲಿಂಗಾಯತರಿಗೆ ಇಬ್ಬರಿಗೂ ತಿಳಿಸಿತು. ಜೈನರು ಧರ್ಮದ ಕಾಲಂನಲ್ಲಿ ಜೈನ ಮತ್ತು ಮಹಾವೀರ ಧರ್ಮಗುರು ಎಂದು ಎಲ್ಲಾ ದಾಖಲಾತಿಗಳನ್ನು ನೀಡಿ 2014ರಲ್ಲಿ ಸ್ವತಂತ್ರಧರ್ಮದ ಮಾನ್ಯತೆ ಪಡೆದುಕೊಂಡರು.
ನಮಗೆ ಸುಪ್ರೀಂಕೋರ್ಟ್ ಕೇಳಿದ ಮೊದಲನೆ ಪ್ರಶ್ನೆ, ನಿಮ್ಮ ಧರ್ಮ ಯಾವುದು? ಅದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದವರು ವೀರಶೈವ ಧರ್ಮ ಎಂದರು. ಈ ಉತ್ತರಕ್ಕೆ ಸುಪ್ರೀಂಕೋರ್ಟ್ ಮರು ಪ್ರಶ್ನೆ ವೀರಶೈವ ಪದ ಸರ್ಕಾರದ ಯಾವ ದಾಖಲಾತಿಗಳಲ್ಲಿ ಇವೆ ತಂದು ತೋರಿಸಿ ಎಂದು ಪ್ರಶ್ನೆ ಮಾಡಿದಾಗ ಅ.ಭಾ.ವೀ.ಮಹಾಸಭಾ ಸರ್ಕಾರದ ಯಾವ ದಾಖಲಾತಿಗಳಲ್ಲಿ ಸಹ ವೀರಶೈವ ಪದ ಇಲ್ಲ ಎಂದರು.
ಎರಡನೇ ಪ್ರಶ್ನೆ, ನಿಮ್ಮ ಧರ್ಮಗುರು ಯಾರು? ಅ,ಭಾ,ವೀ,ಮ ಇವರ ಉತ್ತರ ಪಂಚಪಿಠಾದೀಪತಿಗಳು ಎಂದರು, ಸುಪ್ರೀಂಕೋರ್ಟ್ ಮರು ಪ್ರಶ್ನೆ ಧರ್ಮಕ್ಕೆ ಒಬ್ಬನೇ ಧರ್ಮಗುರು ಇರಲು ಸಾದ್ಯ, ಐವರಲ್ಲ ಎಂದಿತು, ಅದಕ್ಕೆ ರೇಣುಕಾಚಾರ್ಯರು ನಮ್ಮ ಧರ್ಮಗುರು ಎಂದರು..
ಅದಕ್ಕೆ ಸುಪ್ರೀಂಕೋರ್ಟಿನ ಮರು ಪ್ರಶ್ನೆ, ರೇಣುಕಾಚಾರ್ಯರ ತಂದೆ ತಾಯಿಯರ ಹೆಸರೆನು? ಇವರಲ್ಲಿ ಉತ್ತರವೆ ಇಲ್ಲ,ಏಕೆಂದರೆ ರೇಣುಕಾಚಾರ್ಯರು ಕಲ್ಲಿನಲ್ಲಿ ಹುಟ್ಟಿದ್ದವರು.
ಹೀಗೆ ಸುಪ್ರೀಂಕೋರ್ಟ್ ಕೇಳಿದ ಯಾವ ದಾಖಲೆಗಳೂ ಇಲ್ಲದ ಕಾರಣ ನಮಗೆ 2014 ರಲ್ಲಿ ಸುಲಭವಾಗಿ ಸಿಗಬಹುದಾಗಿದ್ದ ಧರ್ಮದ ಮಾನ್ಯತೆ ಕೈ ತಪ್ಪಿತು, ಒಂದುವೇಳೆ ನಮ್ಮ ಧರ್ಮ “ಲಿಂಗಾಯತ” ಧರ್ಮಗುರು “ಬಸವಣ್ಣನವರು”, ಧರ್ಮಗ್ರಂಥ “ವಚನ ಸಾಹಿತ್ಯ” ಎಂದಿದ್ದರೆ 2014ರಲ್ಲಿ ಜೈನರ ಜೊತೆಗೆ ನಮಗೂ ಧರ್ಮದ ಮಾನ್ಯತೆ ಸಿಕ್ಕಿರುತಿತ್ತು,
ಈಗಲೂ ಕಾಲ ಮಿಂಚಿಲ್ಲ. ಲಿಂಗಾಯತ ಸ್ವತಂತ್ರವಾದರೆ ನಿಮಗೆನಾದರೂ ತೊಂದರೆ ಇದೆಯೆ ಎಂದು ವೀರಶೈವರನ್ನು ಕೇಳಬೇಕು. ನಾವೆಲ್ಲರೂ ಸೇರಿ “ಲಿಂಗಾಯತ” ಎಂದು ಬರೆಸಿದರೆ ಕೇವಲ 3 ಕೋಟಿ ಜನಸಂಖ್ಯೆ ಹೊಂದಿರುವ ನಮಗೆ ಹಲವಾರು ಪ್ರಯೋಜನಗಳು ಮತ್ತು ಸೌಲಭ್ಯಗಳು ದೊರಕುವವು.
ನಾವು ಹಿಂದುಗಳು ಅಲ್ಲ ಎನ್ನಲು ಕೆಲವು ಉದಾಹರಣೆ:
1)ಹಿಂದುಗಳ ಪುರುಷರು ಮಾತ್ರ ಜನಿವಾರ ಧರಿಸಿಕೊಳ್ಳುವರು, ಲಿಂಗಾಯತರ ಸ್ತ್ರೀ, ಪುರುಷರಿಬ್ಬರೂ ಲಿಂಗವನ್ನು ಧರಿಸಿಕೊಳ್ಳುತ್ತೇವೆ.
2)ಹಿಂದುಗಳಲ್ಲಿ ದೇವರ ಪೂಜೆ ಗಂಡಸರು ಮಾತ್ರ ಮಾಡುವರು, ಲಿಂಗಾಯತರಲ್ಲಿ ಗಂಡಸರು, ಹೆಂಗಸರು ಇಬ್ಬರೂ ಪೂಜೆ ಮಾಡಬಹುದು.
3)ಹಿಂದುಗಳು ಮಾಂಸಹಾರಿ ಮತ್ತು ಸಸ್ಯಹಾರಿಗಳು, ಲಿಂಗಾಯತರು ಶುದ್ಧ ಸಸ್ಯಹಾರಿಗಳು,
4)ಹಿಂದುಗಳು ಯಾರಾದರೂ ಸತ್ತರೆ ಸುಡುವರು, ನಾವು ಲಿಂಗಾಯತರು ಹೂಳುತ್ತೇವೆ
5)ಹಿಂದುಗಳ ಮನೆಯಲ್ಲಿ ಯಾರಾದರೂ ಸತ್ತರೆ ತಲೆಯಲ್ಲಿ ಜುಟ್ಟು ಬಿಡುವರು, ನಮ್ಮ ಲಿಂಗಾಯತರ ಮನೆಯಲ್ಲಿ ಯಾರಾದರೂ ಸತ್ತರೆ ಜುಟ್ಟು ಬಿಡುವುದಿಲ್ಲ,
6)ಹಿಂದುಗಳು ಕುಂಡಲಿ ನೋಡುವರು, ಲಿಂಗಾಯತರಿಗೆ ಕುಂಡಲಿಯೆ ಇಲ್ಲ,
7)ಹಿಂದುಗಳು ಮದುವೆಯಲ್ಲಿ ಯಜ್ಞ-ಯಾಗ ಹೋಮ-ಹವನ ಮಾಡುವರು, ಲಿಂಗಾಯತರು ಮದುವೆಯನ್ನು ಸರಳ ಪೂಜೆಯೊಂದಿಗೆ ಮಾಡುಕೋಳ್ಳುತ್ತೇವೆ,
ಭಾರತದಲ್ಲಿ ಇರುವವರೆಲ್ಲಾ ಹಿಂದುಗಳು ಎಂದು ಕೆಲವ್ರು ಹೇಳುತ್ತಾರೆ. ಇದು ಸತ್ಯವಾಗಿದ್ದರೆ ನಮ್ಮ ದೇಶದಲ್ಲಿ ಹಿಂದು ಧರ್ಮ, ಕ್ರಿಶ್ಚಿಯನ ಧರ್ಮ ಮತ್ತು ಮುಸ್ಲಿಮ್ ಮೂರೆ ಧರ್ಮಗಳು ಇರಬೇಕಿತ್ತು.
ನಮ್ಮ ದೇಶದ ಧರ್ಮಗಳಾದ ಬೌದ್ಧ ಧರ್ಮ, ಸಿಖ್ ಧರ್ಮ, ಪಾರ್ಸಿ ಧರ್ಮ ಮತ್ತು ಜೈನ ಧರ್ಮಗಳಿಗೆ ಸ್ವತಂತ್ರ ಮಾನ್ಯತೆ ಏಕೆ ಕೊಡಬೇಕಿತ್ತು? ಇದಕ್ಕೆ ಉತ್ತರವೆಂದರೆ ಬೌದ್ಧ, ಜೈನ, ಸಿಖ್, ಪಾರ್ಸಿ ಇವರಿಗೆಲ್ಲರಿಗೂ ಧರ್ಮಗುರು ಇದ್ದಾರೆ, ಧರ್ಮಗ್ರಂಥ ಇದೆ, ಧರ್ಮಭಾಷೆ ಇದೆ, ಧರ್ಮದ ಆಚರಣೆಗಳು ವಿಭಿನ್ನವಾಗಿದೆ, ಧರ್ಮ ಲಾಂಛನಗಳು ವಿಭಿನ್ನವಾಗಿದೆ. ಈ ಕಾರಣಗಳಿಂದ ಇವುಗಳಿಗೆ ಸ್ವತಂತ್ರ ಧರ್ಮದ ಮಾನ್ಯತೆ ಕೊಟ್ಟಿದ್ದಾರೆ.
ಈ ಧರ್ಮಗಳಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ಸಿಕ್ಕಿ, ಕೇಂದ್ರ ಸರಕಾರದಿಂದ ಎಲ್ಲಾ ಸವಲತ್ತುಗಳು ಸಿಗುತ್ತಿದೆ, ಈ ಸವಲತ್ತುಗಳು ನಮ್ಮ ಲಿಂಗಾಯತ ಧರ್ಮಕ್ಕೆ ಬೇಡವೆ? ಲಿಂಗಾಯತರಿಗೆ ಧರ್ಮಗುರು “ಬಸವಣ್ಣನವರು” ಧರ್ಮಭಾಷೆ “ಕನ್ನಡ” ಇದೆ ಧರ್ಮಗ್ರಂಥ “ವಚನ ಸಾಹಿತ್ಯ” ಇದೆ ಮುಖ್ಯವಾಗಿ ಶರಣರೆಲ್ಲ ಸೇರಿ ಕಟ್ಟಿದ “ಲಿಂಗಾಯತ” ಧರ್ಮ ಇದೆ, ಧರ್ಮಾಚರಣೆ, ಸಂಸ್ಕಾರ ವಿಭಿನ್ನವಾಗಿದೆ.
ನಮ್ಮ ಲಿಂಗಾಯತ ಧರ್ಮ, ಶರಣರ ಧರ್ಮ, ಸತ್ಯ ಶುಧ್ಧ ಕಾಯಕ ಮಾಡುವ ಧರ್ಮ, ದಾಸೋಹ ಧರ್ಮ, ಸಮಾನತೆಯ ಧರ್ಮ, ಗಂಡು ಹೆಣ್ಣು ಎರಡೆ ಜಾತಿ ಎನ್ನುವ ಧರ್ಮ, ಸರ್ವರನ್ನೂ ಅಪ್ಪಿಕೊಳ್ಳುವ ಧರ್ಮ, ಸಕಲ ಜೀವಾತ್ಮಗಳಿಗೆ ಲೇಸನ್ನ ಬಯಸುವ ಧರ್ಮ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಧರ್ಮ, ಮತ್ತು ಪ್ರಪ್ರಥಮ ಜಗತ್ತಿಗೆ ಸಂವಿಧಾನ ಕೊಟ್ಟಂತ ಧರ್ಮ.
ಇಷ್ಟಿದ್ದರೂ ಲಿಂಗಾಯತ ಈ ಧರ್ಮಕ್ಕೆ ಇಲ್ಲಿಯವರೆಗೆ ಸ್ವತಂತ್ರ ಮಾನ್ಯತೆ ಸಿಕ್ಕಿಲ್ಲ ಎಂದರೆ ನಮಗೆಲ್ಲ ನಾಚಿಕೆ ಆಗಬೇಕು.